ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಆರೋಪಿ ಹೇಮಾವತಿ ವಿಚಾರಣೆ
ಮೈಸೂರು

ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಆರೋಪಿ ಹೇಮಾವತಿ ವಿಚಾರಣೆ

August 1, 2018

ಮೈಸೂರು:  ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾ ವಾಟಿಕೆ ನಡೆಸಿ, ಸಿಕ್ಕಿಬಿದ್ದಿರುವ ಆರೋಪಿ ಹೇಮಾವತಿ ಅಲಿಯಾಸ್ ಸಂಜನಾಳ ವಿಚಾರಣೆ ಮುಂದುವರಿದಿದೆ.

ಮೈಸೂರಿನ ವಿಜಯನಗರ ಹಾಗೂ ಹೂಟಗಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಯಲ್ಲಿ ಒಡನಾಡಿ ಸೇವಾ ಸಂಸ್ಥೆ ಸಹ ಯೋಗದಲ್ಲಿ ಪೊಲೀಸರು 2 ತಂಡ ಗಳಲ್ಲಿ ಏಕ ಕಾಲದಲ್ಲಿ ಜು.28ರಂದು ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಪಾರ್ಲರ್‍ಗಳ ಒಡತಿ ಹೇಮಾವತಿ ಸೇರಿದಂತೆ ಮೂವರನ್ನು ಬಂಧಿಸಿ, 6 ಮಹಿಳೆಯರನ್ನು ರಕ್ಷಿಸಲಾಗಿತ್ತು. ಸ್ವೈಪಿಂಗ್ ಮಿಷನ್, ಹಣ ವರ್ಗಾವಣೆ ರಶೀದಿಗಳು ಮತ್ತಿತರ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.

ಬಂಧಿತ ಆರೋಪಿಗಳನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿ, ಅನು ಮತಿಯೊಂದಿಗೆ ಹೆಚ್ಚಿನ ವಿಚಾರಣೆ ಗಾಗಿ ಪೊಲೀಸ್ ಕಸ್ಟಡಿಗೆ ಪಡೆದು, ತನಿಖೆ ಮುಂದುವರಿಸಲಾಗಿದೆ.

ಸಾರ್ವಜನಿಕರ ಆಕ್ರೋಶ: ತಮ್ಮ ನಡುವೆಯೇ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಸಂಗತಿ ಸುಸಂಸ್ಕೃತರನ್ನು ಕೆರಳಿಸಿದೆ. ಹೂಟಗಳ್ಳಿ ಯಲ್ಲಿರುವ ಐಶ್ವರ್ಯ ಬ್ಯೂಟಿ ಸಲೂನ್ ಮೇಲೆ ಸ್ಥಳೀಯರು ಕಲ್ಲು ತೂರಿ, ಗಾಜುಗಳನ್ನು ಪುಡಿಪುಡಿ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಒಂದೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಮತ್ತೊಂದೆಡೆ ಸಾರ್ವ ಜನಿಕರೂ ಜಾಗೃತರಾಗಿದ್ದಾರೆ. ಜೊತೆಗೆ ನಗರ ಪಾಲಿಕೆ ತಂಡವೂ ಬ್ಯೂಟಿ ಪಾರ್ಲರ್, ಸ್ಪಾಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ಯನ್ನು ಮುಂದುವರಿಸಿದೆ. ಪೊಲೀಸರ ನಿರಪೇಕ್ಷಣಾ ಪತ್ರ, ಉದ್ದಿಮೆ ಪರವಾ ನಗಿ ಇಲ್ಲದ ಪಾರ್ಲರ್‍ಗಳನ್ನು ಬಂದ್ ಮಾಡಿಸುವ ಎಚ್ಚರಿಕೆ ನೀಡಿದ್ದಾರೆ.

Translate »