ಸರ್ಕಾರಿ ಕಾಲೇಜು ಹೆಚ್ವುವರಿ ಕೊಠಡಿಗೆ ಗುದ್ದಲಿ ಪೂಜೆ
ಮೈಸೂರು

ಸರ್ಕಾರಿ ಕಾಲೇಜು ಹೆಚ್ವುವರಿ ಕೊಠಡಿಗೆ ಗುದ್ದಲಿ ಪೂಜೆ

September 16, 2018

ಕೆ.ಆರ್.ನಗರ:  ತಾಲೂಕಿನ ಹೆಬ್ಬಾಳು ಸರ್ಕಾರಿ ಕಿರಿಯ ಕಾಲೇಜಿನ ಹೆಚ್ಚುವರಿ ಕೊಠಡಿಗಳ 55 ಲಕ್ಷ ರೂ.ಗಳ ಕಾಮಗಾರಿಗೆ ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಮಾದೇಗೌಡ ಮತ್ತು ಹರೀಶ್ ಗುದ್ದಲಿ ಪೂಜೆ ಮಾಡಿದರು. ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಇದ್ದ ಕಾರಣ ಗ್ರಾಮದ ಮುಖಂಡರುಗಳು ಸಚಿವ ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಿಂದ ಮಂಜುರಾತಿ ಮಾಡಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಯುವ ಘಟಕದ ಮಾಜಿ ಅಧ್ಯಕ್ಷ ಹೆಬ್ಬಾಳು ಸುಜಯ್ ಮಾತನಾಡಿ, ಸಚಿವ ಸಾ.ರಾ.ಮಹೇಶ್‍ರವರನ್ನು ಕೇಳಿ ಹೆಬ್ಬಾಳು ಕೊಪ್ಪಲು ಗ್ರಾಮದ ಮುಖ್ಯ ರಸ್ತೆಯಿಂದ ಕಾಲೇಜು ತನಕ ಕಾಂಕ್ರೀಟ್ ರಸ್ತೆಯನ್ನು ಮಂಜೂರಾತಿ ಮಾಡಿಸಲಾಗಿದೆ ಸದ್ಯದಲ್ಲಿಯೇ ಸಚಿವರೇ ಕಾಮಗಾರಿಗೆ ಚಾಲನೆ ನೀಡುವರೆಂದು ತಿಳಿಸಿದರು.
ಹೆಬ್ಬಾಳು ಮತ್ತು ಹೆಬ್ಬಾಳು ಕೊಪ್ಪಲು ಮತ್ತು ಬೀರನಹಳ್ಳಿ ಮಾರ್ಗದ ರಸ್ತೆಯನ್ನು ಅಗಲೀಕರಣ ಮಾಡಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೆ 2 ಕೋಟಿ ಅನುದಾನವನ್ನು ಕೇಳಿ ಪ್ರಸ್ತಾವನೆಗೆ ಕಳಿಸಲಾಗಿದೆ ಅದೇಶ ಬಂದ ನಂತರ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಬಿಸುತ್ತೇವೆ ಈ ಕಾರ್ಯಕ್ಕೆ ಗ್ರಾಮದವರೆಲ್ಲರೂ ಸಹಕಾರ ನೀಡಬೇಕೆಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಮತ್ತು ಗುತ್ತಿಗೆದಾರ ಎಚ್.ಪಿ.ಶಿವಣ್ಣ, ದೀಪು, ದಿನೇಶ್, ಸಂತೋಷ್, ಪ್ರೇಮಕುಮಾರ್, ದೊರೆ, ಸೂರಿ, ಸತೀಶ್, ಅನಂತ್‍ಸ್ವಾಮಣ್ಣ ಮತ್ತಿತರರು ಹಾಜರಿದ್ದರು.

Translate »