Tag: Chamarajanagar

ಪರಿಶಿಷ್ಟರ ಕಲ್ಯಾಣ ಯೋಜನೆ ಪ್ರಗತಿಗೆ ಡಿಸಿ ತಾಕೀತು
ಚಾಮರಾಜನಗರ

ಪರಿಶಿಷ್ಟರ ಕಲ್ಯಾಣ ಯೋಜನೆ ಪ್ರಗತಿಗೆ ಡಿಸಿ ತಾಕೀತು

July 22, 2018

ಚಾಮರಾಜನಗರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಯಡಿ ಬಿಡುಗಡೆಯಾಗುವ ಅನುದಾನ ವನ್ನು ಶೇ.100ರಷ್ಟು ಬಳಕೆ ಮಾಡಿ ಆಯಾ ಜಾತಿ ವರ್ಗದ ಜನತೆಯ ಕಲ್ಯಾಣಕ್ಕೆ ವಿನಿ ಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಿ ರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಇಲಾಖೆಗಳಿಗೆ ಆಯಾ ಕಾರ್ಯ ಕ್ರಮದ…

ಆಷಾಢ ಮಾಸದ ಮೊದಲ ಶುಕ್ರವಾರ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ
ಚಾಮರಾಜನಗರ

ಆಷಾಢ ಮಾಸದ ಮೊದಲ ಶುಕ್ರವಾರ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ

July 21, 2018

ಚಾಮರಾಜನಗರ: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಜಿಲ್ಲೆಯ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಸಾವಿರಾರು ಭಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು. ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಮಲೆಮಹದೇಶ್ವರಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ, ವೀರಭದ್ರೇಶ್ವರ, ಕಾಳಿಕಾಂಬ ಹಾಗೂ ಆದಿಶಕ್ತಿ ದೇವಸ್ಥಾನ, ಸಂತೇ ಮರಹಳ್ಳಿಯ ಶ್ರೀ ಮಹದೇಶ್ವರ ದೇವಸ್ಥಾನ, ಕಂದಹಳ್ಳಿಯ ಶ್ರೀ ಮಹದೇಶ್ವರ ದೇವಾ ಲಯ ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ದೇವಾ…

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ಅನುತ್ತೀರ್ಣಗೊಂಡ ವಿದ್ಯಾರ್ಥಿ ನೇಣಿಗೆ ಶರಣು
ಚಾಮರಾಜನಗರ

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ಅನುತ್ತೀರ್ಣಗೊಂಡ ವಿದ್ಯಾರ್ಥಿ ನೇಣಿಗೆ ಶರಣು

July 21, 2018

ಚಾಮರಾಜನಗರ, ಜು.20- ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ನಿವಾಸಿ ಸಿದ್ದಪ್ಪ ಎಂಬುವವರ ಮಗ ಅಕ್ಷಯ್(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಗರದ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಕ್ಷಯ್ ಕಳೆದ ಮಾರ್ಚ್‍ನಲ್ಲಿ ನಡೆದಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದನು. ನಂತರ ಇತ್ತೀಚೆಗೆ ನಡೆದ ಪೂರಕ ಪರೀಕ್ಷೆ ಬರೆದಿದ್ದ. ಗುರುವಾರ ಸಂಜೆ ಪೂರಕ ಫಲಿತಾಂಶ ಪ್ರಕಟಗೊಂಡಿತ್ತು. ಅದನ್ನು ನೋಡಿದ ಅಕ್ಷಯ್, ಆ ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡಿದ್ದನು….

2019ರ ಲೋಕಸಭಾ ಚುನಾವಣೆ – ಬಿಜೆಪಿಯಿಂದ ನಾನು ಟಿಕೆಟ್ ಆಕಾಂಕ್ಷಿ: ಅರುಣ್‍ಕುಮಾರ್
ಚಾಮರಾಜನಗರ

2019ರ ಲೋಕಸಭಾ ಚುನಾವಣೆ – ಬಿಜೆಪಿಯಿಂದ ನಾನು ಟಿಕೆಟ್ ಆಕಾಂಕ್ಷಿ: ಅರುಣ್‍ಕುಮಾರ್

July 21, 2018

ಚಾಮರಾಜನಗರ:  ನಗರದ ಖಾಸಗಿ ಹೊಟೇಲ್‍ನಲ್ಲಿ ಶುಕ್ರವಾರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಹಾಗೂ ಪಕ್ಷದ ಮುಖಂಡ ಅರುಣ್‍ಕುಮಾರ್ ಅವರು ಹಿತೈಷಿಗಳು ಹಾಗೂ ಯುವಕರ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಇದಕ್ಕಾಗಿ ಅಗತ್ಯವಾದ ಎಲ್ಲಾ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದೇನೆ. ಪಕ್ಷದ ಹಿರಿಯ ನಾಯಕರು, ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದೇನೆ. ಮೊದಲ ಹಂತವಾಗಿ ಚಾಮರಾಜನಗರದಲ್ಲಿರುವ ಹಿತೈಷಿಗಳು ಹಾಗೂ ಯುವಕರನ್ನು…

ಜು.23ರಂದು ನಗರದಲ್ಲಿ ಉದ್ಯೋಗ ಮೇಳ
ಚಾಮರಾಜನಗರ

ಜು.23ರಂದು ನಗರದಲ್ಲಿ ಉದ್ಯೋಗ ಮೇಳ

July 20, 2018

ಚಾಮರಾಜನಗರ:  ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಉದ್ಯೋಗ ಮೇಳವನ್ನು ಜು.23ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ. ಮೈಸೂರು, ಬೆಂಗಳೂರು ಮೂಲದ ಖಾಸಗಿ ಕಂಪನಿಗಳಾದ ಹೈಪ್ರೋಸೆಸ್ ಸರ್ವೀಸ್ (ಇಂಡಿಯಾ) ಪ್ರೈ. ಲಿ., ಯುರೇಕಾ ಫೋರ್ಬ್, ನವಭಾರತ್ ಫರ್ಟಿಲೈಸರ್ ಲಿ., ಬಿಎಸ್‍ಐ ಕಾರ್ಪೋ ರೇಷನ್, ಪದ್ಮ ಅಂಡ್ ಕೋ, ಇಮ್ಯಾನ್ಯುಯಲ್ ಸಾಫ್ಟ್ ಸ್ಕಿಲ್ ಪ್ರೈ. ಲಿ., ಗಿರೀಶ್ ಗಾರ್ಮೆಂಟ್ಸ್, ಚಾಮರಾಜನಗರದ ಎಲ್‍ಐಸಿ ಆಫ್ ಇಂಡಿಯಾ ಸೇರಿದಂತೆ ಇತರೆ ಕಂಪನಿಗಳು…

ನೈಸರ್ಗಿಕ ಸಂಪತ್ತು ರಕ್ಷಣೆ ಮೂಲಭೂತ ಕರ್ತವ್ಯ  ಜಿಲ್ಲಾ ನ್ಯಾಯಾಧೀಶರಾದ ಜಿ.ಬಸವರಾಜ
ಚಾಮರಾಜನಗರ

ನೈಸರ್ಗಿಕ ಸಂಪತ್ತು ರಕ್ಷಣೆ ಮೂಲಭೂತ ಕರ್ತವ್ಯ  ಜಿಲ್ಲಾ ನ್ಯಾಯಾಧೀಶರಾದ ಜಿ.ಬಸವರಾಜ

July 20, 2018

ಚಾಮರಾಜನಗರ:  ಅಮೂಲ್ಯವಾದ ನೈಸರ್ಗಿಕ ಸಂಪತ್ತಿನ ಬಗ್ಗೆ ಕಾಳಜಿ ವಹಿಸಿ ಪರಿಸರ ಸಂರಕ್ಷಿಸುವುದು ಪ್ರತಿ ಯೊಬ್ಬರ ಮೂಲಭೂತ ಕರ್ತವ್ಯವೂ ಆಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು. ನಗರದ ಹೊರವಲಯದಲ್ಲಿರುವ ಕರಿವರದರಾಜನ ಬೆಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಓಡಿಪಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವೃಕ್ಷ ಕ್ರಾಂತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಉತ್ತಮ ಪರಿಸರವಿದ್ದರೆ ಮಾನವ ಪ್ರಾಣಿಸಂಕುಲಗಳ ಜೀವಕ್ಕೂ ಸುರಕ್ಷತೆ ಇರುತ್ತದೆ. ಪರಿಸರ ನಾಶವಾದರೆ…

ಜು.26, ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಜಿಲ್ಲಾಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ ಆಯ್ಕೆ
ಚಾಮರಾಜನಗರ

ಜು.26, ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಜಿಲ್ಲಾಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ ಆಯ್ಕೆ

July 20, 2018

ಚಾಮರಾಜನಗರ: ಜಿಲ್ಲೆ ಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವನ್ನು ಅಸ್ತಿತ್ವಕ್ಕೆ ತರಲು ಚರ್ಚೆ ನಡೆದು, ಜು.26 ರಂದು ಮಹಾಸಭಾವನ್ನು ಉದ್ಘಾಟನೆ ಮಾಡುವ ಜೊತೆಗೆ ಜಿಲ್ಲಾಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ ಅವರನ್ನು ನೇಮಕ ಮಾಡಲು ಸಭೆಯಲ್ಲಿ ಸರ್ವನು ಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ನಗರದ ಭ್ರಮರಾಂಭ ಚಿತ್ರಮಂದಿರದ ಬಳಿ ಇರುವ ವಿಶ್ವಗುರು ಸೊಸೈಟಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಪ್ರಮುಖ ಲಿಂಗಾಯತ ಮುಖಂಡರು ಭಾಗವಹಿಸಿದ್ದರು. ಜು.26 ರಂದು ಬೆಳಗ್ಗೆ 11 ಗಂಟೆಗೆ ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಜಾಗತಿಕ ಲಿಂಗಾಯತ…

ಹೆದ್ದಾರಿಯಲ್ಲಿ ಚಿರತೆಗಳ ಚೆಲ್ಲಾಟ ವಾಹನ ಸವಾರರ ಪೇಚಾಟ
ಚಾಮರಾಜನಗರ

ಹೆದ್ದಾರಿಯಲ್ಲಿ ಚಿರತೆಗಳ ಚೆಲ್ಲಾಟ ವಾಹನ ಸವಾರರ ಪೇಚಾಟ

July 20, 2018

ಚಾಮರಾಜನಗರ:  ಕಾಡಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದ ಎರಡು ಚಿರತೆಗಳು ನಿಶ್ಚಿಂತೆಯಿಂದ ರಸ್ತೆ ಮಧ್ಯೆಯೇ ಚೆಲ್ಲಾಟದಲ್ಲಿ ತೊಡಗಿದ ಘಟನೆ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಪ್ರದೇಶದ ಬಣ್ಣಾರಿ ಘಾಟ್‍ನಲ್ಲಿ ಬುಧವಾರ ಕಂಡು ಬಂದಿದೆ. ಚಾಮರಾಜನಗರದಿಂದ ಸತ್ಯಮಂಗಲಂಗೆ ತೆರಳುವ ಮಾರ್ಗ ಮಧ್ಯೆ ಹಾಸನೂರು ದಾಟಿದ ನಂತರ ದಿಂಬಂನಲ್ಲಿ ಬಣ್ಣಾರಿ ಘಾಟ್ ಆರಂಭವಾಗುತ್ತದೆ. ಈ ಘಾಟ್‍ನ 27ನೇ ತಿರುವಿನಲ್ಲಿ ರಸ್ತೆ ಮಧ್ಯೆಯೇ ಎರಡು ಚಿರತೆಗಳು ಸರಸ ಸಲ್ಲಾಪದಲ್ಲಿ ತೊಡಗಿದವು. ಕರ್ನಾಟಕ ಮತ್ತು ತಮಿಳುನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾದ ಈ ರಸ್ತೆಯಲ್ಲಿ ಸದಾ ವಾಹನ…

ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ
ಚಾಮರಾಜನಗರ

ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ

July 20, 2018

ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ಆಗಸ್ಟ್ 15ರಂದು ಜಿಲ್ಲಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳು ವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸ್ವಾತಂತ್ರೋತ್ಸವ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮವನ್ನು ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ನಡೆಸ ಬೇಕು. ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣ ಹಾಗೂ ಸುಗಮ ಆಚರಣೆಗೆ…

ರಾಜ್ಯದಲ್ಲಿ ಅತಿವೃಷ್ಠಿ, ಜಿಲ್ಲೆಯಲ್ಲಿ ಅನಾವೃಷ್ಠಿ: ಭರ್ತಿಯಾಗದ ಜಿಲ್ಲೆಯ ಜಲಾಶಯ
ಚಾಮರಾಜನಗರ

ರಾಜ್ಯದಲ್ಲಿ ಅತಿವೃಷ್ಠಿ, ಜಿಲ್ಲೆಯಲ್ಲಿ ಅನಾವೃಷ್ಠಿ: ಭರ್ತಿಯಾಗದ ಜಿಲ್ಲೆಯ ಜಲಾಶಯ

July 19, 2018

ಚಾಮರಾಜನಗರ:  ಮಳೆಯ ಆರ್ಭಟಕ್ಕೆ ರಾಜ್ಯದ ಬಹುತೇಕ ಜಲಾಶಯ ಗಳು ಸಂಪೂರ್ಣ ಭರ್ತಿ ಆಗಿದೆ. ಈ ಜಲಾಶಯಗಳಿಂದ ಹೊರ ಬಿಡುತ್ತಿರುವ ನೀರಿ ನಿಂದ ಕೆರೆ ಕಟ್ಟೆಗಳು, ನದಿ, ತೊರೆ, ಕಾಲುವೆ ಗಳು ತುಂಬಿ ಹರಿಯುತ್ತಿವೆ. ಆದರೆ ಜಿಲ್ಲೆಯ ಪ್ರಮುಖ ಜಲಾಶಯಗಳು ನಿರೀಕ್ಷಿತ ಪ್ರಮಾಣದಲ್ಲಿ ನೀರಿಲ್ಲದೆ ಭಣಗುಡುತ್ತಿವೆ. ಇದು ರೈತರಲ್ಲಿ ಬೇಸರ ತರಿಸಿದೆ. ಆರಿದ್ರಾ ಮತ್ತು ಪುನರ್ವಸು ಮಳೆ ಯಿಂದ ರಾಜ್ಯದ ಬಹುತೇಕ ಜಲಾಶಯ ಗಳು ನೀರಿನಿಂದ ಸಂಪೂರ್ಣ ಭರ್ತಿಗೊಂಡು ನಳ ನಳಿಸುತ್ತಿವೆ. ಈ ಭಾಗದ ಕೆಆರ್‌ಎಸ್‌ ಹಾಗೂ ಕಬಿನಿ…

1 54 55 56 57 58 74
Translate »