Tag: Chamarajanagar

ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ
ಚಾಮರಾಜನಗರ

ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ

August 2, 2018

ಗುಂಡ್ಲುಪೇಟೆ:  ಲಂಚದ ಆರೋಪ ಹೊರಿಸಿ ನನ್ನನ್ನು ತೇಜೋವಧೆ ಮಾಡಲೆಂದು ಪ್ರಯತ್ನಿಸುತ್ತಿ ರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತಿಸಿದ್ದೇನೆ ಎಂದು ತಾಲೂಕಿನ ಬೇಗೂರು ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಸ್.ಚೇತನ್ ತಿಳಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನರಹಿತರ ಪಟ್ಟಿ ಸಿದ್ಧಪಡಿಸಲು ಗ್ರಾಮ ಸಭೆಯನ್ನು ಬೇಗೂರು ಗ್ರಾಮದಲ್ಲಿ ಕರೆಯಲಾಗಿತ್ತು. ಈ ವೇಳೆ ಏಕಾಏಕಿ ಸಭೆಗೆ ಬಂದ ಬಾರ್ ಮಾಲೀಕ ಗೋವಿಂದ ಎಂಬುವರು ಬಾರ್ ಲೈಸೆನ್ಸ್ ನವೀಕರಣಕ್ಕಾಗಿ ಅಧ್ಯಕ್ಷರಿಗೆ 50 ಸಾವಿರ ಲಂಚ ನೀಡಿದ್ದೇನೆ ಎಂದು ಗಂಭೀರವಾಗಿ ಆರೋಪಿಸಿದ್ದರು….

ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನು ಅರಿವು ಅಗತ್ಯ
ಚಾಮರಾಜನಗರ

ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನು ಅರಿವು ಅಗತ್ಯ

August 2, 2018

ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ವತಿಯಿಂದ ಚಂದಕವಾಡಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷಿ ಸಿ.ಜಿ, ಉತ್ತಮ ಸಮಾಜ ಮತ್ತು ಉತ್ತಮ ನಾಗರಿಕರಾಗಲು ಕಾನೂನು ಅರಿವು ಹೊಂದು ವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ನಮ್ಮ ನೆಲದ ಕಾನೂನನ್ನು ಗೌರವಿಸಬೇಕು. ನಮ್ಮ ಸಂವಿಧಾನ ಎಲ್ಲಾ ಕಾನೂನುಗಳಿಗೂ ಅಡಿ ಪಾಯವಾಗಿದ್ದು,…

ಪ್ರತಿಭಾ ಪುರಸ್ಕಾರಕ್ಕೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ

ಪ್ರತಿಭಾ ಪುರಸ್ಕಾರಕ್ಕೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

August 2, 2018

ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2018ರ ಮಾರ್ಚ್ ಮತ್ತು ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.90 ಮತ್ತು ಅದ ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಹಿಂದುಳಿದ ಪ್ರವರ್ಗ 1, 2ಎ, 3ಎ ಹಾಗೂ 3ಬಿ.ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿ ಗಳು ಆಗಸ್ಟ್ 21ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‍ಸೈಟ್ www….

ಗಂಗಾ ಕಲ್ಯಾಣ ಯೋಜನೆ ಸೌಲಭ್ಯಕ್ಕೆ ಪ.ಜಾ. ರೈತರಿಂದ ಅರ್ಜಿ ಆಹ್ವಾನ
ಚಾಮರಾಜನಗರ

ಗಂಗಾ ಕಲ್ಯಾಣ ಯೋಜನೆ ಸೌಲಭ್ಯಕ್ಕೆ ಪ.ಜಾ. ರೈತರಿಂದ ಅರ್ಜಿ ಆಹ್ವಾನ

August 2, 2018

ಚಾಮರಾಜನಗರ:  ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿಗೆ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತಿಸಣ್ಣ ರೈತರಿಂದ ಗಂಗಾಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು 18 ರಿಂದ 60 ವರ್ಷದೊಳಗಿನ ವಯೋ ಮಾನದವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಾಗಿದ್ದಲ್ಲಿ 98 ಸಾವಿರ ರೂ. ಹಾಗೂ ನಗರ ಪ್ರದೇಶದವರಾಗಿದ್ದಲ್ಲಿ 1 ಲಕ್ಷದ 20 ಸಾವಿರ ರೂ. ಮಿತಿಯೊಳಗಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಪರಿಶಿಷ್ಟ ಜಾತಿಯ…

ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ:  ಉದ್ಯೋಗ ಮೇಳದಲ್ಲಿ 2170 ಜನರಿಗೆ ಉದ್ಯೋಗ
ಚಾಮರಾಜನಗರ

ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ:  ಉದ್ಯೋಗ ಮೇಳದಲ್ಲಿ 2170 ಜನರಿಗೆ ಉದ್ಯೋಗ

August 1, 2018

91 ಕಂಪನಿಗಳು ಭಾಗಿ 3250 ಮಂದಿ ನೋಂದಣಿ ದೃಷ್ಟಿದೋಷ ಮಕ್ಕಳಿಗೆ ಕನ್ನಡಕ ವಿತರಣೆ ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ್ ಅವರ 57ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉದ್ಯೋಗಮೇಳ ಅಭೂತ ಪೂರ್ವ ಯಶಸ್ಸು ಕಂಡಿತು. ಇಲ್ಲಿನ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇರುವ ತಾಲೂಕು ಕಚೇರಿ ಪಕ್ಕದ ವಿಶಾಲ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಹಾಗೂ ತಪಾಸಣೆಗೈದ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣಾ ಸಮಾರಂಭ…

ಉಡಿಗಾಲ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರ

ಉಡಿಗಾಲ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

August 1, 2018

ಚಾಮರಾಜನಗರ:  ಕ್ರೀಡೆಗಳು ಮಕ್ಕಳನ್ನು ಅಕರ್ಷಿಸುತ್ತದೆ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಮರಕೋತಿ ಅಟಗಳು ಈಗಲೂ ಗ್ರಾಮೀಣ ಭಾಗದಲ್ಲಿ ಅಟಗಳನ್ನು ಮಕ್ಕಳು ಅಡುತ್ತಾರೆ ಎಂದು ಉಡಿಗಾಲ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜಿ.ಮಹೇಶ್ ಅಭಿಪ್ರಾಯಪಟ್ಟರು. ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಪಂ, ಸಾರ್ವ ಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಡಿ ಗಾಲ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾ ಕೂಟವನ್ನು ಮಂಗಳವಾರ ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾ ಭಿಮಾನಿಗಳು…

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ : ನಗರಸಭೆ ಎಚ್ಚರಿಕೆ
ಚಾಮರಾಜನಗರ

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ : ನಗರಸಭೆ ಎಚ್ಚರಿಕೆ

August 1, 2018

ಚಾಮರಾಜನಗರ:  ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವವರು ಕೂಡಲೇ ಮಾರಾಟ ವಹಿವಾಟು ನಿಲ್ಲಿಸಬೇಕು. ಇಲ್ಲವಾದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಿ ಕ್ರಮ ವಹಿಸಲಾಗುವುದೆಂದು ನಗರಸಭೆ ಎಚ್ಚರಿಕೆ ನೀಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳ ಸರಾಗ ಹರಿವಿಗೆ ತಡೆ ಉಂಟುಮಾಡಿದೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಸೆಕ್ಷನ್ 5ರ ಅನ್ವಯ ಯಾವುದೇ ಅಂಗಡಿ ಮಾರಾಟಗಾರರು…

ಕಾರಿಗೆ ಸಿಲುಕಿ ಮಗು ಸಾವು
ಚಾಮರಾಜನಗರ

ಕಾರಿಗೆ ಸಿಲುಕಿ ಮಗು ಸಾವು

August 1, 2018

ಚಾಮರಾಜನಗರ: ಆಟವಾಡುತ್ತಿದ್ದ 2 ವರ್ಷದ ಮಗು ಕಾರಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. ಗಾಳಿಪುರ ಬಡಾವಣೆಯ ಅಹಮದ್ ನಗರ ನಿವಾಸಿ ಅಸ್ಗರ್ ಪಾಷ ಎಂಬುವರ ಮಗ ಮಹಮ್ಮದ್ ಸುಹೇಬ್ (2) ಮೃತಪಟ್ಟ ಮಗು. ಮಹಮ್ಮದ್ ಸುಹೇಬ್ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅದೇ ಬಡಾವಣೆಯ ಶಕೀಲ್ ಎಂಬಾತ ಸ್ಕಾರ್ಪಿಯೋ ಕಾರನ್ನು ಹಿಮ್ಮುಖವಾಗಿ ಚಲಿಸಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ಮಗು ಕಾರಿನ ಚಕ್ರಕ್ಕೆ ಸಿಲುಕಿತು. ಇದರಿಂದ ತೀವ್ರವಾಗಿ ಗಾಯ ಗೊಂಡಿದ್ದ ಮಗುವನ್ನು ಆಸ್ಪತ್ರೆಗೆ…

ವಕೀಲ ಅಜಿತ ನಾಯಕ ಹತ್ಯೆ ಖಂಡಿಸಿ ವಕೀಲರ ಪ್ರತಿಭಟನೆ
ಚಾಮರಾಜನಗರ

ವಕೀಲ ಅಜಿತ ನಾಯಕ ಹತ್ಯೆ ಖಂಡಿಸಿ ವಕೀಲರ ಪ್ರತಿಭಟನೆ

July 31, 2018

ಕಾರ್ಯ ಕಲಾಪ ಬಹಿಷ್ಕಾರ ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ ಚಾಮರಾಜನಗರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಿರಿಯ ವಕೀಲ ಹಾಗೂ ಉತ್ತರ ಕರ್ನಾಟಕ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಅಜಿತ ನಾಯಕ(57) ಹತ್ಯೆ ಖಂಡಿಸಿ ನಗರದಲ್ಲಿ ಸೋಮವಾರ ವಕೀಲರು ನ್ಯಾಯಾಲಯದ ಕಾರ್ಯ-ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು, ಪ್ರಕರಣವನ್ನು ಖಂಡಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವಂತೆ ಸರ್ವಾನುಮತದಿಂದ…

ಚೆನ್ನಿಪುರದಮೋಳೆ ಶಾಲೆಯಲ್ಲಿ ಮರಗಿಡಗಳ ಹುಟ್ಟುಹಬ್ಬ ಆಚರಣೆ
ಚಾಮರಾಜನಗರ

ಚೆನ್ನಿಪುರದಮೋಳೆ ಶಾಲೆಯಲ್ಲಿ ಮರಗಿಡಗಳ ಹುಟ್ಟುಹಬ್ಬ ಆಚರಣೆ

July 31, 2018

ಚಾಮರಾಜನಗರ:  ಸಮೀಪದ ಚೆನ್ನಿಪುರದ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ 2ನೇ ವರ್ಷದ ಗಿಡ ಮರಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಗಿಡಗಳ ಹುಟ್ಟುಹಬ್ಬದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಶಾಲೆಯನ್ನು ಶುಚಿಗೊಳಿಸಿ ಗಿಡಮರಗಳಿಗೆ ದೀಪಾಲಂಕಾರ ಹೂವಿನ ಆಲಂಕಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಗಣ್ಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪತ್ರಕರ್ತ ಎಸ್.ಎಂ.ನಂದೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ಸಿನಿಮಾ ನಟರು ಹಾಗೂ ವೈಯಕ್ತಿಕವಾಗಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆಯಾಗಿದೆ. ನಮಗೆ ಉಸಿರಾಡಲು ಶುದ್ಧ ಗಾಳಿ ನೀಡುವ…

1 50 51 52 53 54 74
Translate »