ಆಯಿಷ್ ನೂತನ ನಿರ್ದೇಶಕಿಯಾಗಿ ಡಾ. ಎಂ. ಪುಷ್ಪಾವತಿ: ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕಾರ
ಮೈಸೂರು

ಆಯಿಷ್ ನೂತನ ನಿರ್ದೇಶಕಿಯಾಗಿ ಡಾ. ಎಂ. ಪುಷ್ಪಾವತಿ: ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕಾರ

August 14, 2018

ಮೈಸೂರು: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ವಾಕ್ ಭಾಷಾ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕರಾದ ಡಾ.ಎಂ.ಪುಷ್ಪಾವತಿ ಅವರನ್ನು ಆಯಿಷ್‍ನ ನೂತನ ನಿರ್ದೇಶಕಿಯಾಗಿ ನವದೆಹಲಿಯ ಸಿಬ್ಬಂದಿ ಮತ್ತು ತರಬೇತಿ ಸಂಸ್ಥೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಅಪಾಯಿಂಟ್‍ಮೆಂಟ್ ಕಮಿಟಿ ಆಫ್ ದಿ ಕ್ಯಾನಿನೆಟ್ (ಎಸಿಸಿ) ಯಿಂದ ನೇಮಕಾತಿ ಆದೇಶಕ್ಕೆ ಅನುಮೋದನೆ ದೊರೆತ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.

ಡಾ. ಎಂ.ಪುಷ್ಪಾವತಿ ಅವರು ಅಕ್ಟೋಬರ್ 17, 2018 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಮೇ 31, 2030 ರವರೆಗೆ ಅಧಿಕೃತವಾಗಿ ತಮ್ಮ ಕರ್ತವ್ಯವನ್ನು ಮುಂದುವರೆಸಲಿದ್ದಾರೆ. ಈ ಸಂಸ್ಥೆಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಈ ಸಂಬಂಧ, ಜುಲೈ 25, 2018 ರಂದು ಸ್ಥಾನಿಕ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ಅವರಿಗೆ ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರೇಮ್ ನರೇನ್ ಮಾಹಿತಿ ಕಳುಹಿಸಿದ್ದಾರೆ.

ವ್ಯಕ್ತಿ ಪರಿಚಯಪ್ರೊ. ಎಂ. ಪುಷ್ಪಾವತಿ ಅವರು 1996 ರಂದು ಮೈಸೂರಿನ ಆಯಿಷ್ ಸಿಬ್ಬಂದಿಯಾಗಿ ಸೇರ್ಪಡೆಗೊಂಡು, ಪ್ರಸ್ತುತ ವಾಕ್ ಭಾಷಾ ಪೆಥಾಲಜಿ ಪ್ರಾಧ್ಯಾಪಕರಾಗಿ ಮತ್ತು ವಿಶೇಷ ಶಿಕ್ಷಣದ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾಕ್ ಮತ್ತು ಶ್ರವಣ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ ಪಡೆದಿದ್ದಾರೆ. ಅಲ್ಲದೆ, ವಿಶೇಷವಾಗಿ ಧ್ವನಿ ಮತ್ತು ಮಾತಿನ ವಿಕಲಚೇತನರು ಓರಾಫೇಷಿಯಲ್ ಮತ್ತು ಅನಾಮಲೀಸ್‍ಗೆ ಸಂಬಂಧಿಸಿದ ರೋಗಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ ಕ್ಷೇತ್ರವಾಗಿದೆ.

ಡಾ. ಪುಷ್ಪಾವತಿ ಅವರು ಸಂವಹನ ವಿಕಲಚೇತನರಾದವರೊಂದಿಗೆ ಪುನರ್ವಸತಿಗಾಗಿ ಅಂತರ-ಶಿಸ್ತು ಸಂಶೋಧನೆಗಾಗಿ ಕ್ಲಿನಿಕ್ ಸಂಬಂಧಪಟ್ಟಂತೆ ರಾಜ್ಯದಲ್ಲೇ ಮೊದಲ ಬಾರಿಗೆ ಅಭಿವೃದ್ಧಿಶೀಲ ಸಾಧನವಾಗಿದ್ದಾರೆ. ಪ್ರಸ್ತುತ ಅವರು, ಸೀಳು ತುಟಿ ಮತ್ತು ಅಂಗುಳಿನಿಂದ ಬಳಲುತ್ತಿರುವ ವ್ಯಕ್ತಿಯ ವಾಕ್ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸಿದ್ದಾರೆ.

Translate »