ಜಾದೂ, ಮಾತನಾಡುವ ಗೊಂಬೆ ಕಾರ್ಯಕ್ರಮ
ಮೈಸೂರು

ಜಾದೂ, ಮಾತನಾಡುವ ಗೊಂಬೆ ಕಾರ್ಯಕ್ರಮ

September 16, 2018

ಮೈಸೂರು: ಮೈಸೂರಿನ ರಾಘ ವೇಂದ್ರನಗರದಲ್ಲಿರುವ ಶ್ರೀ ಬಸವೇಶ್ವರ ಮಠ ಶ್ರೀ ಮಲೆ ಮಹದೇಶ್ವರ ದೇವಸ್ಥಾನ ದಲ್ಲಿ ನಾಳೆ (ಸೆ. 16) ಬೆಳಿಗ್ಗೆ 9 ಗಂಟೆಗೆ ಸ್ವರ್ಣ ಗೌರಿ ಮತ್ತು ಶ್ರೀ ಗಣೇಶ ವ್ರತ, ಶ್ರೀ ಬಸವ ಜಯಂತಿ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ವಿಶೇಷ ಪೂಜಾ ಮಹೋತ್ಸವ ಏರ್ಪ ಡಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮಿಗಳು ಸಾನಿಧ್ಯ ವಹಿಸುವರು. ರಾಮಾನುಜ ರಸ್ತೆಯಲ್ಲಿರುವ ಶ್ರೀ ಮಡಿವಾಳ ಸ್ವಾಮಿ ಮಠದ ಶ್ರೀ ಇಮ್ಮಡಿ ಮಡಿವಾಳ ಸ್ವಾಮಿಗಳು ಆಶೀರ್ವಚನ ನೀಡು ವರು. ಅಂದು ಬೆಳಿಗ್ಗೆ 9 ಗಂಟೆಗೆ ಬಿಗ್‍ಬಾಸ್ ಖ್ಯಾತಿಯ ಶ್ರೀಮತಿ ಸುಮಾ ರಾಜಕುಮಾರ್ ಅವರಿಂದ ಜಾದು ಹಾಗೂ ಮಾತನಾಡುವ ಗೊಂಬೆ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿ ಸಲಾಗಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ, ಮಧ್ಯಾಹ್ನ 2 ಗಂಟೆಗೆ ಗೌರಿ ಮತ್ತು ಗಣೇಶ ವಿಸರ್ಜನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಮೈಸೂರು ನಗರಪಾಲಿಕೆ ಸದಸ್ಯರು ಹಾಗೂ ಜನಪತ್ರಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀ ಬಸವೇಶ್ವರ ಮಠ ಮತ್ತು ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀ ಶಂಕರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »