ಉಡಿಗಾಲ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರ

ಉಡಿಗಾಲ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

August 1, 2018

ಚಾಮರಾಜನಗರ:  ಕ್ರೀಡೆಗಳು ಮಕ್ಕಳನ್ನು ಅಕರ್ಷಿಸುತ್ತದೆ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಮರಕೋತಿ ಅಟಗಳು ಈಗಲೂ ಗ್ರಾಮೀಣ ಭಾಗದಲ್ಲಿ ಅಟಗಳನ್ನು ಮಕ್ಕಳು ಅಡುತ್ತಾರೆ ಎಂದು ಉಡಿಗಾಲ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜಿ.ಮಹೇಶ್ ಅಭಿಪ್ರಾಯಪಟ್ಟರು.

ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಪಂ, ಸಾರ್ವ ಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಡಿ ಗಾಲ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾ ಕೂಟವನ್ನು ಮಂಗಳವಾರ ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾ ಭಿಮಾನಿಗಳು ಮತ್ತು ಕ್ರೀಡಾಪಟುಗಳು ಇದ್ದಾರೆ. ವಿದ್ಯಾರ್ಥಿಗಳು ಕ್ರೀಡೆ ಗಳಲ್ಲಿ ಸಾಧನೆ ಮಾಡಿದರೆ. ನಿಮ್ಮ ಮುಂದಿನ ಭವಿಷ್ಯ ಹಸನಾಗು ವುದು ಎಂದು ತಿಳಿಸಿದರು. ಕ್ರೀಡಾ ಧ್ವಜಾರೋಹಣ ಮಾಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಶಂಕರ್ ಮಾತನಾಡಿ, 5 ದಿನಗಳಿಂದ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಶಿಕ್ಷಕರ, ಜನಪ್ರತಿ ನಿಧಿಗಳ ಹಾಗೂ ಪೋಷಕರ ಬೆಂಬಲ ವ್ಯಕ್ತವಾಗಿದೆ. ಎಲ್ಲ ವಲ ಯದ ವಿದ್ಯಾರ್ಥಿಗಳು ಉತ್ತಮವಾಗಿ ಕ್ರೀಡೆಗಳಲ್ಲಿ ಸಂತೋಷ ದಿಂದ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಸದಸ್ಯ ಜಯರಾಜು, ಸಿದ್ದಲಿಂಗಮೂರ್ತಿ, ಸಂಚಾಲಕ ಎಂ.ಮಲಯನಾಯಕ, ಸೋಮಶೇಖರ, ಸುಬ್ಬಣ್ಣ, ಜಿ.ಮಹ ದೇವಯ್ಯ, ಕ್ಷೇತ್ರ ಶಿಕ್ಷಣ ಇಲಾಖೆ ಸಿ.ಆರ್.ಪಿ.ಕೆ. ಈಶ್ವರ್, ಜಿಲ್ಲಾ ದೈಹಿಕ ಶಿಕ್ಷರ ಸಂಘದ ಗೌರವ ಅಧ್ಯಕ್ಷ ಕುಮಾರಸ್ವಾಮಿ, ಸಂಘ ಟನಾ ಕಾರ್ಯದರ್ಶಿ ಚಿಕ್ಕಬಸವಯ್ಯ, ಹಾಗೂ ಗೋವಿಂದ ರಾಜು ಲಲಿತಾಪುಷ್ಪಕುಮಾರಿ, ಶಿವಮಲ್ಲಯ್ಯ, ನಟರಾಜು, ಶ್ವೇತ ಭಾಗವಹಿಸಿದ್ದರು.

Translate »