ರಾಜ್ಯದಲ್ಲಿ ಅತಿವೃಷ್ಠಿ, ಜಿಲ್ಲೆಯಲ್ಲಿ ಅನಾವೃಷ್ಠಿ: ಭರ್ತಿಯಾಗದ ಜಿಲ್ಲೆಯ ಜಲಾಶಯ
ಚಾಮರಾಜನಗರ

ರಾಜ್ಯದಲ್ಲಿ ಅತಿವೃಷ್ಠಿ, ಜಿಲ್ಲೆಯಲ್ಲಿ ಅನಾವೃಷ್ಠಿ: ಭರ್ತಿಯಾಗದ ಜಿಲ್ಲೆಯ ಜಲಾಶಯ

July 19, 2018

ಚಾಮರಾಜನಗರ:  ಮಳೆಯ ಆರ್ಭಟಕ್ಕೆ ರಾಜ್ಯದ ಬಹುತೇಕ ಜಲಾಶಯ ಗಳು ಸಂಪೂರ್ಣ ಭರ್ತಿ ಆಗಿದೆ. ಈ ಜಲಾಶಯಗಳಿಂದ ಹೊರ ಬಿಡುತ್ತಿರುವ ನೀರಿ ನಿಂದ ಕೆರೆ ಕಟ್ಟೆಗಳು, ನದಿ, ತೊರೆ, ಕಾಲುವೆ ಗಳು ತುಂಬಿ ಹರಿಯುತ್ತಿವೆ. ಆದರೆ ಜಿಲ್ಲೆಯ ಪ್ರಮುಖ ಜಲಾಶಯಗಳು ನಿರೀಕ್ಷಿತ ಪ್ರಮಾಣದಲ್ಲಿ ನೀರಿಲ್ಲದೆ ಭಣಗುಡುತ್ತಿವೆ. ಇದು ರೈತರಲ್ಲಿ ಬೇಸರ ತರಿಸಿದೆ.

ಆರಿದ್ರಾ ಮತ್ತು ಪುನರ್ವಸು ಮಳೆ ಯಿಂದ ರಾಜ್ಯದ ಬಹುತೇಕ ಜಲಾಶಯ ಗಳು ನೀರಿನಿಂದ ಸಂಪೂರ್ಣ ಭರ್ತಿಗೊಂಡು ನಳ ನಳಿಸುತ್ತಿವೆ. ಈ ಭಾಗದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯ ಗಳು ಸಂಪೂರ್ಣ ಭರ್ತಿಗೊಂಡಿವೆ. ಜಲಾ ಶಯಗಳ ಹಿತದೃಷ್ಟಿಯಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ಕೊಳ್ಳ ಗಳಲ್ಲಿ ನೀರಿನ ಭೋರ್ಗರೆತ ಕೇಳುತ್ತಿದೆ. ಆದರೆ ಚಾಮರಾಜನಗರ ತಾಲೂಕಿನ ಅವಳಿ ಜಲಾಶಯಗಳಾದ ಚಿಕ್ಕಹೊಳೆ ಮತ್ತು ಸುವರ್ಣಾವತಿ ಜಲಾಶಯ, ಕೊಳ್ಳೇಗಾಲ ತಾಲೂಕಿನ ಗುಂಡಾಲ್, ಉಡುತೊರೆ, ಹೂಗ್ಯಂನ ಯರಂಬಾಡಿ, ಹುಬ್ಬೆ ಹುಣಸೆ, ಗೋಪಿನಾಥಂನ ಬಳಿ ಇರುವ ಜಲಾಶಯ ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರ ಹವಾಗಿಲ್ಲ. ಇದು ಈ ಭಾಗದ ರೈತಾಪಿ ಜನರನ್ನು ಚಿಂತೆಗೆ ಈಡು ಮಾಡಿದೆ.

ಕಳೆದ ಮೂರ್ನಾಲ್ಕು ವರ್ಷಗಳನ್ನು ಹೋಲಿಸಿ ನೋಡಿದರೆ, ಜಿಲ್ಲೆಗೆ ಈ ಬಾರಿ ಉತ್ತಮ ಮಳೆ ಆಗಿದೆ. ಇದರಿಂದ ರೈತರು ಹರ್ಷಗೊಂಡಿದ್ದರು. ರಾಜ್ಯದಲ್ಲಿ ಉತ್ತಮ ಮಳೆ ಬೀಳಲು ಆರಂಭವಾದಾಗ ನಮ್ಮ ಭಾಗಕ್ಕೂ ಉತ್ತಮ ಮಳೆ ಬೀಳಲಿದೆ. ಪ್ರಮುಖ ಜಲಾಶಯಗಳು, ಕೆರೆ-ಕಟ್ಟೆಗಳು ಭರ್ತಿ ಆಗಲಿದೆ ಎಂಬ ಆಶಾಭಾವನೆ ಸಹಜ ವಾಗಿಯೇ ರೈತರಲ್ಲಿ ಮೂಡಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಗೆ ಮಳೆ ಆಗದೆ ಜಲಾಶಯಗಳು ಹಾಗೂ ಕೆರೆ-ಕಟ್ಟೆಗಳು ನೀರಿಲ್ಲದೇ ಭಣಗುಡುತ್ತಿವೆ. ಇದು ರೈತರಲ್ಲಿ ಬೇಸರ ತರಿಸಿದೆ.

ಸುವರ್ಣಾವತಿ ಜಲಾಶಯದ ಗರಿಷ್ಠ ಮಟ್ಟ 2455 ಅಡಿ. ಪ್ರಸ್ತುತ ಜಲಾಶಯ ದಲ್ಲಿ 2432 ಅಡಿ ನೀರಿದ್ದು, 23 ಅಡಿ ಬಾಕಿ ಇದೆ. ಚಿಕ್ಕಹೊಳೆ ಜಲಾಶಯದ ಗರಿಷ್ಟ ಮಟ್ಟ 2474 ಅಡಿ. ಪ್ರಸ್ತುತ ಜಲಾಶಯ ದಲ್ಲಿ 2462 ಅಡಿ ನೀರು ಸಂಗ್ರಹ ಇದ್ದು, 12 ಅಡಿ ಬಾಕಿ ಇದೆ. ಕಳೆದ ಒಂದೆರೆಡು ತಿಂಗಳಿನಿಂದ ಈ ಜಲಾಶಯಗಳಿಗೆ ನೀರಿನ ಒಳ ಹರಿವು ಇಲ್ಲ. ಈ ಜಲಾಶಯಗಳಿಗೆ ನೀರು ಹರಿದು ಬರಬೇಕಿದ್ದರೆ ದಿಂಬಂ, ಬೇಡ ಗುಳಿ, ತಾಳವಾಡಿ, ಕೊಂಗಳ್ಳಿಬೆಟ್ಟದ ಪ್ರದೇಶಕ್ಕೆ ಮಳೆ ಬೀಳಬೇಕು. ಈ ಪ್ರದೇಶಗಳಲ್ಲಿ ಮಳೆ ಬಿದ್ದಿಲ್ಲ ಎಂದು ಸುವರ್ಣಾವತಿ ಜಲಾಶಯದ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಪ್ರಸಾದ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಗೊಂಡು ನಳ ನಳಿಸುತ್ತಿರುವ ದೃಶ್ಯ, ಭಾವಚಿತ್ರವನ್ನು ಮಾಧ್ಯಮಗಳಲ್ಲಿ ಪ್ರತಿನಿತ್ಯ ನೋಡುತ್ತಿರುವ ರೈತರು, ನಮ್ಮ ಭಾಗದ ಜಲಾಶಯಗಳು ಯಾವಾಗ ತುಂಬುತ್ತದೋ ಎಂಬುದನ್ನು ಎದುರು ನೋಡುತ್ತಿದ್ದಾರೆ.

Translate »