ರೈತರು ಹೈನುಗಾರಿಕೆ ಲಾಭ ಪಡೆಯಲು ಸಲಹೆ
ಮೈಸೂರು

ರೈತರು ಹೈನುಗಾರಿಕೆ ಲಾಭ ಪಡೆಯಲು ಸಲಹೆ

September 25, 2018

ಗುಂಡ್ಲುಪೇಟೆ:  ‘ಮಾರುಕಟ್ಟೆಯಲ್ಲಿ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೆಲೆ ದೊರಕುತ್ತಿರುವುದರಿಂದ ಹೈನುಗಾರರು ಇದರ ಲಾಭ ಪಡೆದುಕೊಳ್ಳ ಬೇಕು’ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು.

ತಾಲೂಕಿನ ಬೇಲುಕುಪ್ಪದೆ ಹಾಲು ಉತ್ಪಾ ದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪ ಕಸುಬಾಗಿದ್ದ ಹೈನು ಗಾರಿಕೆ ಇತ್ತೀಚೆಗೆ ರೈತರ ಪ್ರಧಾನ ಕಸುಬಾಗಿದೆ. ಅಂತರ್ಜಲ ಹಾಗೂ ಮಳೆಯ ಕೊರತೆಯಿಂದ ಹೆಚ್ಚಿನ ರೈತರು ಹೈನುಗಾರಿಕೆ ಯನ್ನೇ ಅವಲಂಬಿಸುವಂತಾಗಿದೆ. ಆಸಕ್ತಿ ಇರುವ ರೈತರಿಗೆ ಚಾಮುಲ್ ವತಿಯಿಂದ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಗಳನ್ನು ನೀಡಲಾಗುತ್ತಿದೆ. ಉತ್ತಮ ಗುಣ ಮಟ್ಟದ ಹಾಲು ಉತ್ಪಾದನೆ ಸಾಧ್ಯವಾಗುತ್ತದೆ. ಈ ಹಾಲಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರಕುವುದರಿಂದ ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಶ್ರೀಕಂಠಪ್ಪ ಮಾತನಾಡಿ, ಸಹಕಾರ ಸಂಘವು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ತನ್ನ ಕರ್ತವ್ಯವನ್ನು ಮಾಡುತ್ತಿದೆ. ಹಾಲು ಉತ್ಪಾದಕರು ಜಾನುವಾರುಗಳ ಆರೋಗ್ಯ ಮತ್ತು ವಿಮೆ ಸೇರಿದಂತೆ ಸೂಕ್ತ ಕಾಲದಲ್ಲಿ ಜಾನುವಾರುಗಳಿಗೆ ಸೂಕ್ತ ಲಸಿಕೆ ಹಾಕಿಸುವುದರೊಂದಿಗೆ ಅವುಗಳ ಬಗ್ಗೆ ಜಾಗೃತಿವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಚಾಮುಲ್ ಉಪವ್ಯವಸ್ಥಾಪಕ ಡಾ.ಎಸ್.ನಾಗಬಸವಣ್ಣ, ಸಹಾಯಕ ವ್ಯವಸ್ಥಾಪಕ ಸೋಮಣ್ಣ, ವಿಸ್ತರಣಾಧಿಕಾರಿ ಯು.ಆರ್.ಪ್ರಕಾಶ್, ಉಪಾಧ್ಯಕ್ಷ ಚಿಕ್ಕ ವೆಂಕಟಯ್ಯ, ನಿರ್ದೇಶಕರಾದ ಡಿ.ಮಾದಪ್ಪ (ಸ್ವಾಮಿ), ಪ್ರಕಾಶ್, ಎಂ.ಮಲ್ಲೇಶ್, ಮಹೇಶ್, ಮಲ್ಲಿಕಾರ್ಜುನಪ್ಪ, ಶಿವಣ್ಣಶೆಟ್ಟಿ, ನಂಜುಂಡನಾಯಕ, ಮಲ್ಲಿಕಾರ್ಜುನಪ್ಪ, ಮಾದಲಾಂಬಿಕ, ಗುರುಸಿದ್ದಮ್ಮ, ಮುಖ್ಯ ಕಾರ್ಯನಿರ್ವಾಹಕ ಶಿವಶಂಕರಪ್ಪ, ಸಿಬ್ಬಂದಿ ಗಳಾದ ಮೂರ್ತಿ, ಅಂಕಪ್ಪ ಇದ್ದರು.

Translate »