ಹರವೆಯಲ್ಲಿ ಎಚ್‍ಎಸ್‍ಎಂ ಹುಟ್ಟುಹಬ್ಬ ಉಚಿತ ಕಣ್ಣಿನ ತಪಾಸಣಾ ಶಿಬಿರ
ಚಾಮರಾಜನಗರ

ಹರವೆಯಲ್ಲಿ ಎಚ್‍ಎಸ್‍ಎಂ ಹುಟ್ಟುಹಬ್ಬ ಉಚಿತ ಕಣ್ಣಿನ ತಪಾಸಣಾ ಶಿಬಿರ

August 6, 2018

ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದಲ್ಲಿ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ಎಚ್‍ಎಸ್‍ಎಂ ಅಭಿಮಾನಿ ಬಳಗದ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಕೆರೆಹಳ್ಳಿ ನವೀನ್, ಮಹದೇವ ಪ್ರಸಾದ್ ರಾಜ್ಯದ ಧೀಮಂತ ನಾಯಕರಾಗಿದ್ದು, ಅವರ ಅವಧಿಯಲ್ಲಿ ಮಾಡಿದ ಉತ್ತಮ ಜನಪರ ಕೆಲಸಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ನಿಧನದ ನಂತರವೂ ಜನರು ಅವರ ಬಗ್ಗೆ ಉತ್ತಮ ಭಾವನೆ ಹೊಂದಿದ್ದು, ಅವರಲ್ಲಿದ್ದ ಸಾಮಾಜಿಕ ಕಳಕಳಿಯ ಪ್ರತೀಕ ವಾಗಿ ಅವರ ಅಭಿಮಾನಿ ಬಳಗದಿಂದ 2010ರಿಂದಲೂ ಸಹ ಹರವೆ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಸೇರಿದಂತೆ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡು ತ್ತಿದ್ದೇವೆ ಎಂದರು.

ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಚಾಮರಾಜನಗರ ಹಾಗೂ ಕೊಯಮತ್ತೂರು ಅರವಿಂದ ಆಸ್ಪತ್ರೆ ಸಹಯೋಗದಲ್ಲಿ ಇಂದು 200ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 60ಕ್ಕೂ ಹೆಚ್ಚು ಮಂದಿಯನ್ನು ಅರವಿಂದ ಆಸ್ಪತ್ರೆಗೆ ಕಳು ಹಿಸಲಾಗುವುದೆಂದು ತಿಳಿಸಿದರು.

ಶಿಬಿರದಲ್ಲಿ ಯುವ ಮುಖಂಡ ಗಣೇಶ್ ಪ್ರಸಾದ್, ಜಿಪಂ ಸದಸ್ಯ ಸದಾಶಿವಮೂರ್ತಿ, ಹರವೆ ಗ್ರಾಪಂ ಅಧ್ಯಕ್ಷ ಸ್ವಾಮಿ, ಮುಖಂ ಡರಾದ ಸಯ್ಯದ್ ರಫಿ, ರವಿಕುಮಾರ್, ಉದಯ್ ಕುಮಾರ್, ರೇವಪ್ಪ, ಪ್ರಕಾಶ್, ನಾಗೇಂದ್ರ, ನಾಗರಾಜು ಸೇರಿದಂತೆ ಎಚ್‍ಎಸ್‍ಎಂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗುಂಡ್ಲುಪೇಟೆ ವರದಿ: ರಕ್ತದಾನ ಮಹಾದಾನ. ಅದನ್ನು ಅರಿತು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದು ಸಂತಸದ ವಿಚಾರ ಎಂದು ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ದಿ.ಎಚ್.ಎಸ್.ಮಹದೇವಪ್ರಸಾದ್ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರಕ್ಕೆ ನಮ್ಮ ತಂದೆ ಮಹಾದೇವ ಪ್ರಸಾದ್ ಅವರ ಕೊಡುಗೆ ಅಮೂಲ್ಯವಾ ದುದು. ಅವರ ಹುಟ್ಟು ಹಬ್ಬದ ನೆನಪಿಗಾಗಿ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನತೆ ನೀಡುತ್ತಿರುವ ಸಹಕಾರಕ್ಕೆ ನಾನು ಋಣಿಯಾಗಿದ್ದೇನೆ ಎಂದರು. ಇದರೊಂದಿಗೆ ತಾಲೂಕಿನ ಕಬ್ಬಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ, ಪಟ್ಟಣದ ಸಾರ್ವಜನಿಕ ಆಸ್ಪ ತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಹಾಗೂ ಪಟ್ಟಣದ ಕಾಂಗ್ರೆಸ್ ಕಚೇರಿ, ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇ ಶಕ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಸದಸ್ಯರಾದ ಮಹೇಶ್, ಚನ್ನಪ್ಪ, ಬೊಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೀಶ ಮೂರ್ತಿ, ಸದಸ್ಯ ನಟೇಶ್, ಮುಖಂಡರಾದ ಎಲ್.ಸುರೇಶ್, ಹಂಗಳ ನಂಜಪ್ಪ, ಕೊಡಸೋಗೆ ಶಿವಬಸಪ್ಪ, ನಟೇಶ್, ಜಿ.ಕೆ.ಲೋಕೇಶ್, ರಾಜಶೇಖರ್, ಪುಟ್ಟ ಸ್ವಾಮಾಚಾರ್, ಜಿ.ಆರ್.ರಮೇಶ್, ಅಂಗಡಿ ಶಿವಕುಮಾರ್ ಸೇರಿದಂತೆ ಕಾರ್ಯಕರ್ತರು
ಇದ್ದರು.

Translate »