Tag: Dairy Farming

ರೈತರು ಹೈನುಗಾರಿಕೆ ಲಾಭ ಪಡೆಯಲು ಸಲಹೆ
ಮೈಸೂರು

ರೈತರು ಹೈನುಗಾರಿಕೆ ಲಾಭ ಪಡೆಯಲು ಸಲಹೆ

September 25, 2018

ಗುಂಡ್ಲುಪೇಟೆ:  ‘ಮಾರುಕಟ್ಟೆಯಲ್ಲಿ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೆಲೆ ದೊರಕುತ್ತಿರುವುದರಿಂದ ಹೈನುಗಾರರು ಇದರ ಲಾಭ ಪಡೆದುಕೊಳ್ಳ ಬೇಕು’ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು. ತಾಲೂಕಿನ ಬೇಲುಕುಪ್ಪದೆ ಹಾಲು ಉತ್ಪಾ ದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪ ಕಸುಬಾಗಿದ್ದ ಹೈನು ಗಾರಿಕೆ ಇತ್ತೀಚೆಗೆ ರೈತರ ಪ್ರಧಾನ ಕಸುಬಾಗಿದೆ. ಅಂತರ್ಜಲ ಹಾಗೂ ಮಳೆಯ ಕೊರತೆಯಿಂದ ಹೆಚ್ಚಿನ ರೈತರು ಹೈನುಗಾರಿಕೆ ಯನ್ನೇ ಅವಲಂಬಿಸುವಂತಾಗಿದೆ. ಆಸಕ್ತಿ ಇರುವ ರೈತರಿಗೆ ಚಾಮುಲ್ ವತಿಯಿಂದ ಉಚಿತ ತರಬೇತಿ ಹಾಗೂ…

ಹೈನುಗಾರಿಕೆ ಅಭಿವೃದ್ಧಿಗೆ ನಬಾರ್ಡ್‍ನಿಂದ  440 ಕೋಟಿ ರೂ. ಬಿಡುಗಡೆ
ಮೈಸೂರು

ಹೈನುಗಾರಿಕೆ ಅಭಿವೃದ್ಧಿಗೆ ನಬಾರ್ಡ್‍ನಿಂದ  440 ಕೋಟಿ ರೂ. ಬಿಡುಗಡೆ

September 16, 2018

ಮೈಸೂರು: ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ಜಾರಿಗೆ ತರುತ್ತಿರುವ 5 ಯೋಜನೆಗಳಿಗೆ ನಬಾರ್ಡ್ 440 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್ ಅವರು ಡೈರಿ ಪ್ರೊಸೆಸಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಫಂಡ್(ಡಿಐಡಿಎಫ್) ಅನ್ನು ಉದ್ಘಾಟನೆ ಮಾಡಿ ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಮೊದಲ ಕಂತಿನ 440 ಕೋಟಿ ರೂಪಾಯಿ ಹಣದ ಚೆಕ್ಕನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‍ಡಿಡಿಬಿ) ಅಧ್ಯಕ್ಷ ದಿಲೀಪ್ ರಾತ್…

ಹೈನುಗಾರಿಕೆಯಿಂದ ರೈತರ ಆರ್ಥಿಕ ಅಭಿವೃದ್ಧಿ: ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್
ಮೈಸೂರು

ಹೈನುಗಾರಿಕೆಯಿಂದ ರೈತರ ಆರ್ಥಿಕ ಅಭಿವೃದ್ಧಿ: ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್

September 16, 2018

ಚುಂಚನಕಟ್ಟೆ:  ದಿನ ನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ರೈತರಿಗೆ ಹಣ ಸಿಗುವಂತಹ ಸಂಸ್ಥೆ ಎಂದರೆ ಅದು ಹೈನುಗಾರಿಕೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾತ್ರ ಎಂದು ಎಂಸಿಡಿಸಿಸಿ ಹಾಗೂ ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್ ಹೇಳಿದರು. ತಾಲೂಕಿನ ದೆಗ್ಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2017 -18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈನುಗಾರಿಕಾ ಕ್ಷೇತ್ರವು ರೈತರಿಗೆ ಬಹುದೊಡ್ಡ ಸಂಸ್ಥೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮೈಸೂರು ಜಿಲ್ಲಾ ಹಾಲು…

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ
ಮೈಸೂರು

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ

August 5, 2018

ಮೈಸೂರು: ಬರಗಾಲದ ಸಂದರ್ಭದಲ್ಲೂ ರೈತನ ಬದುಕಿಗೆ ನೆರವಾಗುವುದು ಹೈನುಗಾರಿಕೆ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದಾರ್ಥನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಶನಿ ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರಗಾಲದಲ್ಲೂ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸಾಲ ತೀರಿಸಲು, ಜೀವನ ನಡೆಸಲು ಹೈನುಗಾರಿಕೆ ನೆರವು ನೀಡಿದೆ. ಕೆಲವು ಹಾಲು ಉತ್ಪಾದಕರ ಸೊಸೈಟಿಗಳು ಗುಣಮಟ್ಟದ ಹಾಲು ಒದಗಿಸುತ್ತಿದ್ದು, ಅಂತಹ ಕೇಂದ್ರಗಳು…

ಹೈನುಗಾರಿಕೆಯಿಂದ ಗ್ರಾಮೀಣ ಜನರ ಪಟ್ಟಣ ವಲಸೆ ತಡೆ
ಮೈಸೂರು

ಹೈನುಗಾರಿಕೆಯಿಂದ ಗ್ರಾಮೀಣ ಜನರ ಪಟ್ಟಣ ವಲಸೆ ತಡೆ

July 17, 2018

ಮೈಸೂರು: ಹೈನುಗಾರಿಕೆ, ಗ್ರಾಮೀಣ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು. ಮೈಸೂರಿನ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಸೋಮವಾರ ಮೈಸೂರು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ…

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ
ಚಾಮರಾಜನಗರ

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ

July 12, 2018

ಗುಂಡ್ಲುಪೇಟೆ: ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿ ರುವ ರೈತರು ಹೈನುಗಾರಿಕೆಯನ್ನೂ ಉಪ ಕಸುಬಾಗಿ ಕೈಗೊಂಡರೆ ಉತ್ತಮವಾಗಿ ಲಾಭ ಗಳಿಸಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಶಿವ ಪ್ರಸಾದ್ ಹೇಳಿದರು. ತಾಲೂಕಿನ ಭೋಗಯ್ಯನಹುಂಡಿ ಗ್ರಾಮ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾ ಗಿದ್ದ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಹಲವಾರು ರೈತರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಹೈನುಗಾರಿಕೆಯನ್ನೂ ಉಪ ಕಸುಬಾಗಿ ಕೈಗೊಂಡರೆ ಉತ್ತಮ ಲಾಭ…

Translate »