ಕುದೇರಿನಲ್ಲಿ ಹಾಲಿನ ಡೈರಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ

ಕುದೇರಿನಲ್ಲಿ ಹಾಲಿನ ಡೈರಿ ಕಾಮಗಾರಿ ಪರಿಶೀಲನೆ

August 6, 2018

ಚಾಮರಾಜನಗರ:  ತಾಲೂಕಿನ ಕುದೇರು ಗ್ರಾಮಕ್ಕೆ ಸಂಸದ ಆರ್.ಧ್ರುವನಾರಾಯಣ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಾಲಿನ ಡೈರಿ ಕಾಮಗಾರಿಯನ್ನು ವೀಕ್ಷಿಸಿದರು.

3 ಲಕ್ಷ ಲೀಟರ್ ಯೋಜನಾ ಸಾಮಥ್ರ್ಯದ ಹಾಲು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಬಹುತೇಕ ಪೂರ್ಣಗೊಂಡಿರುವ ವಿವಿಧ ಘಟಕಗಳನ್ನು ಪರಿಶೀಲಿಸಿದರು.

2 ಲಕ್ಷ ಲೀಟರ್ ಸಾಮಥ್ರ್ಯದ ಯುಎಚ್‍ಟಿ ಹಾಲಿನ ಘಟಕ, 30 ಸಾವಿರ ಲೀಟರ್ ಸಾಮಥ್ರ್ಯದ ಮೊಸರು ತಯಾರಿಕಾ ಸ್ಥಾವರ, 4 ಸಾವಿರ ಕೆಜಿ ಬೆಣ್ಣೆ, 3 ಸಾವಿರ ಲೀಟರ್ ತುಪ್ಪ ತಯಾರಿಸಲು ಸಿದ್ಧಪಡಿಸಲಾಗಿರುವ ಯಂತ್ರೋಪಕರಣಗಳನ್ನು ಅಳವಡಿಸಿದ ಘಟಕಗಳನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಧ್ರುವನಾರಾಯಣ, ಚಾಮರಾಜನಗರ ಹಾಲು ಒಕ್ಕೂಟವು ಪ್ರತ್ಯೇಕ ಒಕ್ಕೂಟವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ 3 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಈ ಹಿಂದೆಯೇ ಆರಂಭವಾಗಿರುವ ಡೇರಿ ಯೋಜನೆ ಕಾಮಗಾರಿಯು ಚುರುಕುಗೊಂಡಿದ್ದು, ಬಹಳಷ್ಟು ಶೀಘ್ರವಾಗಿ ಕೆಲಸ ಮುಗಿಯಲಿದೆ. ಈಗಾಗಲೇ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ನೂತನ ಡೈರಿ ಕಾರ್ಯಾರಂಭವಾಗುವ ನಿರೀಕ್ಷೆ ಇದೆ ಎಂದರು.

ಡೈರಿ ಯೋಜನೆ ನಿರ್ವಹಿಸಲು ಅಗತ್ಯ ವಿರುವ ಎಲ್ಲ ಯಂತ್ರೋಪಕರಣಗಳ ಅಳವಡಿಕೆ ಕೆಲಸ ನಡೆದಿದೆ. ಸೆಪ್ಟೆಂಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಡೈರಿ ಕಾರ್ಯ ನಿರ್ವಹಿಸಲು ಎಲ್ಲವೂ ಸಿದ್ಧವಾಗಲಿದ. ಇದರಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಡೈರಿ ನಿರ್ಮಾಣವಾಗು ವುದು ಮಹತ್ವದ ಯೋಜನೆಯಾಗಿದೆ. ಹಾಲು ಒಕ್ಕೂಟ ಪ್ರತಿನಿಧಿಗಳು ಸಹಯೋಜನೆಗೆ ಶ್ರಮಿಸಿದ್ದಾರೆ. ಸಹಕಾರ ಸಂಘಗಳು ಸಹಯೋಜನೆಗೆ ಮುಖ್ಯ ಕೊಡುಗೆಯಾಗಲಿವೆ. ಜನಪ್ರತಿನಿಧಿಗಳೂ ಸಹ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಡೈರಿ ಯೋಜನೆಗೆ ಹೆಚ್ಚಿನ ಸಹಕಾರ, ನೆರವು ನೀಡಿದ್ದಾರೆ ಎಂದರು.

ಈ ವೇಳೆ ಹಾಲು ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕರಾದ ರವಿಶಂಕರ್, ಮಾದಪ್ಪ, ಪ್ರಮೋದಾ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮಾಜಿ ಅಧ್ಯಕ್ಷ ಆಲ್ದೂರು ರಾಜಶೇಖರ್, ಚಾಮರಾಜ ನಗರ ಜಿಲ್ಲಾ ಹಾಲು ಒಕ್ಕೂಟದ ವ್ಯವ ಸ್ಥಾಪಕ ಡಾ.ವಿಜಯ್‍ಕುಮಾರ್, ಮುಖಂ ಡರಾದ ಬಾಲರಾಜು ಇದ್ದರು.

Translate »