ಪಾಂಡಿಚೇರಿ ಬೀಚ್‍ನಲ್ಲಿ ಚಾಮರಾಜನಗರ ಯುವಕ ಸಾವು
ಚಾಮರಾಜನಗರ

ಪಾಂಡಿಚೇರಿ ಬೀಚ್‍ನಲ್ಲಿ ಚಾಮರಾಜನಗರ ಯುವಕ ಸಾವು

December 17, 2019

ಚಾಮರಾಜನಗರ, ಡಿ.16(ಎಸ್‍ಎಸ್)- ತಾಲೂಕಿನ ಹರವೆ ಗ್ರಾಮದ ಯುವಕ ನೋರ್ವ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಪಾಂಡಿಚೇರಿ ಬೀಚ್‍ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು (26) ಮೃತಪಟ್ಟ ಯುವಕ. ದೀಪು ಬೆಂಗಳೂರಿನ ಕಂಪನಿ ಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. 8 ಮಂದಿ ಸ್ನೇಹಿತರ ಜೊತೆ ಪಾಂಡಿಚೇರಿಗೆ ಪ್ರವಾಸಕ್ಕೆ ತೆರಳಿದ್ದ. ಈ ವೇಳೆ ಬೀಚ್‍ನಲ್ಲಿ ಆಟವಾಡುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇನ್ನೂ ಮೂವರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಓರ್ವ ಯುವತಿಯ ಸ್ಥಿತಿ ಚಿಂತಾಜನಕ ವಾಗಿದೆ ಎಂದು ತಿಳಿದು ಬಂದಿದ್ದು, ಇಬ್ಬರು ಯುವಕರು ಪಾಂಡಿಚೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೃತ ದೀಪು ಶವವನ್ನು ಆತನ ಸ್ವಗ್ರಾಮ ಹರವೆ ಗ್ರಾಮಕ್ಕೆ ಭಾನುವಾರ ರಾತ್ರಿ ತರಲಾಯಿತು. ಸೋಮವಾರ ಬೆಳಿಗ್ಗೆ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತ ಅವಿವಾಹಿತನಾಗಿದ್ದು, ಈ ದುರ್ಘಟನೆಯಿಂದ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

 

Translate »