ಜು.26, ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಜಿಲ್ಲಾಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ ಆಯ್ಕೆ
ಚಾಮರಾಜನಗರ

ಜು.26, ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಜಿಲ್ಲಾಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ ಆಯ್ಕೆ

July 20, 2018

ಚಾಮರಾಜನಗರ: ಜಿಲ್ಲೆ ಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವನ್ನು ಅಸ್ತಿತ್ವಕ್ಕೆ ತರಲು ಚರ್ಚೆ ನಡೆದು, ಜು.26 ರಂದು ಮಹಾಸಭಾವನ್ನು ಉದ್ಘಾಟನೆ ಮಾಡುವ ಜೊತೆಗೆ ಜಿಲ್ಲಾಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ ಅವರನ್ನು ನೇಮಕ ಮಾಡಲು ಸಭೆಯಲ್ಲಿ ಸರ್ವನು ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಭ್ರಮರಾಂಭ ಚಿತ್ರಮಂದಿರದ ಬಳಿ ಇರುವ ವಿಶ್ವಗುರು ಸೊಸೈಟಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಪ್ರಮುಖ ಲಿಂಗಾಯತ ಮುಖಂಡರು ಭಾಗವಹಿಸಿದ್ದರು.

ಜು.26 ರಂದು ಬೆಳಗ್ಗೆ 11 ಗಂಟೆಗೆ ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಉದ್ಘಾಟನೆ ಸಮಾರಂಭದಲ್ಲಿ ಸಾಣೆ ಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತ್ ಶಿವಚಾರ್ಯ ಸ್ವಾಮೀಜಿ, ಕೂಡಲ ಸಂಗ ಮದ ಬಸವ ಮೃಂತ್ಯುಜಯ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಣ್ಣ ಮೊದಲಾದವರನ್ನು ಆಹ್ವಾನಿ ಸಲು ಸೂಚನೆ ನೀಡಲಾಯಿತು.

ಇದಕ್ಕೂ ಮುನ್ನಾ ಮಾತನಾಡಿದ ಲಿಂಗಾ ಯತ ಮುಖಂಡ ಕಾಳನಹುಂಡಿ ಗುರು ಸ್ವಾಮಿ, ಬಸವಣ್ಣನವರ ಅದರ್ಶಗಳನ್ನು ಪಾಲನೆ ಮಾಡುವ ಹಾಗು ಅವರ ತತ್ವ ಸಿದ್ದಾಂತಗಳನ್ನು ಪ್ರಚುರ ಪಡಿಸುವ ಜಾಗತಿಕ ಲಿಂಗಾಯತ ಮಹಾಸಭಾವನ್ನು ಜಿಲ್ಲೆಯಲ್ಲಿ ರಚನೆ ಮಾಡುವುದು ಅಗತ್ಯ ವಾಗಿದೆ. ಲಿಂಗಾಯತರು ಒಗ್ಗಟ್ಟಿನಿಂದ ಜಾಗೃತ ಲಿಂಗಾಯತ ಮಹಾಸಭಾದ ಸದ ಸ್ಯತ್ವವನ್ನು ಪಡೆದು, ಬಸವ ಧರ್ಮ ಸ್ಥಾಪನೆ ಹೋರಾಟದಲ್ಲಿ ತಾವುಗಳು ಸಕ್ರಿಯ ವಾಗಿ ಪಾಲ್ಗೋಳ್ಳಬೇಕು ಎಂದು ತಿಳಿಸಿ ದರು. ನಂತರ ಸಭೆಯಲ್ಲಿ ಜಿಲ್ಲಾ ಜಾಗತಿಕ ಮಹಾಸಭಾ ಅಧ್ಯಕ್ಷರಾಗಿ ಕಾಳನಹುಂಡಿ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಯಾಗಿ ಡಾ.ಗುರುಪ್ರಸಾದ್, ಖಜಾಂಚಿ ಯಾಗಿ ಶಿವಪ್ರಸಾದ್ ಎನ್.ಉಪಾಧ್ಯಕ್ಷ ರಾಗಿ ರಾಧಮಣಿ, ಕೊಳ್ಳೇಗಾಲ ಶಶಿ ಕುಮಾರ್, ಶಿವಕುಮಾರ್ ಯಳಂದೂರು, ಚಾ.ನಗರ ಪ್ರಧ್ವೀರಾಜ್, ಹೆಗ್ಗೋಠಾರ ಶಾಂತಪ್ಪ, ಪ್ರದೀಪ್‍ಕುಮಾರ್ ಅಂಕನ ಶೆಟ್ಟಿಪುರ, ಸುಂದ್ರಪ್ಪ ಕೊಳ್ಳೇಗಾಲ ಸೇರಿ ದಂತೆ ಅನೇಕರನ್ನು ಸಂಚಾಲಕರು ಹಾಗೂ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾ ಯಿತು. ಸಭೆಯಲ್ಲಿ ರೈತ ಸಂಘದ ಜಿಲ್ಲಾ ಧ್ಯಕ್ಷ ಹೊನ್ನೂರು ಪ್ರಕಾಶ್, ಎ.ಎಂ. ಗುರು ಸ್ವಾಮಿ ಸೇರಿದಂತೆ ಅನೇಕ ಲಿಂಗಾಯತ ಮುಖಂಡರು ಭಾಗವಹಿಸಿದ್ದರು.

Translate »