Tag: Chamarajanagar

ಆನೆಮಡು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಆನೆಮಡು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ

January 2, 2020

ಚಾಮರಾಜನಗರ, ಜ.1- ಆನೆಮಡುವಿನ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ಉಡಿಗಾಲ, ವೀರನಪುರ, ಕಡುವಿನಕಟ್ಟೆಹುಂಡಿ ಗ್ರಾಮಸ್ಥರು ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಉಡಿಗಾಲ ಸಮೀಪ ಕೆರೆಗೆ ನೀರು ಹರಿಸುವ ಪೈಪ್‍ಲೈನ್ ಇರುವ ಚಾಮ ರಾಜನಗರ- ಗುಂಡ್ಲುಪೇಟೆ ಮುಖ್ಯರಸ್ತೆ ಯಲ್ಲಿ ಜಮಾಯಿಸಿದ ರೈತರು ಕೆಲಕಾಲ ರಸ್ತೆ ತಡೆ ನಡೆಸಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆ ದಾರರ ಜತೆ ಈಚೆಗೆ ಪೈಪ್‍ಲೈನ್ ಕಾಮ ಗಾರಿ ವೀಕ್ಷಣೆ ಮಾಡಿದ್ದ ಶಾಸಕ ಸಿ.ಪುಟ್ಟ ರಂಗಶೆಟ್ಟಿ ಹೊಸ ವರ್ಷದ ದಿನ ಪೈಪ್‍ಲೈನ್…

ಸಂತೇಮರಹಳ್ಳಿ-ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಸಂತೇಮರಹಳ್ಳಿ-ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

January 2, 2020

ಚಾಮರಾಜನಗರ, ಜ.1- ತೀವ್ರ ಹದಗೆಟ್ಟಿರುವ ಸಂತೇಮರಹಳ್ಳಿ- ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮಾಜಿ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಸಂತೇಮರಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಸಂತೇಮರಹಳ್ಳಿಯ ಪ್ರವಾಸಿ ಮಂದಿರದಿಂದ ಸಮೀಪದ ವೃತ್ತದ ತನಕ ಮಾಜಿ ಸಂಸದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಂಚಾರ ತಡೆ ನಡೆಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಧ್ರುವನಾರಾಯಣ್ ಮಾತನಾಡಿ, 10 ಕಿ.ಮೀ….

ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ : ರೈತ, ಸೈನಿಕರ ನಿಸ್ವಾರ್ಥ ಸೇವೆಯಿಂದ ನಮಗೆ ನೆಮ್ಮದಿ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ : ರೈತ, ಸೈನಿಕರ ನಿಸ್ವಾರ್ಥ ಸೇವೆಯಿಂದ ನಮಗೆ ನೆಮ್ಮದಿ

December 24, 2019

ಗುಂಡ್ಲುಪೇಟೆ, ಡಿ.23(ಸೋಮ್.ಜಿ)- ರೈತರ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಧ್ಯೇಯವಾಗಿದೆ. ರೈತ ಹಾಗೂ ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ. ಅವರ ನಿಸ್ವಾರ್ಥ ಸೇವೆಯಿಂದ ನಾವು ಸುಖ ವಾಗಿದ್ದೇವೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ಮತ್ತು ರೈತ ಸಂಘದ ವತಿಯಿಂದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ದೇಶದ ಬೆನ್ನೆಲುಬು ರೈತ. ಈತ ಮುನಿಸಿಕೊಂಡರೆ ಯಾರಿಗೂ ಆಹಾರ ದೊರಕುವುದಿಲ್ಲ. ಆದ್ದರಿಂದ ರೈತರ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ನಮ್ಮ…

ಆರೋಗ್ಯವಂತ ಸಮಾಜಕ್ಕೆ ಎಲ್ಲರ ಸಹಕಾರ ಅಗತ್ಯ
ಚಾಮರಾಜನಗರ

ಆರೋಗ್ಯವಂತ ಸಮಾಜಕ್ಕೆ ಎಲ್ಲರ ಸಹಕಾರ ಅಗತ್ಯ

December 24, 2019

ಯಳಂದೂರು, ಡಿ.23(ವಿ.ನಾಗರಾಜು)- ಆರೋಗ್ಯ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಎಸ್. ಬಾಲರಾಜು ಕರೆ ನೀಡಿದರು. ಅವರು ಭಾನುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಸ್. ಬಾಲರಾಜು ಸ್ನೇಹ ಬಳಗ, ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಳ್ಳೆ ಕಾರ್ಯಗಳನ್ನು ಮಾಡಬೇಕಾದರೆ ಇದಕ್ಕೆ ಇಂತಹದೆ ದಿನ, ಸಮಯವನ್ನು ನಿಗದಿ ಮಾಡಿಕೊಳ್ಳಬಾರದು. ತಕ್ಷಣವೇ ಇದರ ಬಗ್ಗೆ ಕಾರ್ಯಪ್ರವೃತ್ತ ರಾಗಬೇಕು. ಇದೊಂದು ಸೇವಾ ಕಾರ್ಯವಾಗಿದ್ದು…

ಡಿ. 27, ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ
ಚಾಮರಾಜನಗರ

ಡಿ. 27, ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ

December 24, 2019

ಚಾಮ ರಾಜನಗರ, ಡಿ.23- ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಹಣ ಎಣಿಕೆ ಕಾರ್ಯವು ಡಿ.27 ರಂದು ಬೆಳಿಗ್ಗೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಹಯೋಗದೊಂದಿಗೆ ನಡೆಯಲಿದೆ ಎಂದು ಶ್ರೀ ಮಲೆ ಮಹ ದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಗೃಹಿಣಿಗೆ ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ ಮೂವರಿಗೆ ಜೀವಾವಧಿ ಶಿಕ್ಷೆ
ಚಾಮರಾಜನಗರ

ಗೃಹಿಣಿಗೆ ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

December 17, 2019

ಅತ್ತೆ, ವಾರಗಿತ್ತಿ, ಮೈದುನನಿಗೆ ಶಿಕ್ಷೆ, ಮಾವ, ಭಾವ ದೋಷಮುಕ್ತ ಚಾಮರಾಜನಗರ, ಡಿ.16(ಎಸ್‍ಎಸ್)- ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಗೃಹಿಣಿಯ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣವಾಗಿದ್ದ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬೆಳ್ಳಮ್ಮ (ಗೃಹಿಣಿಯ ಅತ್ತೆ), ದೊಡ್ಡಮ್ಮ (ವಾರಗಿತ್ತಿ), ರಮೇಶ್ (ಮೈದುನ) ಶಿಕ್ಷೆಗೆ ಗುರಿಯಾದವರು. ಚಿಕ್ಕಮಾದಶೆಟ್ಟಿ (ಮಾವ), ರಂಗಸ್ವಾಮಿ (ಭಾವ) ದೋಷಮುಕ್ತಗೊಂಡಿದ್ದಾರೆ. ಏನಿದು ಪ್ರಕರಣ:…

ಜಿಲ್ಲಾ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಚಾಲನೆ
ಚಾಮರಾಜನಗರ

ಜಿಲ್ಲಾ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಚಾಲನೆ

December 17, 2019

ಚಾಮರಾಜನಗರ, ಡಿ.16- ಆರ್ಥಿಕ ಗಣತಿಯಿಂದ ದೇಶದ ಪ್ರಗತಿಯ ಸೂಚ್ಯಂಕ ಗಳಾದ ರಾಷ್ಟ್ರೀಯ ತಲಾ ಆದಾಯ, ಜಿಡಿಪಿಗಳು ತಿಳಿಯುವುದರಿಂದ, ಗಣತಿ ದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ, ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲೆಯ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್ಥಿಕ ಗಣತಿಯು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳ ಸಂಘಟಿತ ಮತ್ತು ಅಸಂಘಟಿಕ ವಲಯ…

ಪಾಂಡಿಚೇರಿ ಬೀಚ್‍ನಲ್ಲಿ ಚಾಮರಾಜನಗರ ಯುವಕ ಸಾವು
ಚಾಮರಾಜನಗರ

ಪಾಂಡಿಚೇರಿ ಬೀಚ್‍ನಲ್ಲಿ ಚಾಮರಾಜನಗರ ಯುವಕ ಸಾವು

December 17, 2019

ಚಾಮರಾಜನಗರ, ಡಿ.16(ಎಸ್‍ಎಸ್)- ತಾಲೂಕಿನ ಹರವೆ ಗ್ರಾಮದ ಯುವಕ ನೋರ್ವ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಪಾಂಡಿಚೇರಿ ಬೀಚ್‍ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು (26) ಮೃತಪಟ್ಟ ಯುವಕ. ದೀಪು ಬೆಂಗಳೂರಿನ ಕಂಪನಿ ಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. 8 ಮಂದಿ ಸ್ನೇಹಿತರ ಜೊತೆ ಪಾಂಡಿಚೇರಿಗೆ ಪ್ರವಾಸಕ್ಕೆ ತೆರಳಿದ್ದ. ಈ ವೇಳೆ ಬೀಚ್‍ನಲ್ಲಿ ಆಟವಾಡುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇನ್ನೂ ಮೂವರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಓರ್ವ ಯುವತಿಯ…

ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್
ಚಾಮರಾಜನಗರ

ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್

December 17, 2019

ಚಾಮರಾಜನಗರ, ಡಿ.16- ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು, ಮಾರಾಟದ ಮೇಲಿನ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಕೋಟ್ಪಾ-2003 ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂ ತ್ರಣ ಘಟಕದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003ರ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು…

ಟೋಲ್ ಸಂಗ್ರಹ: ಸಾರಿಗೆ ಬಸ್ ದರ ಹೆಚ್ಚಳ
ಚಾಮರಾಜನಗರ

ಟೋಲ್ ಸಂಗ್ರಹ: ಸಾರಿಗೆ ಬಸ್ ದರ ಹೆಚ್ಚಳ

December 11, 2019

ಚಾಮರಾಜನಗರ, ಡಿ.10- ಮೈಸೂರು- ನಂಜನಗೂಡು ಹಾಗೂ ಟಿ.ನರಸೀಪುರ-ಮೈಸೂರು ಮಾರ್ಗದಲ್ಲಿ ಟೋಲ್ ಸಂಗ್ರಹ ಆರಂಭವಾಗಿರುವುದು ಜಿಲ್ಲೆಯಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರುಯಾಣಿಸುತ್ತಿರುವ ಪ್ರಯಾಣಿಕರಿಗೂ ಅದರ ಬಿಸಿ ತಟ್ಟಿದೆ. ಮೈಸೂರು-ನಂಜನಗೂಡು ನಡುವಿನ ಕೆ.ಎನ್.ಹುಂಡಿ ಬಳಿ ಹಾಗೂ ತಿ.ನರಸೀಪುರ- ಮೈಸೂರು ನಡುವಿನ ಯಡದೊರೆ ಬಳಿ ಟೋಲ್ ಸ್ಥಾಪಿಸಲಾಗಿದೆ. ಇಲ್ಲಿ ಭಾನು ವಾರ ಮಧ್ಯಾಹ್ನದಿಂದ ಶುಲ್ಕ ಸಂಗ್ರಹಿ ಸಲಾಗುತ್ತದೆ. ಕೆಎಸ್‍ಆರ್‍ಟಿಸಿ ಬಸ್‍ಗೆ ಟ್ರಿಪ್‍ವೊಂದಕ್ಕೆ 80 ರೂ. ನಿಗಧಿಗೊಳಿಸ ಲಾಗಿದ್ದು, ಈ ಹಿನ್ನಲೆಯಲ್ಲಿ ಬಸ್ ದರವನ್ನು ಮಂಗಳವಾರದಿಂದ 4 ರಿಂದ 5 ರೂ. ದರ…

1 3 4 5 6 7 74
Translate »