ಹೆಜ್ಜೇನು ದಾಳಿಗೆ ರೈತ ಬಲಿ ಮತ್ತೋರ್ವ ರೈತನಿಗೆ ತೀವ್ರ ಗಾಯ
ಮೈಸೂರು

ಹೆಜ್ಜೇನು ದಾಳಿಗೆ ರೈತ ಬಲಿ ಮತ್ತೋರ್ವ ರೈತನಿಗೆ ತೀವ್ರ ಗಾಯ

September 16, 2018

ಹುಣಸೂರು, ಸೆ.15(ಕೆಕೆ)- ಹೆಜ್ಜೇನು ದಾಳಿಗೆ ರೈತನೋರ್ವ ಸಾವನ್ನಪ್ಪಿ, ಮತೋರ್ವ ರೈತ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಅಬ್ಬೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಹನಗೋಡು ಹೋಬಳಿ ಅಬ್ಬೂರು ಗ್ರಾಮದ ಚನ್ನಬಸವೇ ಗೌಡ ಎಂಬುವರ ಪುತ್ರ ಶಂಕರೇಗೌಡ(42) ಹೆಜ್ಜೇನು ದಾಳಿಗೆ ಸಾವನ್ನಪ್ಪಿದವ ನಾಗಿದ್ದು, ಈತನ ಸ್ನೇಹಿತ ರಾಮೇಗೌಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದಿನಂತೆ ಇಂದು ಬೆಳಿಗ್ಗೆ ಶಂಕರೇಗೌಡ ಮತ್ತು ರಾಮೇಗೌಡ ಜಮೀನಿಗೆ ತೆರಳಿದ ವೇಳೆ ಹಠಾತ್ತನೆ ಹೆಜ್ಜೇನು ಹಿಂಡು ಶಂಕರೇಗೌಡ ಮತ್ತು ರಾಮೇಗೌಡನ ಮೇಲೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಇವರಿಬ್ಬರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶಂಕರೇಗೌಡ ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Translate »