ಕಾರಿಗೆ ಸಿಲುಕಿ ಮಗು ಸಾವು
ಚಾಮರಾಜನಗರ

ಕಾರಿಗೆ ಸಿಲುಕಿ ಮಗು ಸಾವು

August 1, 2018

ಚಾಮರಾಜನಗರ: ಆಟವಾಡುತ್ತಿದ್ದ 2 ವರ್ಷದ ಮಗು ಕಾರಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ.

ಗಾಳಿಪುರ ಬಡಾವಣೆಯ ಅಹಮದ್ ನಗರ ನಿವಾಸಿ ಅಸ್ಗರ್ ಪಾಷ ಎಂಬುವರ ಮಗ ಮಹಮ್ಮದ್ ಸುಹೇಬ್ (2) ಮೃತಪಟ್ಟ ಮಗು. ಮಹಮ್ಮದ್ ಸುಹೇಬ್ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅದೇ ಬಡಾವಣೆಯ ಶಕೀಲ್ ಎಂಬಾತ ಸ್ಕಾರ್ಪಿಯೋ ಕಾರನ್ನು ಹಿಮ್ಮುಖವಾಗಿ ಚಲಿಸಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ಮಗು ಕಾರಿನ ಚಕ್ರಕ್ಕೆ ಸಿಲುಕಿತು. ಇದರಿಂದ ತೀವ್ರವಾಗಿ ಗಾಯ ಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿತು ಎಂದು ಸಂಚಾರಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ದೀಪಕ್ ತಿಳಿಸಿದರು.

ಕಾರಿನ ಚಾಲಕ ಶಕೀಲ್‍ನನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Translate »