ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ
ಚಾಮರಾಜನಗರ

ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ

August 2, 2018

ಗುಂಡ್ಲುಪೇಟೆ:  ಲಂಚದ ಆರೋಪ ಹೊರಿಸಿ ನನ್ನನ್ನು ತೇಜೋವಧೆ ಮಾಡಲೆಂದು ಪ್ರಯತ್ನಿಸುತ್ತಿ ರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತಿಸಿದ್ದೇನೆ ಎಂದು ತಾಲೂಕಿನ ಬೇಗೂರು ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಸ್.ಚೇತನ್ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನರಹಿತರ ಪಟ್ಟಿ ಸಿದ್ಧಪಡಿಸಲು ಗ್ರಾಮ ಸಭೆಯನ್ನು ಬೇಗೂರು ಗ್ರಾಮದಲ್ಲಿ ಕರೆಯಲಾಗಿತ್ತು. ಈ ವೇಳೆ ಏಕಾಏಕಿ ಸಭೆಗೆ ಬಂದ ಬಾರ್ ಮಾಲೀಕ ಗೋವಿಂದ ಎಂಬುವರು ಬಾರ್ ಲೈಸೆನ್ಸ್ ನವೀಕರಣಕ್ಕಾಗಿ ಅಧ್ಯಕ್ಷರಿಗೆ 50 ಸಾವಿರ ಲಂಚ ನೀಡಿದ್ದೇನೆ ಎಂದು ಗಂಭೀರವಾಗಿ ಆರೋಪಿಸಿದ್ದರು. ಇದರಿಂದ ವಿಚಲಿತನಾದ ನಾನು ಉಪ್ಪು ಮುಟ್ಟಿ ಲಂಚ ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ನಾನು ಮನಸಾಕ್ಷಿಗೆ ಒಪ್ಪಿ ಪ್ರಮಾಣ ಮಾಡಿದ್ದೇನೆ. ಆದರೆ ಆರೋಪ ಮಾಡಿರುವ ವ್ಯಕ್ತಿಗೆ ಮನಸಾಕ್ಷಿಯೇ ಇಲ್ಲದೆ ಸುಳ್ಳು ಆರೋಪ ಮಾಡಿದ್ದಾರೆ ಎಂದರು.

ಲೈಸನ್ಸ್ ವಿಚಾರವಾಗಿ ಮಾತನಾಡಿದ ಚೇತನ್, ದಿನಾಂಕ 01.07.2015 ರಂದು ಬೇಗೂರು ಗ್ರಾಮಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆದಿದೆ. ಆದರೆ ಆರೋಪ ಮಾಡಿರು ವವರು ದಿನಾಂಕ 18.05.2015 ರಂದು ಲೈಸೆನ್ಸ್ ನವೀಕರಣ ಮಾಡಿಕೊಂಡಿದ್ದಾರೆ. ಹಾಗಾಗಿ ಲಂಚದ ಆರೋಪ ಶುದ್ದ ಸುಳ್ಳು ಹಾಗೂ ಪಿತೂರಿಯಿಂದ ಕೂಡಿದೆ. ಆರೋಪ ಮಾಡಿರುವ ಗೋವಿಂದರ ವರು ತಮ್ಮ ಬಾರ್ ಅಂಡ್ ರೆಸ್ಟೋ ರೆಂಟಿಗೆ ನನ್ನ ಅವಧಿಯ ಆಡಳಿತ ಮಂಡಳಿ ಬರುವ ಎರಡು ತಿಂಗಳ ಹಿಂದೆ ಲೈಸೆನ್ಸ್ ಪಡೆದಿದ್ದಾರೆ. ಹಾಗಾಗಿ ನಾನು ಹಣ ಪಡೆಯುವ ಅಥವಾ ಲೈಸೆನ್ಸ್ ನವೀಕರಣ ಮಾಡುವ ಪ್ರಮೇಯವೇ ಇಲ್ಲ. ಗ್ರಾಮ ಪಂಚಾಯಿತಿಗೆ ಕಳಂಕ ತರಲು ವ್ಯವಸ್ಥಿತ ಸಂಚು ನಡೆಸಿದ್ದ ಕೆಲವರಿಂದ ಈ ಪ್ರಸಂಗ ನಡೆದಿದೆ. ಈ ಆರೋಪ ದಿಂದ ಬಹಳ ನೊಂದಿದ್ದು, ಕಾನೂನಿನ ಹೋರಾಟಕ್ಕೆ ಚಿಂತಿಸಿದ್ದೇನೆ ಎಂದು ದಾಖಲಾತಿಗಳನ್ನು ಪ್ರದರ್ಶಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಧ್ಯಕ್ಷ ಚೇತನ್, ತಪ್ಪು ಮಾಡಿದ್ದರೆ ನಾನೇಕೆ ಉಪ್ಪು ಮುಟ್ಟುತ್ತಿದ್ದೆ. ಉದ್ದೇಶಪೂರ್ವಕ ವಾಗಿ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೇಗೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವ ಶೆಟ್ಟಿ, ತಿಮ್ಮಮ್ಮ, ಸತೀಶ್, ಗ್ರಾಪಂ ಮಾಜಿ ಸದಸ್ಯರಾದ ವೆಂಕಟೇಶ್, ಸುರೇಶ್, ಗ್ರಾಮದ ಮುಖಂಡರಾದ ಶಿವಮೂರ್ತಿ, ಮಾದೇಗೌಡ್ರು, ದೇವಶೆಟ್ಟಿ, ಮಂಜು£ Áಥ್, ಕಪನಿಪತಿ, ಪುಟ್ಟು, ಚಂದ್ರಪ್ರಸಾದ್, ಇತರರು ಇದ್ದರು.

Translate »