ಯುವಕರ ತಂಡದಿಂದ `ಸ್ವಚ್ಛತೆಯೇ ಸೇವೆ’ ಆಂದೋಲನಕ್ಕೆ ಚಾಲನೆ
ಮೈಸೂರು

ಯುವಕರ ತಂಡದಿಂದ `ಸ್ವಚ್ಛತೆಯೇ ಸೇವೆ’ ಆಂದೋಲನಕ್ಕೆ ಚಾಲನೆ

September 16, 2018

ಮೈಸೂರು:  ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೆ.15ರಿಂದ ಅ.2ರವರೆಗೆ `ಸ್ವಚ್ಛತೆಯೇ ಸೇವೆ’ ಹೆಸರಿನಲ್ಲಿ ಭಾರತ ಸ್ವಚ್ಛತೆಗೆ ಕರೆ ನೀಡಿದ್ದು, ಇದರ ಅಂಗವಾಗಿ ಮೈಸೂರಿನ ಹೆಚ್.ವಿ.ರಾಜೀವ್ ಸ್ನೇಹ ಬಳಗದ ಸಹಯೋಗದಲ್ಲಿ ಯುವಕರ ತಂಡ ಶನಿವಾರ ಮೈಸೂರಿನ ಕುವೆಂಪುನಗರದ ಮರುಳೇಶ್ವರ ದೇವಸ್ಥಾನ ಆವರಣ ವನ್ನು ಸ್ವಚ್ಛಗೊಳಿಸಿತು. ಕುವೆಂಪುನಗರದ ಕಾವೇರಿ ಸ್ಕೂಲ್ ಎದುರು, ಅಪೋಲೋ ಆಸ್ಪತ್ರೆ ಮುಖ್ಯ ರಸ್ತೆಯಲ್ಲಿರುವ ಮರುಳೇಶ್ವರ ದೇವಸ್ಥಾನ ಆವರಣದಲ್ಲಿ ಯುವಕರ ತಂಡ `ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್.ವಿ.ರಾಜೀವ್ ಸ್ನೇಹ ಬಳಗದ ರಂಗನಾಥ್, ಕುಮಾರ್, ಮನ್‍ಕಿ ಬಾತ್ ಸಂತೋಷ್, ಅಶೋಕ್ ಮಿರಜ್‍ಕರ್ ಇನ್ನಿತರರು ಭಾಗವಹಿಸಿದ್ದರು.

Translate »