ಗೃಹರಕ್ಷಕ ದಳದ ನಿಷ್ಠೆ, ಪ್ರಾಮಾಣಿಕತೆ ಮಾದರಿ
ಮೈಸೂರು

ಗೃಹರಕ್ಷಕ ದಳದ ನಿಷ್ಠೆ, ಪ್ರಾಮಾಣಿಕತೆ ಮಾದರಿ

December 17, 2019

ಯಳಂದೂರು, ಡಿ.16- ಗೃಹ ರಕ್ಷಕ ದಳದ ಸಿಬ್ಬಂದಿ ನಿಷ್ಠೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಎನ್.ಮಹೇಶ್ ಬಣ್ಣಿಸಿದರು.ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಗೃಹ ರಕ್ಷಕ ದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸಿಬ್ಬಂದಿ ಗಳಿಗಿಂತಲೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಗೃಹ ರಕ್ಷಕ ಸಿಬ್ಬಂದಿ ಗಳಿಗೆ ಯಾವುದೇ ಭದ್ರತೆ ಇಲ್ಲ. ದಿನಗೂಲಿ ನೌಕರರ ರೀತಿಯಲ್ಲಿ ಕೆಲಸ ನಿರ್ವಹಿಸು ತ್ತಿದ್ದಾರೆ. ದೇಶಾದ್ಯಂತ ಸುಮಾರು 6 ಲಕ್ಷ ಗೃಹ ರಕ್ಷಕ ಸಿಬ್ಬಂದಿಗಳಿದ್ದಾರೆ ಆದರೆ, ತಿಂಗಳಲ್ಲಿ 10 ರಿಂದ 15 ದಿನಗಳು ಮಾತ್ರ ಕೆಲಸ ಇರುತ್ತದೆ. ಆದರೆ, ಹಬ್ಬ ಹರಿದಿನ ಸೇರಿದಂತೆ ಚುನಾವಣೆ ಸಂದರ್ಭದಲ್ಲಿ ಪೊಲೀಸರಿಗಿಂತ ಗೃಹರಕ್ಷಕರೇ ಹೆಚ್ಚಾಗಿ ಗಣೇಶ ವಿಸರ್ಜನೆ, ಹೆಲ್ಮೆಟ್ ತಪಾಸಣೆ, ಟ್ರಾಫಿಕ್ ಸೇರಿದಂತೆ ಇತರೆ ಕೆಲಸ ಕಾರ್ಯ ಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಇವರು ಒಂದು ದಿನ ಕೆಲಸ ನಿರ್ವಹಿಸಿದರೆ 370 ರೂ ನೀಡಲಾಗುತ್ತದೆ ಎಂದು ಹೇಳಿದರು. ಮಹಿಳಾ ಸಿಬ್ಬಂದಿಗಳಿಗೆ ತುಂಬಾ ತೊಂದರೆ ಉಂಟಾಗಿದೆ. ಗೃಹ ರಕ್ಷಕ ಇಲಾಖೆಗೆ ಪ್ರತ್ಯೇಕವಾಗಿ ಒಂದು ಕಚೇರಿ ನಿರ್ಮಿಸಿ ಕೊಡಬೇಕು ಪಟ್ಟಣ ಪಂಚಾಯಿತಿ ವತಿಯಿಂದ ಹಳೇ ಪಟ್ಟಣ ಪಂಚಾಯಿತಿ ಕಚೇರಿ ಖಾಲಿ ಇರುವುದರಿಂದ ಅ ಕೊಠಡಿ ಯನ್ನು ಗೃಹರಕ್ಷಕರಿಗೆ ನೀಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.

ಮುಂದಿನ ವರ್ಷ ಏಪ್ರಿಲ್ ತಿಂಗಳಿಂದ ಭತ್ಯೆಯನ್ನು ದಿನಕ್ಕೆ 750 ರೂ. ನೀಡು ವಂತೆ ಆದೇಶ ನೀಡಬೇಕು ಎಂದು ಆದೇಶ ಮಾಡಲಾಗಿದೆ. ತಿಂಗಳಲ್ಲಿ 20 ರಿಂದ 25 ದಿನಗಳು ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಕೆಲವರು ಬಿಎ. ವ್ಯಾಸಂಗ ಮಾಡಿ ಕೆಲಸ ಇಲ್ಲದೆ ಗೃಹ ರಕ್ಷಕ ದಳಕ್ಕೆ ಸೇರಿಕೊಂಡಿದ್ದಾರೆ. ಅಂಥವರು ಪೊಲೀಸ್ ಇಲಾಖೆಗೆ ಆಯ್ಕೆ ಮಾಡಿ ಕೊಳ್ಳಲು ಅರ್ಜಿ ಆಹ್ವಾನ ನೀಡಿದಾಗ ಭಾಗವಹಿಸಿ ಅದರಲ್ಲಿ ಉತ್ತೀರ್ಣರಾದರೆ ಪೊಲೀಸ್ ಕೆಲಸ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 40 ಕ್ಕೂ ಹೆಚ್ಚು ಮಂದಿ ಗೃಹ ರಕ್ಷಕ ಸಿಬ್ಬಂದಿಯನ್ನು ಸನ್ಮಾನಿಸ ಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ವರ್ಷ, ಆರಕ್ಷಕ ಉಪಾಧೀಕ್ಷಕ ಕೊಳ್ಳೇ ಗಾಲ ಎನ್.ನವೀನ್‍ಕುಮಾರ್, ಜಿಲ್ಲಾ ಕಮಾಂಡೆಂಟ್ ಬಿ.ಎಸ್ ಬಸವರಾಜು, ಪಿಎಸ್‍ಐ ರವಿಕುಮಾರ್ ಮತ್ತು ಗೃಹ ರಕ್ಷಕ ಸಿಬ್ಬಂದಿಗಳು ಹಾಜರಿದ್ದರು.

Translate »