ಅಮಚವಾಡಿ ಡೈರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಅಮಚವಾಡಿ ಡೈರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

August 6, 2018

ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದ ಹಾಲು ಉತ್ಪಾದ ಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ನಾಗೇಶ್‍ರಾಜೇ ಅರಸ್ ಮತ್ತು ಉಪಾಧ್ಯಕ್ಷರಾಗಿ ಬಸವರಾಜು ಆಯ್ಕೆಯಾಗಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್‍ರಾಜೇ ಅರಸ್ ಮತ್ತು ಬಸವರಾಜಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜು ಮತ್ತು ಸೋಮಣ್ಣ ನಾಮಪತ್ರ ಸಲ್ಲಿಸಿದರು. ಚುನಾವಣಾಧಿ ಕಾರಿ ಶಿಲ್ಪ ಅವರು ಎರಡು ಸ್ಥಾನಕ್ಕೂ ಸಲ್ಲಿ ಸಿದ ನಾಮಪತ್ರಗಳನ್ನು ಪರಿಶೀಲನೆ ಮಾಡಿದ ಬಳಿಕ ಅಧ್ಯಕ್ಷ ಮತ್ತು 13 ಜನ ನಿರ್ದೇಶಕರ ಬಲ ಹೊಂದಿದ್ದ ಸಹಕಾರ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ನಾಗೇಶ್‍ರಾಜೇಅರಸ್ ಅವರಿಗೆ 8 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಬಸವರಾಜು ಅವರು 8 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬಿರಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಬಸವ ರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಸೋಮಣ್ಣ 5 ಮತ ಪಡೆ ಯುವ ಮೂಲಕ ಸೋಲು ಅನುಭವಿಸಿದರು.

ನೂತನ ಅಧ್ಯಕ್ಷ ನಾಗೇಶ್‍ರಾಜೇಅರಸ್ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ಕಳೆದ ಐದು ವರ್ಷದಿಂದ ನನ್ನ ಆಡಳಿತದ ಅವಧಿಯಲ್ಲಿ ಸಹಕಾರಿ ಬಂಧುಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಬೆಳಸಿ ಕೊಳ್ಳುವುದರ ಜತೆಯಲ್ಲಿ ಸಂಘದಿಂದ ಬರುವ ಸವಲತ್ತು ದೊರಕಿಸಿ ಕೊಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದರಿಂದ ಮತ್ತೆ ಸಹಕಾರಿ ಬಂಧುಗಳು ವಿಶ್ವಾಸ ಇಟ್ಟು ಮತ್ತೆ ಆಯ್ಕೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಮುತ್ತುಸ್ವಾಮಿ, ಸಿದ್ದರಾಜು, ರಾಜಣ್ಣ, ಸುಶೀಲಮ್ಮ, ಚಿಕ್ಕಸ್ವಾಮಿ, ಲಿಂಗಪ್ಪ, ಡಿ.ನಾರಾಯಣಸ್ವಾಮಿ, ಪಾರ್ವತಮ್ಮ, ಮಹದೇವಸ್ವಾಮಿ, ಸಹಕಾರ ಸಂಘದ ಕಾರ್ಯದರ್ಶಿ ಶ್ರೀಕಾಂತ್, ಸಿಬ್ಬಂದಿ ಗಳಾದ ಶಿವರಾಜು, ಮಹೇಶ್, ನಿಂಗಯ್ಯ ಹಾಜರಿದ್ದರು.

Translate »