ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ : ರೈತ, ಸೈನಿಕರ ನಿಸ್ವಾರ್ಥ ಸೇವೆಯಿಂದ ನಮಗೆ ನೆಮ್ಮದಿ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ : ರೈತ, ಸೈನಿಕರ ನಿಸ್ವಾರ್ಥ ಸೇವೆಯಿಂದ ನಮಗೆ ನೆಮ್ಮದಿ

December 24, 2019

ಗುಂಡ್ಲುಪೇಟೆ, ಡಿ.23(ಸೋಮ್.ಜಿ)- ರೈತರ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಧ್ಯೇಯವಾಗಿದೆ. ರೈತ ಹಾಗೂ ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ. ಅವರ ನಿಸ್ವಾರ್ಥ ಸೇವೆಯಿಂದ ನಾವು ಸುಖ ವಾಗಿದ್ದೇವೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ಮತ್ತು ರೈತ ಸಂಘದ ವತಿಯಿಂದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ದೇಶದ ಬೆನ್ನೆಲುಬು ರೈತ. ಈತ ಮುನಿಸಿಕೊಂಡರೆ ಯಾರಿಗೂ ಆಹಾರ ದೊರಕುವುದಿಲ್ಲ. ಆದ್ದರಿಂದ ರೈತರ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ನಮ್ಮ ಸರ್ಕಾರ ರೈತರ ಪರವಾಗಿದ್ದು, ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದರು. ಇತ್ತೀಚೆಗೆ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ರೈತರು ಇವುಗಳನ್ನು ಬೆಳೆ ಯುವ ಮೂಲಕ ತಮ್ಮ ಹಾಗೂ ಸಮಾಜದ ಆರೋಗ್ಯ ಕಾಪಾಡಬೇಕು ಎಂದರು.

ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಲು 212 ಕೋಟಿ ರೂಪಾಯಿ ನೀಡಿದ್ದರು. ಇತ್ತೀಚಿಗೆ ಮುಂದುವರೆದ ಯೋಜನೆಯಲ್ಲಿ ವಡ್ಡಗೆರೆ, ಕರಕಲಮಾದ ಹಳ್ಳಿ, ಯರಿಯೂರು, ದಾರಿಬೇಗೂರು, ಬೊಮ್ಮಲಾಪುರ, ವಡೆಯನಪುರ, ಕಲ್ಲುಕಟ್ಟೆ ಹಳ್ಳ, ಜಯಪುರ ಅಮಾನಿಕೆರೆ ಹಾಗೂ ದೊಡ್ಡಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ರಾಘವಾಪುರ ಹಾಗೂ ಹಳ್ಳದ ಮಾದ ಹಳ್ಳಿ ಕೆರೆಗಳಿಗೂ ನೀರು ಹರಿಸಲಾಗುವುದು. ಇತ್ತೀಚೆಗೆ ಬೆಳವಾಡಿ ಹಾಗೂ ನಲ್ಲೂರು ಅಮಾನಿಕೆರೆಗಳನ್ನೂ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದ್ದು, ವಿನಕಾರಣ ಟೀಕೆ ಮಾಡುವುದು ಕೈಬಿಟ್ಟು ಕೆರೆಗಳನ್ನು ತುಂಬಿಸಲು ಸಹಕಾರ ನೀಡಿ. ರೈತರ ಏಳಿಗೆಗೆ ಟೀಕಾ ಕಾರರು ಸಹ ಶ್ರಮಿಸಿ ಎಂದರು.

ಆಕರ್ಷಕ ಮೆರವಣಿಗೆ: ವೇದಿಕೆ ಕಾರ್ಯ ಕ್ರಮಕ್ಕೂ ಮುನ್ನಾ ಪಟ್ಟಣದ ಪ್ರವಾಸಿ ಮಂದಿರ ದಿಂದ ಬ್ಯಾಂಡ್ ವಾದನ, ಗೊರವರ ಕುಣಿತ, ಮರಗಾಲು ನಡಿಗೆ ಹಾಗೂ ಜನಪದ ಕಲಾತಂಡಗಳ ಜತೆ ವಿಜೃಂಭಣೆ ಯಿಂದ ರೈತ ಮುಖಂಡ ಪ್ರೊ. ನಂಜುಂಡ ಸ್ವಾಮಿ ಅವರ ಭಾವಚಿತ್ರವನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಾಲ್ವರು ಹಿರಿಯ ರೈತರನ್ನು ಸನ್ಮಾನಿಸಲಾುತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಮಹೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಎಪಿಎಂಸಿ ಅಧ್ಯಕ್ಷ ಮೃತ್ಯುಂಜಯಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ತಹಶೀಲ್ದಾರ್ ಜೆ.ನಂಜುಂಡಯ್ಯ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬಿಜೆಪಿ ಮುಖಂಡರಾದ ಎನ್.ಮಲ್ಲೇಶ್, ಎಸ್. ಗೋವಿಂದರಾಜನ್, ನಾಗೇಶ್, ರೈತ ಮುಖಂಡರಾದ ಕಡಬೂರು ಮಂಜುನಾಥ್, ಮಾಡ್ರಹಳ್ಳಿ ಮಹದೇವಪ್ಪ ಸೇರಿದಂತೆ ರೈತ ಸಂಘ ಮತ್ತು ಹಸಿರು ಸೇನೆ ಪದಾ ಧಿಕಾರಿಗಳು ಭಾಗವಹಿಸಿದ್ದರು.

Translate »