ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ
ಮೈಸೂರು

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ

August 5, 2018

ಮೈಸೂರು: ಬರಗಾಲದ ಸಂದರ್ಭದಲ್ಲೂ ರೈತನ ಬದುಕಿಗೆ ನೆರವಾಗುವುದು ಹೈನುಗಾರಿಕೆ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದಾರ್ಥನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಶನಿ ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರಗಾಲದಲ್ಲೂ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸಾಲ ತೀರಿಸಲು, ಜೀವನ ನಡೆಸಲು ಹೈನುಗಾರಿಕೆ ನೆರವು ನೀಡಿದೆ. ಕೆಲವು ಹಾಲು ಉತ್ಪಾದಕರ ಸೊಸೈಟಿಗಳು ಗುಣಮಟ್ಟದ ಹಾಲು ಒದಗಿಸುತ್ತಿದ್ದು, ಅಂತಹ ಕೇಂದ್ರಗಳು ಮತ್ತು ರೈತರನ್ನು ಸಾರ್ವ ಜನಿಕವಾಗಿ ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸಬೇಕಿದೆ ಎಂದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟ ತನ್ನದೇ ಆದ ಇತಿಹಾಸ ಹೊಂದಿದ್ದು, ಇದು ಇಷ್ಟೊಂದು ಅಭಿವೃದ್ಧಿಯಾಗಲು ನೌಕರರು -ಅಧಿಕಾರಿಗಳ ಶ್ರಮವೇ ಕಾರಣ. ಒಕ್ಕೂಟ ಅಭಿವೃದ್ಧಿಯಾದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಕ್ಕೂಟಕ್ಕೆ ಸಬ್ಸಿಡಿ ಒದಗಿಸಿದರು. ನಂತರ ಸಿದ್ದರಾಮಯ್ಯ ಅವರು ಒಕ್ಕೂಟ ಹಾಗೂ ಡೈರಿಗಳನ್ನು ಒಂದು ಮಾಡಿದರು ಎಂದು ತಿಳಿಸಿದರು.

ಯಡಿಯೂರಪ್ಪರವರು ಮೈಸೂರಲ್ಲಿ ಮೇಗಾ ಡೈರಿಗೆ ಶಂಕುಸ್ಥಾಪನೆ ಮಾಡಿದ್ದು, ಅದರಂತೆ ನಿರ್ಮಾಣವಾಗುತ್ತಿದೆ. ಒಕ್ಕೂಟದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ನಿವೇಶನ ಕಲ್ಪಿಸಿಕೊಡಿ. ಇದಕ್ಕೆ ಬೇಕಾದ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದರು.

2ನೇ ಬಾರಿ ಜಿಲ್ಲಾ ಉಸ್ತುವಾರಿ ಸಚಿವ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ 8 ತಿಂಗಳು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಈ ವೇಳೆ 1 ತಿಂಗಳು 10 ದಿನ ಅಧಿವೇಶನ ನಡೆ ಯಿತು. ಅಪಘಾತವಾಗಿ ಒಂದು ತಿಂಗಳು ವಿಶ್ರಾಂತಿ ಪಡೆದೆ. ಉಳಿದಂತೆ 4-5 ತಿಂಗಳು ಅಧಿಕಾರದಲ್ಲಿದ್ದೆ. ಆ ವೇಳೆಗೆ ಸರ್ಕಾರವೇ ಕುಸಿದು ಬಿತ್ತು ಎಂದು ಹಾಸ್ಯ ಭರಿತವಾಗಿ ಮಾತನಾಡಿದರು.

ರಾಜಕೀಯ ಸಲ್ಲದು: ಸಹಕಾರಿ ಕ್ಷೇತ್ರ ದಲ್ಲಿ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ಕಾರಣ, ಇಲ್ಲಿ ರಾಜಕೀಯಕ್ಕೆ ಪ್ರವೇಶವಿಲ್ಲ. ಎಲ್ಲಿ ರಾಜಕೀಯ ಪ್ರವೇಶವಾಗುತ್ತದೋ ಅಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಇದರಿಂದ ಪ್ರಮಾಣಿಕ ಸೇವೆಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ರಾಜಕೀಯ ಪ್ರವೇಶಿಸದಂತೆ ಕಾಪಾಡಿಕೊಂಡು ಹೋದಾಗ ಮಾತ್ರ ಸಂಸ್ಥೆ ಉಳಿಯುತ್ತದೆ. ಯಾವುದೇ ಪ್ರಭಾವಿ ವ್ಯಕ್ತಿ ಯಾದರೂ ರಾಜಕೀಯ ಪ್ರದರ್ಶಿಸ ಬಾರದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ತಾಳ್ಮೆ ಮುಖ್ಯ: ಮನುಷ್ಯನಿಗೆ ತಾಳ್ಮೆ ಎಂಬುದು ಬಹಳ ಮುಖ್ಯ. ನಮ್ಮ ಅಧಿಕಾರಕ್ಕಿಂತ ಸೇವೆಯನ್ನು ಜನರು ಗುರುತಿಸುತ್ತಾರೆ. ಹಾಗಾಗಿ ಈ ಬಾರಿ ರಾಜ್ಯದಲ್ಲಿ 37 ಸ್ಥಾನ ಗಳಿಸಿದ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ, ನಾನು ಸಚಿವ ನಾಗಿದ್ದೇನೆ. ಹಾಗಾಗಿ ತಮ್ಮ ಕ್ಷೇತ್ರಗಳಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡ ಬೇಕು ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್ ಮಾತನಾಡಿ, ಡೈರಿಯ ಬಗ್ಗೆ ಜಿ.ಟಿ.ದೇವೇಗೌಡರು ಹೆಚ್ಚು ಆಸಕ್ತಿ ಹೊಂದಿದ್ದು, ಸಹಕಾರಿ ಒಕ್ಕೂಟದಲ್ಲಿದ್ದಾ ಗಲೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಅವರಿಗೆ ಸಹಕಾರಿ ಖಾತೆ ನೀಡಬೇಕಿತ್ತು. ಆದರೆ, ಉನ್ನತ ಶಿಕ್ಷಣ ಖಾತೆ ದೊರೆ ತಿದ್ದು, ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟ ನಿರ್ದೇ ಶಕರಾದ ಕೆ.ಎಸ್.ಕುಮಾರ್, ಪ್ರಸನ್ನ, ಈರೇ ಗೌಡ, ಎಪಿಎಂಸಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ದ್ರಾಕ್ಷಾಯಿಣಿ, ಬಸವರಾಜಪ್ಪ, ಶಿವಲಿಂಗೇಗೌಡ ಮತ್ತಿತರರು ಇದ್ದರು.

Translate »