ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕುಪ್ಪರವಳ್ಳಿ ಗ್ರಾಮದಲ್ಲಿ ಸ್ವಚ್ಛತಾ ದಿನ
ಮೈಸೂರು

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕುಪ್ಪರವಳ್ಳಿ ಗ್ರಾಮದಲ್ಲಿ ಸ್ವಚ್ಛತಾ ದಿನ

September 16, 2018

ನಂಜನಗೂಡು:  ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಇಂದು ಸುತ್ತೂರಿನ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜನ ಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮಿ ಮಾತನಾಡಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಅಭಿಯಾನ ವನ್ನು ಹಮ್ಮಿಕೊಂಡಿದೆ. 2014 ರಿಂದ ಪ್ರಾರಂಭಿಸಲಾದ ಈ ಯೋಜನೆಗೆ 4 ವರ್ಷ ಗಳು ಸಂದಿದ್ದು, ನಾವುಗಳೆಲ್ಲರೂ ಈ ಅಭಿ ಯಾನದಲ್ಲಿ ಭಾಗವಹಿಸಿ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಅದರ ಮಹತ್ವ ವನ್ನು ಎಲ್ಲರಿಗೂ ತಿಳಿಸೋಣ ಎಂಬ ಆಶಯ ವನ್ನು ವ್ಯಕ್ತಪಡಿಸಿದರು.

ಕೇಂದ್ರದ ಮುಖ್ಯಸ್ಥರಾದ ಡಾ. ಅರುಣ್ ಬಳಮಟ್ಟಿಯವರು, ಶಾಲೆಯ ಒಳ ಮತ್ತು ಹೊರ ಆವರಣವನ್ನು ಸ್ವಚ್ಛವಾಗಿಡುವುದರ ಜೊತೆಗೆ ಮನೆಯ ಸುತ್ತ ಮುತ್ತ ಹಾಗೂ ಊರಿನ ಸ್ವಚ್ಛತೆಯನ್ನು ಕಾಪಾಡುವುದರಿಂದ ಗ್ರಾಮದ ನೈರ್ಮಲ್ಯವನ್ನು ಕಾಪಾಡಬಹುದು. ಮಕ್ಕಳು ಪ್ರತಿ ದಿನ ಸ್ನಾನ ಮಾಡಿ ಸ್ವಚ್ಛ ಬಟ್ಟೆ ಗಳನ್ನು ಧರಿಸಬೇಕೆಂದು ಕಿವಿ ಮಾತು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಮ್ಮ ರವರು ಮಾತನಾಡಿ, ಮಕ್ಕಳು ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನಹರಿಸುವುದು ಮತ್ತು ಶಾಲೆಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ನಾವೆಲ್ಲರು ಒಟ್ಟಾಗಿ ಸ್ವಚ್ಛತೆಯಲ್ಲಿ ತೊಡಗಿಕೊಂಡು ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡೋಣವೆಂದು ನುಡಿದರು.

ಕೆವಿಕೆ ಅಧೀಕ್ಷಕ ಶ್ರೀ ಸುಂದರ ರಾಜುರವರು ಮಾತನಾಡಿ ಸ್ವಚ್ಛ ಭಾರತ ಎಂಬುದು ಮಹಾತ್ಮಾ ಗಾಂಧಿಯವರ ಕನಸಾಗಿತ್ತು. ಆ ಕನಸನ್ನು ಸಾಕಾರಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛತಾ ಅಭಿಯಾನವನ್ನು ಜಾರಿಗೆ ತಂದಿದ್ದಾರೆ. ನಾವುಗಳೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಶಾಲೆ, ಮನೆ, ಊರು, ನಗರ ಹೀಗೆ ತಳಮಟ್ಟದಿಂದ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದರೆ ಗಾಂಧೀಜಿಯವರ ಸುಂದರ ಭಾರತದ ಕನಸು ನನಸಾಗುವು ದೆಂಬ ಆಶಯ ವ್ಯಕ್ತ ಪಡಿಸಿದರು.
ಕೇಂದ್ರದ ಕ್ಷೇತ್ರ ವ್ಯವಸ್ಥಾಪಕ ಗಂಗಪ್ಪ ಹಿಪ್ಪರಗಿಯವರು ಮಾತನಾಡಿ, ಮಕ್ಕಳು ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಮತ್ತು ಮನೆಯ ಸದಸ್ಯರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಶಿಕ್ಷಕ- ಶಿಕ್ಷಕಿಯರು, ಶಾಲಾಭಿ ವೃದ್ಧಿಯ ಅಧ್ಯಕ್ಷ ಶ್ರೀ ಮಲ್ಲುಸ್ವಾಮಿ ಯವರು, ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿ ಕುಪ್ಪರವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಲಾಯಿತು.

Translate »