ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

August 14, 2018

ಚಾಮರಾಜನಗರ: ಖಾಯಂ ನೌಕರರನ್ನಾಗಿ ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ನೌಕರರು, ಅಕ್ಷರ ದಾಸೋಹ ಅಡುಗೆಯವರು, ಸಹಾಯಕಿ ಯರು ಹಾಗೂ ಕಂಪ್ಯೂಟರ್ ಆಪರೇ ಟರ್ಸ್‍ಗಳು ಪ್ರತಿಭಟನೆ ನಡೆಸಿದರು.

ಹಳೇ ಖಾಸಗಿ ಬಸ್ ನಿಲ್ದಾಣದಿಂದ ಮೆರ ವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಬಳಿಕ, ಯಳಂದೂರು ತಹಶೀಲ್ದಾರ್ ಚಂದ್ರ ಮೌಳಿ ಅವರಿಗೆ ಮನವಿ ಸಲ್ಲಿಸಿದರು.
ನೋಟಿಫಿಕೇಷನ್ ನಂ.ಕೆಎಇ 152 ಎಲ್‍ಎಂಡಬ್ಲ್ಯು 2008, ಬೆಂಗಳೂರು ದಿನಾಂಕ 21-02-2011ರ ಆದೇಶವನ್ನು ಅನು ಷ್ಠಾನಕ್ಕೆ ತರಬೇಕು. ಈ ಆದೇಶದಂತೆ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿ ನೊಳಗೆ ನೀಡಬೇಕು. ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರುವವರನ್ನು ಖಾಯಂ ಗೊಳಿಸಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ಕಾಯ್ದೆ ಅನ್ವಯ ವೇತನ ನೀಡ ಬೇಕು. ಹೆರಿಗೆ ರಜಾ ನೀಡಬೇಕು. ಶಾಲೆ ಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಕೆಲಸದಿಂದ ತೆಗೆದಿರುವವರನ್ನು ಮರು ನೇಮಕ ಮಾಡಬೇಕು. 5 ವರ್ಷ ಖಾಸಗಿ ಶಾಲೆಯವರಿಗೆ ಶಾಲೆಗಳನ್ನು ತೆರೆಯಲು ಪರವಾನಗಿ ನೀಡಬಾರದು ಎಂದು ಅಕ್ಷರ ದಾಸೋಹ ಹಾಗೂ ಅಡಿಗೆಯವರು, ಸಹಾಯಕಿಯರು ಆಗ್ರಹಿಸಿದರು.
ಸರ್ಕಾರದ ಆದೇಶದಂತೆ ವೇತನ ಮತ್ತು ಬಾಕಿ ವೇತನವನ್ನು ನೀಡಬೇಕು ಎಂದು ಕಂಪ್ಯೂಟರ್ ಅಪರೇಟರ್ಸ್‍ಗಳು ಒತ್ತಾಯಿ ಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಧ್ಯಕ್ಷ ಕೆ.ಎಸ್.ಪ್ರಕಾಶ್, ತಾಲೂಕು ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಧರ್ಮರಾಜು, ಮುಖಂಡರಾದ ಕೆಂಪಣ್ಣ, ಕೆ.ಮಲ್ಲಯ್ಯ, ರತ್ನಮ್ಮ, ಜಯಮ್ಮ, ವಸಂತ, ವಿಶಾಲಾಕ್ಷಿ, ಹೇಮಾವತಿ ಪಾಲ್ಗೊಂಡಿದ್ದರು.

Translate »