ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದ ಹಾಲು ಉತ್ಪಾದ ಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ನಾಗೇಶ್‍ರಾಜೇ ಅರಸ್ ಮತ್ತು ಉಪಾಧ್ಯಕ್ಷರಾಗಿ ಬಸವರಾಜು ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್‍ರಾಜೇ ಅರಸ್ ಮತ್ತು ಬಸವರಾಜಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜು ಮತ್ತು ಸೋಮಣ್ಣ ನಾಮಪತ್ರ ಸಲ್ಲಿಸಿದರು. ಚುನಾವಣಾಧಿ ಕಾರಿ ಶಿಲ್ಪ ಅವರು ಎರಡು ಸ್ಥಾನಕ್ಕೂ ಸಲ್ಲಿ ಸಿದ ನಾಮಪತ್ರಗಳನ್ನು ಪರಿಶೀಲನೆ ಮಾಡಿದ ಬಳಿಕ ಅಧ್ಯಕ್ಷ…
ಹರವೆಯಲ್ಲಿ ಎಚ್‍ಎಸ್‍ಎಂ ಹುಟ್ಟುಹಬ್ಬ ಉಚಿತ ಕಣ್ಣಿನ ತಪಾಸಣಾ ಶಿಬಿರ
August 6, 2018ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದಲ್ಲಿ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ಎಚ್‍ಎಸ್‍ಎಂ ಅಭಿಮಾನಿ ಬಳಗದ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಕೆರೆಹಳ್ಳಿ ನವೀನ್, ಮಹದೇವ ಪ್ರಸಾದ್ ರಾಜ್ಯದ ಧೀಮಂತ ನಾಯಕರಾಗಿದ್ದು, ಅವರ ಅವಧಿಯಲ್ಲಿ ಮಾಡಿದ ಉತ್ತಮ ಜನಪರ ಕೆಲಸಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ನಿಧನದ ನಂತರವೂ ಜನರು ಅವರ ಬಗ್ಗೆ ಉತ್ತಮ ಭಾವನೆ ಹೊಂದಿದ್ದು, ಅವರಲ್ಲಿದ್ದ ಸಾಮಾಜಿಕ ಕಳಕಳಿಯ ಪ್ರತೀಕ ವಾಗಿ…
ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿದೆ: ಮೈಸೂರು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ ಅಭಿಮತ
August 6, 2018ಚಾಮರಾಜನಗರ: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿರುವ ಕಾರಣದಿಂದ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೈಸೂರು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ನಗರದ ಸೆಸ್ಕಾಂ ಉಪವಿಭಾಗದ ಆವ ರಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವಿಭಾಗೀಯ ಸಮಿತಿ, ವೃತ್ತ ಸಮಿತಿ ವತಿಯಿಂದ ನಡೆದ 127ನೇ ಭೀಮ ಸಂಭ್ರಮ-2018 ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಹೆಣ್ಣುಮಕ್ಕಳಿಗೆ ಬದುಕು,…
ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರ್ಪಡೆ: ಕೊಂಗಳ್ಳಿ ಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ನಿಷೇಧ
August 5, 2018ಚಾಮರಾಜನಗರ: ಕನ್ನಡಿಗರೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದ ತಮಿಳುನಾಡಿಗೆ ಸೇರಿರುವ ತಾಳವಾಡಿ ಸಮೀಪದ ಕೊಂಗಳ್ಳಿ ಶ್ರೀಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯಲ್ಲಿ (ಕೊಂಗಳ್ಳಿ ಬೆಟ್ಟ) ಇನ್ನೂ ಮುಂದೆ ಭಕ್ತಾಧಿಗಳು ವಾಸ್ತವ್ಯ ಇರುವಂತಿಲ್ಲ! ಕೊಂಗಳ್ಳಿ ಬೆಟ್ಟ ಪ್ರದೇಶವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಅರಣ್ಯ ಇಲಾಖೆ ಕಳೆದ 1 ವಾರದಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ಭಕ್ತರನ್ನು ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಉಳಿದುಕೊಳ್ಳಲು ಅವಕಾಶ ನೀಡುತ್ತಿಲ್ಲ. ಮಾಮೂಲಿಯಂತೆ ರಾತ್ರಿ ವಾಸ್ತವ್ಯ ಹೂಡಲು ಬರುವ…
ಕಾರು-ಬೈಕ್ ಡಿಕ್ಕಿ: ಸವಾರ ಸಾವು
August 5, 2018ಬೇಗೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಅರೇಪುರ ಗೇಟ್ ಬಳಿ (ರಾಷ್ಟ್ರೀಯ ಹೆದ್ದಾರಿ 766ರಲ್ಲಿ) ನಡೆದಿದೆ. ಮೈಸೂರು ಜಿಲ್ಲೆಯ ಪಡುವಾರಹಳ್ಳಿ ಗ್ರಾಮದ ಯೇಸುದಾಸ್(40) ಮೃತಪಟ್ಟವರು.ಯೇಸುದಾಸ್ ಮೈಸೂರಿನಿಂದ ಗುಂಡ್ಲುಪೇಟೆಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ನಂಜಗೂಡಿನ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಯೇಸುದಾಸ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭರಚುಕ್ಕಿ ಜಲಪಾತೋತ್ಸವ ಪೂರ್ವ ಸಿದ್ಧತೆ ಪರಿಶೀಲನೆ
August 4, 2018ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಭರಚುಕ್ಕಿಯಲ್ಲಿ ಆಗಸ್ಟ್ 18 ಹಾಗೂ 19 ರಂದು ಜಲಪಾತೋತ್ಸವ ನಿಗದಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಇಂದು ಭರ ಚುಕ್ಕಿಗೆ ಭೇಟಿ ನೀಡಿ ಕೈಗೊಳ್ಳಬೇಕಾಗಿರುವ ಅಗತ್ಯ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ವೇದಿಕೆ ಕಾರ್ಯಕ್ರಮ ನಡೆಯುವ ಜಲಪಾತದ ಬಳಿಯ ಸ್ಥಳಕ್ಕೆ ಭೇಟಿ ಕೊಟ್ಟು ವೇದಿಕೆ ನಿರ್ಮಾಣ, ಗಣ್ಯರು, ಆಹ್ವಾನಿತರು, ವೀಕ್ಷಕರು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಬಗ್ಗೆ ಕೈಗೊಳ್ಳಬೇಕಿರುವ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ…
ಚಾ.ನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಪಂಗೆ ವಾರ್ಡ್‍ವಾರು ಮೀಸಲಾತಿ ಪ್ರಕಟ
August 3, 2018ಚಾಮರಾಜನಗರ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಚಾಮರಾಜನಗರ ನಗರಸಭೆಯ 31 ವಾರ್ಡ್, ಕೊಳ್ಳೇಗಾಲ ನಗರಸಭೆಯ 31 ವಾರ್ಡ್, ಗುಂಡ್ಲುಪೇಟೆ ಪುರಸಭೆಯ 23 ವಾರ್ಡ್, ಯಳಂದೂರು ಪಟ್ಟಣ ಪಂಚಾಯಿತಿಯ 11 ವಾರ್ಡ್, ಹನೂರು ಪಟ್ಟಣ ಪಂಚಾಯಿತಿಯ 13 ವಾರ್ಡ್‍ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಅದರ ವಿವರ ಇಂತಿದೆ. ಚಾ.ನಗರ ನಗರಸಭೆ: 1ನೇ ವಾರ್ಡ್-ಪರಿಶಿಷ್ಟ ಜಾತಿ ಮಹಿಳೆ, 2ನೇ ವಾರ್ಡ್-ಹಿಂ.ವರ್ಗ(ಎ) ಮಹಿಳೆ, 3ನೇ ವಾರ್ಡ್-ಸಾಮಾನ್ಯ, 4ನೇ ವಾರ್ಡ್- ಸಾಮಾನ್ಯ, 5ನೇ ವಾರ್ಡ್-ಸಾಮಾನ್ಯ ಮಹಿಳೆ, 6ನೇ ವಾರ್ಡ್-ಹಿಂ.ವರ್ಗ…
ಚಾಮರಾಜನಗರ-ಕೊಳ್ಳೇಗಾಲ ನಗರಸಭೆಗೆ ಚುನಾವಣೆ ನಿಗದಿ ಜಿಲ್ಲೆಯಲ್ಲಿ ಗರಿಗೆದರಿದ ಸ್ಥಳೀಯ ರಾಜಕೀಯ
August 3, 2018ಚಾಮರಾಜನಗರ: ರಾಜ್ಯ ಚುನಾ ವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ನಿಗದಿಗೊಳಸುತ್ತಿದ್ದಂತೆಯೇ ಜಿಲ್ಲೆಯ ಸ್ಥಳೀಯ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇ ಗಾಲ ನಗರಸಭೆಗೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ಈ ಎರಡೂ ನಗರಸಭೆಯ ತಲಾ 31 ಸ್ಥಾನಗಳಿಗೆ ಮತ ದಾನ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡ ಳಿತ ಎಲ್ಲಾ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದು, ಗುಂಡ್ಲುಪೇಟೆ ಪುರಸಭೆ, ಯಳಂ ದೂರು ಹಾಗೂ ಹನೂರು ಪಟ್ಟಣ ಪಂಚಾಯ್ತಿಗಳಿಗೆ ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಲ್ಲಿ…
ಹುಟ್ಟೂರಿಗೆ ಆಗಮಿಸಿದ ಸೈನಿಕನಿಗೆ ಅದ್ಧೂರಿ ಸ್ವಾಗತ
August 3, 2018ಚಾಮರಾಜನಗರ: ಭಾರತೀಯ ಸೇನೆಯಲ್ಲಿ ಸುಮಾರು 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ತನ್ನ ಹುಟ್ಟೂರು ಚಾಮರಾಜನಗರಕ್ಕೆ ಆಗಮಿಸಿದ ಸೈನಿಕ ಆರ್.ಮಂಜುನಾಥ್ ಅವರನ್ನು ದೇಶ ಪ್ರೇಮಿಗಳು, ಹಿತೈಷಿಗಳು ಹಾಗೂ ಕುಟುಂಬಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆ ನಡೆಸಿದರು. ನಗರದ ದೇವಾಂಗ ಬೀದಿಯ ನಿವಾಸಿ ಸಿ.ಎಸ್.ರಂಗಸ್ವಾಮಿ ಮತ್ತು ಮಂಗಳಮ್ಮ ಅವರ ದ್ವಿತೀಯ ಪುತ್ರ ಆರ್.ಮಂಜುನಾಥ್, ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿವೃತ್ತರಾದ ಕಾರಣ ನಗರಕ್ಕೆ ಬುಧವಾರ ರಾತ್ರಿ ಆಗಮಿಸಿದರು. ಈ ವೇಳೆ ಅವರನ್ನು ಪಟಾಕಿ ಸಿಡಿಸಿ,…
ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ: ದೂರು ಸ್ವೀಕಾರ
August 2, 2018ಚಾಮರಾಜನಗರ: ಜಿಲ್ಲೆಯ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿ ಕಾರಿಗಳು ಆಗಸ್ಟ್ 6 ರಿಂದ 29ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಆಯಾ ತಾಲೂಕಿನ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು. ಆಗಸ್ಟ್ 6ರಂದು ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ, ಆಗಸ್ಟ್ 14ರಂದು ಚಾಮರಾಜನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು. ಆಗಸ್ಟ್ 20ರಂದು ಯಳಂದೂರು, 24ರಂದು ಕೊಳ್ಳೇಗಾಲ ಹಾಗೂ 29ರಂದು ಹನೂರಿನಲ್ಲಿ ದೂರುಗಳನ್ನು ಅಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸುವರು.ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ…