ಹೈನುಗಾರಿಕೆಯಿಂದ ರೈತರ ಆರ್ಥಿಕ ಅಭಿವೃದ್ಧಿ: ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್
ಮೈಸೂರು

ಹೈನುಗಾರಿಕೆಯಿಂದ ರೈತರ ಆರ್ಥಿಕ ಅಭಿವೃದ್ಧಿ: ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್

September 16, 2018

ಚುಂಚನಕಟ್ಟೆ:  ದಿನ ನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ರೈತರಿಗೆ ಹಣ ಸಿಗುವಂತಹ ಸಂಸ್ಥೆ ಎಂದರೆ ಅದು ಹೈನುಗಾರಿಕೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾತ್ರ ಎಂದು ಎಂಸಿಡಿಸಿಸಿ ಹಾಗೂ ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್ ಹೇಳಿದರು.

ತಾಲೂಕಿನ ದೆಗ್ಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2017 -18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈನುಗಾರಿಕಾ ಕ್ಷೇತ್ರವು ರೈತರಿಗೆ ಬಹುದೊಡ್ಡ ಸಂಸ್ಥೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟವು ರಾಜ್ಯಕ್ಕೆ ಮಾದರಿಯಾಗಿ ರೂಪಿತ ಗೊಂಡಿದ್ದು, ಇದಕ್ಕೆ ರೈತರ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಅದೇ ರೀತಿ ಮುಂಬರುವ ನವೆಂಬರ್ 26ಕ್ಕೆ 150 ಕೋಟಿ ವೆಚ್ಚದಲ್ಲಿ ನಿರ್ಮಣ ಗೊಳ್ಳುತ್ತಿರುವ ಮೇಗಾಡೈರಿಯನ್ನು ಪ್ರಾರಂಭಿಸಲಾಗುತ್ತಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಘಾ ಟಿಸಲಿದ್ದಾರೆ, ಎಂದರಲ್ಲದೆ ಟಿಎಪಿಸಿ ಎಂಎಸ್ ಅಧ್ಯಕ್ಷ ಎಸ್.ಸಿದ್ದೇಗೌಡ ಅವರ ಸಹಕಾರ ದಿಂದ ದೆಗ್ಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಸಾದ್ಯವಾಗಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿದ್ದೇ ಗೌಡ ಮಾತನಾಡಿ ಸಹಕಾರ ಸಂಘಗಳ ಮೂಲಕ ರೈತರು ಸಾಲ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಕಾಣ ಬಹುದಾಗಿದ್ದು, ಹಾಲು ಅತ್ಯಂತ ಸರಳ ವಾಗಿ ಸಿಗುವಂತಹ ಪೌಷ್ಠಿಕ ಆಹಾರ ವಾಗಿದ್ದು, ಯಾವುದೇ ಕಲಬೆರೆಕೆ ಮಾಡದೆ ಶುದ್ದವಾದ ಹಾಲನ್ನು ಡೈರಿಗೆ ಹಾಕುವ ಮೂಲಕ ಸಂಘದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು. ದೆಗ್ಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಸರ್ವ ಸದಸ್ಯರವ ಸಹಕಾರದಿಂದ 2017-18ನೇ ಸಾಲಿನಲ್ಲಿ 1 ಲಕ್ಷದ 80 ಸಾವಿರ ನಿವ್ವಳ ಲಾಭ ಗಳಿಸಿದ್ದು.

ಮುಂದಿನ ದಸರಾ ಹಬ್ಬದಂದು 83,785 ರೂ ಹಣವನ್ನು ಉತ್ಪಾದಕರಿಗೆ ಬೋನಸ್ ರೂಪದಲ್ಲಿ ನೀಡಲಾಗುವುದು ಎಂದರಲ್ಲದೆ ಉಳಿಕೆ ಹಣವನ್ನು ಸಂಘದ ನಿದಿಗೆ ಬಳಸ ಲಾಗುತ್ತದೆ ಎಂದು ಮನವರಿಕೆ ಮಾಡಿದರು.

ನಂತರ 2017-18ನೇ ಸಾಲಿನಲ್ಲಿ ಡೈರಿಗೆ ಅತೀ ಹೆಚ್ಚು ಹಾಲನ್ನು ಹಾಕಿ ದಂತಹ ಉತ್ಪಾದಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಸಣ್ಣತಮ್ಮೇ ಗೌಡ, ಸಂಘದ ಅಧ್ಯಕ್ಷೆ ಪಂಕಜ ಎಸ್. ಸಿದ್ದೇಗೌಡ, ಉಪಾದ್ಯಕ್ಷೆ ರೇಣುಕಾ ಕೆ. ಮಹದೇವ್, ನಿರ್ದೇಶಕರಾದ ಜಯಲಕ್ಷ್ಮಿ ಡಿ.ಎನ್. ಮಹದೇವ, ಲಕ್ಷ್ಮಮ್ಮ ಡಿ.ಎಸ್. ದೇವೇಂದ್ರ, ಲತಾ ಬೀರೇಗೌಡ, ಭಾರತಿ ಆರ್.ಜವರೇಗೌಡ, ಸಿಶೀಲಮ್ಮ ಕೋಲ್ಕರ್ ಶಿವಣ್ಣೇಗೌಡ, ಸಾಕಮ್ಮ ಡಿ.ಎನ್. ಮರೀಗೌಡ, ಮೀನಾಕ್ಷಿ ಚಂದ್ರಶೇಖರ್, ಶೈಲಜ ಜಯರಾಮು, ಪ್ರೇಮ ಎಸ್.ಕೃಷ್ಣ ಮೂರ್ತಿ, ಕಾರ್ಯದರ್ಶಿ ರೂಪ, ಹಾಲು ಪರೀಕ್ಷಕಿ ವಿಶಾಲಾಕ್ಷಿ, ಸಹಾಯಕಿ ಲಕ್ಷ್ಮಿ ಮತ್ತಿತರರು ಇದ್ದರು.

Translate »