Tag: Chamarajanagar

ಚಾಮರಾಜೇಶ್ವರ ರಥೋತ್ಸವಕ್ಕೆ ಆಗ್ರಹಿಸಿ ಭಕ್ತರ ಪ್ರತಿಭಟನೆ
ಚಾಮರಾಜನಗರ

ಚಾಮರಾಜೇಶ್ವರ ರಥೋತ್ಸವಕ್ಕೆ ಆಗ್ರಹಿಸಿ ಭಕ್ತರ ಪ್ರತಿಭಟನೆ

July 29, 2018

ಚಾಮರಾಜನಗರ: ಆಷಾಢ ಮಾಸದ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವ ಈ ಬಾರಿಯೂ ನಡೆಯದಿರುವುದನ್ನು ಖಂಡಿಸಿ ಹಾಗೂ ಸರ್ಕಾರ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಒತ್ತಾಯಿಸಿ ಶ್ರೀ ಚಾಮರಾಜೇಶ್ವರಸ್ವಾಮಿಯ ಭಕ್ತಮಂಡಳಿ ಕಾರ್ಯಕರ್ತರು ನಗರದ ಶ್ರೀಚಾಮರಾಜೇಶ್ವರ ದೇವಾಲಯ ಆವರಣದಲ್ಲಿರುವ ರಥದ ಮುಂದೆ ಈಡುಗಾಯಿ ಒಡೆದು ಅರಿಶಿನ, ಕುಂಕುಮ ಎರಚಿ ಅಘೋರಿವೇಷ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಆಗಲಿ ಆಗಲಿ ರಥೋತ್ಸವ ಆಗಲಿ ಎಂದು ಘೋಷಣೆ ಕೂಗಿ ಈ ಬಾರಿ ರಥೋತ್ಸವ…

ಚಾಮರಾಜನಗರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಚಾಮರಾಜನಗರ

ಚಾಮರಾಜನಗರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

July 28, 2018

ಚಾಮರಾಜನಗರ:  ಹಿಂದುಳಿದ ವರ್ಗಗಳ ಜನರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಸಮಾಜದಲ್ಲಿ ಏಳಿಗೆಯಾಗಲು ಸಾಧ್ಯವಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಡ ಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಜನರು ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಬೇಕು. ಎಷ್ಟೇ ಕಷ್ಟವಾದರೂ ಸರಿ…

ಪ್ರಾಥಮಿಕ, ಪ್ರೌಢಶಾಲೆ ಒಂದೇ ಸೂರಿನಡಿ ನಿರ್ಮಿಸಲು ಯತ್ನ: ತಾಲೂಕು ಪಂಚಾಯಿತಿ ಸದಸ್ಯ ಜೆ.ಬಸವಣ್ಣ
ಚಾಮರಾಜನಗರ

ಪ್ರಾಥಮಿಕ, ಪ್ರೌಢಶಾಲೆ ಒಂದೇ ಸೂರಿನಡಿ ನಿರ್ಮಿಸಲು ಯತ್ನ: ತಾಲೂಕು ಪಂಚಾಯಿತಿ ಸದಸ್ಯ ಜೆ.ಬಸವಣ್ಣ

July 28, 2018

ಚಾಮರಾಜನಗರ: ಬದನಗುಪ್ಪೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಜಾಗದ ತೊಂದರೆ ಇದ್ದು, ಕೈಗಾರಿಕಾ ಭಿವೃದ್ಧಿ ಪ್ರದೇಶದಲ್ಲಿ 7 ಎಕರೆ ಸರ್ಕಾರಿ ಸ್ಥಳವನ್ನು ಮಂಜೂರು ಮಾಡಿಸಿಕೊಂಡು ಒಂದೇ ಸೂರಿನಡಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಸ್ಥಾಪನೆ ಮಾಡುವ ಗುರಿ ನಮ್ಮದಾಗಿದೆ ಎಂದು ತಾಪಂ ಸದಸ್ಯ ಜಿ.ಬಸವಣ್ಣ ತಿಳಿಸಿದರು. ತಾಲೂಕಿನ ಬದನಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಗಳ ಸಂಘದ ವತಿಯಿಂದ ಆಯೋಜಿಸಿದ್ದ ನೋಟ್ ಬುಕ್, ಲೇಖನ ಸಾಮಗ್ರಿಗಳನ್ನು ವಿತರಣೆ ಸಮಾರಂಭದಲ್ಲಿ ಅವರು ಮಾತ ನಾಡಿದರು….

ಗದ್ದಲ, ವಿರೋಧದ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಉದ್ಘಾಟನೆ
ಚಾಮರಾಜನಗರ

ಗದ್ದಲ, ವಿರೋಧದ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಉದ್ಘಾಟನೆ

July 27, 2018

ಚಾಮರಾಜನಗರ: ಗೊಂದಲ-ಗದ್ದಲ, ತೀವ್ರ ವಿರೋಧದ ನಡುವೆ ನಗರದಲ್ಲಿ ಗುರುವಾರ ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟ ಕದ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ನಡೆಯಿತು. ಜಾಗತಿಕ ಲಿಂಗಾಯಿತ ಮಹಾಸಭಾದ ಆಶ್ರಯದಲ್ಲಿ ನಗರದ ಶ್ರೀ ಶಿವಕುಮಾರ ಸ್ವಾಮಿ ಭವನದಲ್ಲಿ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೂಡಲ ಸಂಗ ಮದ ಶ್ರೀ ಬಸವ ಮೃತ್ಯುಂಜಯ…

ಕಾರ್ಯಕ್ರಮದ ಆರಂಭದಲ್ಲಿ ಗೊಂದಲ-ಗದ್ದಲ
ಚಾಮರಾಜನಗರ

ಕಾರ್ಯಕ್ರಮದ ಆರಂಭದಲ್ಲಿ ಗೊಂದಲ-ಗದ್ದಲ

July 27, 2018

ಚಾಮರಾಜನಗರ:  ಇಂದಿಲ್ಲಿ ನಡೆದ ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶದ ಕಾರ್ಯಕ್ರಮ ಆರಂಭದಲ್ಲಿಯೇ ಗೊಂದಲದ ಗೂಡಾಯಿತು. ಕಾರ್ಯಕ್ರಮ ಆರಂಭಗೊಂಡು ಸ್ವಾಗತ ಆರಂಭವಾಯಿತು. ಈ ವೇಳೆ ವೇದಿಕೆಯ ಮುಂಭಾಗದಲ್ಲಿಯೇ ಕುಳಿತಿದ್ದ ವೀರ ಶೈವ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಕೆಲವರು ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಲೂ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮ ರೂಪಿಸಿದ್ದ ಸಂಘಟಕರೂ ಸಹ ಘೋಷಣೆಗಳನ್ನು ಕೂಗತೊಡಗಿದರು. ಈ ವೇಳೆ ಗದ್ದಲ-ಗೊಂದಲ ಉಂಟಾಯಿತು. ಸ್ಥಳದಲ್ಲಿದ್ದ ಪೊಲೀಸರು ಇಬ್ಬರನ್ನೂ ಎಷ್ಟೇ ಸಮಾಧಾನಿಸಿದರೂ ಸಹ…

ಕಾರು-ಬೈಕ್ ಡಿಕ್ಕಿ; ಯುವಕ ಸಾವು
ಚಾಮರಾಜನಗರ

ಕಾರು-ಬೈಕ್ ಡಿಕ್ಕಿ; ಯುವಕ ಸಾವು

July 27, 2018

ಚಾಮರಾಜನಗರ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಚಿಕ್ಕನಾಗು ಎಂಬುವರ ಪುತ್ರ ಶಿವು (24) ಮೃತಪಟ್ಟ ಬೈಕ್ ಸವಾರ. ಕಾರ್ಯನಿಮಿತ್ತ ಶಿವು ಬೈಕ್‍ನಲ್ಲಿ ಕೋಡಿ ಮೋಳೆ ಚಂದಕವಾಡಿ ಕಡೆಗೆ ತೆರಳುತ್ತಿದ್ದ. ಈ ವೇಳೆ ಚಂದಕವಾಡಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿ ಸಿತು. ಇದರಿಂದ…

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ
ಚಾಮರಾಜನಗರ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

July 27, 2018

ಚಾಮರಾಜನಗರ:  ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷರಾಗಿ ಟಿವಿ9 ಜಿಲ್ಲಾ ವರದಿಗಾರ ಎಂ.ಇ.ಮಂಜು ನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಪ್ರಭ ಜಿಲ್ಲಾ ವರದಿಗಾರ ಕೆ.ಬಿ.ದೇವ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಎಲ್ಲಾ 25 ಸ್ಥಾನಗಳಿಗೂ ಅವಿ ರೋಧ ಆಯ್ಕೆ ನಡೆದಿದ್ದು, ಪದಾಧಿ ಕಾರಿಗಳ ವಿವರವನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎಂ.ಬಿ.ಕೃಷ್ಣಮೂರ್ತಿ ಪ್ರಕಟಿಸಿದ್ದಾರೆ. ಪದಾಧಿಕಾರಿಗಳ ವಿವರ ಇಂತಿದೆ. ಎಂ.ಇ.ಮಂಜುನಾಥ್ (ಅಧ್ಯಕ್ಷ), ದೇವ ರಾಜು ಕಪ್ಪಸೋಗೆ (ಪ್ರಧಾನ ಕಾರ್ಯ ದರ್ಶಿ), ಕೆ.ಎಸ್.ಫಾಲಲೋಚನ ಆರಾಧ್ಯ (ನಗರ ಉಪಾಧ್ಯಕ್ಷ), ಎನ್.ನಾಗೇಂದ್ರ, ಎಂ.ಗುರುಸ್ವಾಮಿ (ಗ್ರಾಮೀಣ…

ಆಗಸ್ಟ್ 18,19 ಭರಚುಕ್ಕಿ ಜಲಪಾತೋತ್ಸವ
ಚಾಮರಾಜನಗರ

ಆಗಸ್ಟ್ 18,19 ಭರಚುಕ್ಕಿ ಜಲಪಾತೋತ್ಸವ

July 26, 2018

1.5 ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ವೆಸ್ಲಿ ಸೇತುವೆ ದುರಸ್ತಿ ಮಧ್ಯರಂಗ ದೇವಾಲಯ ಜೀಣೋದ್ಧಾರಕ್ಕೆ ಕ್ರಮ ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಭರಚುಕ್ಕಿಯಲ್ಲಿ ಆಗಸ್ಟ್ 18 ಹಾಗೂ 19 ರಂದು ಜಲಪಾತೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಭರಚುಕ್ಕಿಯಲ್ಲಿರುವ ಮಯೂರ ಪ್ರವಾಸಿ ಮಂದಿರದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು. ಭರಚುಕ್ಕಿಯಲ್ಲಿ ಆಯೋಜಿಸಲಾಗುವ ಎರಡು ದಿನಗಳ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿ ಸಲಾಗುವುದು….

ರೈತರ ಸಂಕಷ್ಟ ನೋಡಿ ಹೆಚ್‍ಡಿಕೆ ಕಣ್ಣೀರು
ಚಾಮರಾಜನಗರ

ರೈತರ ಸಂಕಷ್ಟ ನೋಡಿ ಹೆಚ್‍ಡಿಕೆ ಕಣ್ಣೀರು

July 26, 2018

ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಂಕಷ್ಟ ನೋಡಿ ಬಹಿರಂಗ ಸಮಾರಂಭದಲ್ಲಿ ಅತ್ತಿದ್ದಾರೆ. ಆದರೆ ಬಿಜೆಪಿಯವರು ಬೇರೆ ಬೇರೆ ಕಾರಣಗಳಿಗಾಗಿ ಬಾಗಿಲು ಹಾಕಿ ಕೊಂಡು ಅಳುತ್ತಾರೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಬಿಜೆಪಿ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು. ಕೊಳ್ಳೇಗಾಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆದವರೆಗೂ ಹೃದಯ ಮತ್ತು ಮನ ಸಾಕ್ಷಿ ಅನ್ನೋದು ಇರುತ್ತದೆ. ನೋವಾದ ಸಂದರ್ಭದಲ್ಲಿ ಕಣ್ಣೀರು ಬಂದಿರುತ್ತದೆ. ಆದರೆ ಇದನ್ನೇ ಟೀಕಿಸುವ ಮಟ್ಟಕ್ಕೆ ಬಿಜೆಪಿ ಮುಖಂಡರು…

ಕೊಳ್ಳೇಗಾಲ ರೇಷ್ಮೆಗೂಡು ಮಾರುಕಟ್ಟೆಗೆ ರೇಷ್ಮೆ ಸಚಿವರ ಭೇಟಿ
ಚಾಮರಾಜನಗರ

ಕೊಳ್ಳೇಗಾಲ ರೇಷ್ಮೆಗೂಡು ಮಾರುಕಟ್ಟೆಗೆ ರೇಷ್ಮೆ ಸಚಿವರ ಭೇಟಿ

July 26, 2018

ಚಾಮರಾಜನಗರ:  ರೇಷ್ಮೆ ಬೆಳೆಗಾರರು, ರೈತರು ತರುವ ರೇಷ್ಮೆ ಗೂಡಿಗೆ ಮಧ್ಯವರ್ತಿಗಳ ಪ್ರವೇಶವಿಲ್ಲದೆ ನೇರವಾಗಿ ಬೆಳೆಗಾರರು ರೈತರಿಗೆ ಮಾರಾಟ ಹಣ ತಲುಪುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಕೊಳ್ಳೇಗಾಲ ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಗೆ ಇಂದು ಭೇಟಿ ನೀಡಿದ ಸಚಿವರು ಅಲ್ಲಿನ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ ಬಳಿಕ ಈ ವಿಷಯ ತಿಳಿಸಿದರು. ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಬೆಳೆಗಾರರಿಗೆ ಯಾವುದೇ ತೊಂದರೆ ಯಾಗಬಾರದು. ಅವರು ಬೆಳೆದ ರೇಷ್ಮೆಗೆ ಸರಿಯಾದ ರೀತಿಯಲ್ಲಿ ಹಣ ಸಿಗುವ ಹಾಗೆ ನೋಡಿಕೊಳ್ಳಬೇಕು….

1 52 53 54 55 56 74
Translate »