ಹೈನುಗಾರಿಕೆ ಅಭಿವೃದ್ಧಿಗೆ ನಬಾರ್ಡ್‍ನಿಂದ  440 ಕೋಟಿ ರೂ. ಬಿಡುಗಡೆ
ಮೈಸೂರು

ಹೈನುಗಾರಿಕೆ ಅಭಿವೃದ್ಧಿಗೆ ನಬಾರ್ಡ್‍ನಿಂದ  440 ಕೋಟಿ ರೂ. ಬಿಡುಗಡೆ

September 16, 2018

ಮೈಸೂರು: ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ಜಾರಿಗೆ ತರುತ್ತಿರುವ 5 ಯೋಜನೆಗಳಿಗೆ ನಬಾರ್ಡ್ 440 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್ ಅವರು ಡೈರಿ ಪ್ರೊಸೆಸಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಫಂಡ್(ಡಿಐಡಿಎಫ್) ಅನ್ನು ಉದ್ಘಾಟನೆ ಮಾಡಿ ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಮೊದಲ ಕಂತಿನ 440 ಕೋಟಿ ರೂಪಾಯಿ ಹಣದ ಚೆಕ್ಕನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‍ಡಿಡಿಬಿ) ಅಧ್ಯಕ್ಷ ದಿಲೀಪ್ ರಾತ್ ಅವರಿಗೆ ಹಸ್ತಾಂತರಿಸಿದರು.

ಈ ಹಣವನ್ನು ಕರ್ನಾಟಕದ ಐದು ಮತ್ತು ಪಂಜಾಬ್‍ನ ಒಂದು ಹಾಲು ಉತ್ಪಾದನಾ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ರಾಜ್ಯದ ಮೈಸೂರಿನ ಮೈಸೂರು ಹಾಲು ಒಕ್ಕೂಟ, ದಕ್ಷಿಣ ಕನ್ನಡ ಹಾಲು ಒಕ್ಕೂಟ (ಉಡುಪಿ), ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಲಾರ), ಕರ್ನಾಟಕ ಹಾಲು ಒಕ್ಕೂಟ (ರಾಮನಗರ) ಮತ್ತು ಕರ್ನಾಟಕ ಹಾಲು ಒಕ್ಕೂಟ (ಚನ್ನರಾಯಪಟ್ಟಣ) ಹಾಗೂ ಪಂಜಾಬಿನ ರೋಪರ್‍ನ ರೋಪರ್ ಹಾಲು ಒಕ್ಕೂಟದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಈ ಹಣವನ್ನು ವೆಚ್ಚ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Translate »