ಆಗಸ್ಟ್ 18,19 ಭರಚುಕ್ಕಿ ಜಲಪಾತೋತ್ಸವ
ಚಾಮರಾಜನಗರ

ಆಗಸ್ಟ್ 18,19 ಭರಚುಕ್ಕಿ ಜಲಪಾತೋತ್ಸವ

July 26, 2018
  • 1.5 ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ವೆಸ್ಲಿ ಸೇತುವೆ ದುರಸ್ತಿ
  • ಮಧ್ಯರಂಗ ದೇವಾಲಯ ಜೀಣೋದ್ಧಾರಕ್ಕೆ ಕ್ರಮ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಭರಚುಕ್ಕಿಯಲ್ಲಿ ಆಗಸ್ಟ್ 18 ಹಾಗೂ 19 ರಂದು ಜಲಪಾತೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಭರಚುಕ್ಕಿಯಲ್ಲಿರುವ ಮಯೂರ ಪ್ರವಾಸಿ ಮಂದಿರದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು.

ಭರಚುಕ್ಕಿಯಲ್ಲಿ ಆಯೋಜಿಸಲಾಗುವ ಎರಡು ದಿನಗಳ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿ ಸಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರ ಲಭ್ಯತೆಯನ್ನು ಸಹ ನೋಡಿಕೊಳ್ಳಲಾಗುತ್ತದೆ. ಬಹುತೇಕ ಆಗಸ್ಟ್ 18, 19 ರಂದೇ ಕಾರ್ಯಕ್ರಮ ನಿಗದಿಯಾಗಲಿದೆ ಎಂದರು.

ಜಲಪಾತೋತ್ಸವಕ್ಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಲಿದ್ದಾರೆ. ಈಗಾಗಲೇ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಭರಚುಕ್ಕಿಯಲ್ಲಿ ಪ್ರವಾಸಿಗರಿಗೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಈಗಾಗಲೇ 2.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ ಎಂದು ಸಚಿವರು ತಿಳಿಸಿದರು.

ಐತಿಹಾಸಿಕ ವೆಸ್ಲಿ ಸೇತುವೆ ಇತ್ತೀಚಿನ ನೀರಿನ ರಭಸಕ್ಕೆ ಒಂದು ಭಾಗ ಕೊಚ್ಚಿ ಹೋಗಿದೆ. ಇದರ ದುರಸ್ತಿ ಹಾಗೂ ಸೇತುವೆಯ ಸಂಪೂರ್ಣ ಬಲ ವರ್ಧನೆ ಕಾಮಗಾರಿಯನ್ನು 1.5 ಕೋಟಿ ರೂ. ವೆಚ್ಚದಲ್ಲಿ ಪುರಾತತ್ವ ಇಲಾಖೆ ನಿರ್ವಹಿಸಲಿದೆ. ಪಾರಂಪರಿಕ ಈ ಸೇತುವೆಯನ್ನು ಉಳಿಸಿ ಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಮಧ್ಯರಂಗ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ನಿರ್ವಹಿಸಲು ನಿರ್ದೇಶನ ನೀಡ ಲಾಗಿದೆ. ದೇವಾಲಯವು ಪ್ರವಾಸಿತಾಣಗಳ ವ್ಯಾಪ್ತಿಯಲ್ಲೇ ಬರುವುದರಿಂದ ದೇವಾಲಯ ಕಟ್ಟಡ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ನುಡಿದರು.

ಸತ್ತೇಗಾಲ ಹ್ಯಾಂಡ್‍ಪೋಸ್ಟ್‍ನಿಂದ ಭರಚುಕ್ಕಿವರೆಗಿನ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತದೆ. ಮಾರ್ಗ ಮಧ್ಯದ ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿ ಕೈಗೊಂಡು ಡಾಂಬರೀಕರಣ ಮಾಡಿ ಪ್ರವಾಸಿಗರಿಗೆ ಅನು ಕೂಲ ಕಲ್ಪಿಸಲಾಗುತ್ತದೆ ಎಂದರು.

ಭರಚುಕ್ಕಿ ಜಲಪಾತವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಅದಷ್ಟೂ ಜಲಪಾತದ ಸನಿಹದಲ್ಲೇ ಜಲಪಾತ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ಸುರಕ್ಷಿತವಾಗಿ ಹೋಗಿ ಬರಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಮಾತನಾಡಿ, ಭರಚುಕ್ಕಿಯಲ್ಲಿ ಆಂಪಿಥಿ ಯೇಟರ್‍ನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಲು ಈಗಾಗಲೇ ಲಭ್ಯವಿರುವ ಅನುದಾನ ಸಾಲುತ್ತಿರಲಿಲ್ಲ. ಹೀಗಾಗಿ ಪ್ರವಾಸೋದ್ಯಮ ಸಚಿವರು ಒಂದು ಕೋಟಿ ರೂ. ಅನುದಾನವನ್ನು ಆಂಪಿಥಯೇಟರ್ ನಿರ್ಮಿಸಲು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಕೃಷ್ಣ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ರಾಜು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು, ಹಿರಿಯ ಅಧಿಕಾರಿಗಳಾದ ಕುಮಾರ್ ಪುಷ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪ ವಿಭಾಗಾಧಿಕಾರಿ ಬಿ.ಫೌಜಿಯಾ ತರುನ್ನಮ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇ ಶಕರಾದ ಜನಾರ್ಧನ್ ಇತರೆ ಅಧಿಕಾರಿಗಳು ಇದ್ದರು.

ಇದಕ್ಕೂ ಮೊದಲು ಪ್ರವಾಸೋದ್ಯಮ ಸಚಿವರು ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು.

ಜಲಪಾತ ಪ್ರದೇಶದಲ್ಲಿ ನಿರ್ಮಾಣ ಮಾಡಿ ರುವ ಮೆಟ್ಟಿಲುಗಳು, ವೀಕ್ಷಣಾ ಸ್ಥಳ, ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಪರಿ ಶೀಲಿಸಿದರು. ಇದೇ ವೇಳೆ ಪ್ರವಾಸಿಗರು ಜಲ ಪಾತವನ್ನು ಹತ್ತಿರದಲ್ಲೇ ಸುರಕ್ಷಿತವಾಗಿ ವೀಕ್ಷಿಸಲು ಅನುವಾಗುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರು ಹೆಚ್ಚುವರಿ ಜಿಲ್ಲಾಧಿ ಕಾರಿ, ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಕೆಲ ಪ್ರವಾಸಿಗರು ಸ್ಥಳೀಯವಾಗಿ ಇನ್ನಷ್ಟೂ ಸೌಕರ್ಯಗಳನ್ನು ನೀಡುವಂತೆ ಮಾಡಿದ ಮನ ವಿಗೆ ಸಚಿವರು ಪೂರಕವಾಗಿ ಸ್ಪಂದಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

ಇದು ನಾಲ್ಕನೇ ಜಲಪಾತೋತ್ಸವ

ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ನಡೆಯುತ್ತಿರುವ ಜಲಪಾತೋತ್ಸವ ನಾಲ್ಕನೇ ಯದು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಇದುವರೆವಿಗೆ ಮೂರು ಬಾರಿ ಜಲಪಾತೋತ್ಸವ ನಡೆಸಲಾಗಿತ್ತು. 2007 ಆಗಸ್ಟ್ 11 ಮತ್ತು 12 ರಂದು ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜಲಪಾತೋತ್ಸವ ನಡೆಸಲಾಗಿತ್ತು. ಇದು ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ 2013 ಆಗಸ್ಟ್ 31 ಸೆಪ್ಟೆಂಬರ್ 1ರಂದು ಎರಡನೇ ಬಾರಿಗೆ, 2014 ಆಗಸ್ಟ್ 16 ಮತ್ತು 17ರಂದು ಮೂರನೇ ಬಾರಿಗೆ ಜಲಪಾತೋತ್ಸವ ನಡೆಸಲಾಗಿತ್ತು. ಈ ಬಾರಿ 4ನೇ ಜಲಪಾತೋತ್ಸವ ನಡೆಯುತ್ತಿದ್ದು, ಇದೂ ಸಹ ಆಗಸ್ಟ್ ತಿಂಗಳಿನಲ್ಲಿಯೇ ನಡೆಯುತ್ತಿರುವುದು ವಿಶೇಷವಾಗಿದೆ.

Translate »