ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯುವುದಿಲ್ಲ
ಮೈಸೂರು

ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯುವುದಿಲ್ಲ

September 16, 2018

ನಂಜನಗೂಡು:  ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯು ವುದಿಲ್ಲ ಎಂದು ನಂಜನಗೂಡು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಹೇಳಿದರು.

ಶನಿವಾರ ತಾಲೂಕಿನ ಕೂಡ್ಲಾಪುರ ಪಂಚಾಯಿತಿ ವ್ಯಾಪ್ತಿಗೆ ಬರುವ ಹುಣಸ ನಾಳು, ತರದಲೆ, ಬಾಗೂರು ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ಕೂಡ್ಲಾಪುರದಲ್ಲಿ 12 ಲಕ್ಷ ವೆಚ್ಚದಲ್ಲಿ ವಾಲ್ಮಿಕಿ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ನೆರ ವೇರಿಸಿ ಜನಸಂಪರ್ಕ ಸಭೆಯಲ್ಲಿ ಭಾಗ ವಹಿಸಿ ಅವರು ಮಾತನಾಡುತ್ತಿದ್ದರು. ನಾನು ಗೆದ್ದ ನಂತರ ನಿಮ್ಮ ಬಳಿಗೆ ಬಂದು ನಿಮಗೆ ಕೃತಜ್ಞತೆ ಸಲ್ಲಿಸಲು ಹಲವಾರು ಕಾರಣ ಗಳಿಂದ 4 ತಿಂಗಳು ಬೇಕಾಯಿತು. ಇಲ್ಲಿ ಯವರೆಗೆ ಶಾಸಕರಿಗೆ ಯಾವುದೇ ಅನು ಧಾನ ಬಂದಿಲ್ಲ. ಕಳೆದ ಬಾರಿ ದಸರಾ ಆಚರಣೆಗೆ 15 ಕೋಟಿ ನೀಡಿತ್ತು. ಈ ಬಾರಿ ಸಂಪ್ರದಾಯ ದಸರಾ ಆಚರಿಸುತ್ತೇ ವೆಂದು ಹೇಳಿ 25 ಕೋಟಿ ಬಿಡುಗಡೆ ಮಾಡುತ್ತಿದ್ದಾರೆ. ರೈತರಿಗೆ ಸಾಲ ಮನ್ನಾ ಮಾಡಿದ್ದಾರೆ ಯಾವ ರೀತಿ ಮಾಡಿದ್ದಾ ರೆಂಬುದು ಇನ್ನೂ ಸ್ಪಷ್ಟತೆ ಇಲ್ಲದೇ ರೈತರು ಸುಸ್ತಾಗಿದ್ದಾರೆ ಎಂದರು.

ಸರ್ಕಾರದ ಆಡಳಿತ ವೈಖರಿ ಮತ್ತು ರಾಜಕೀಯ ವಿದ್ಯಮಾನವನ್ನು ಗಮನಿಸಿ ದರೆ ಸರ್ಕಾರಕ್ಕೆ ಬಹಳ ದಿನ ಆಯಸ್ಸಿಲ್ಲ. ಸರ್ಕಾರದÀಲ್ಲಿ ಅಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ದೆಹಲಿ ಸುತ್ತಿಕೊಂಡಿ ರುವ ಈ ಭಾಗದ ಸಂಸದರು ಕ್ಷೇತ್ರದಲ್ಲಿ ಎಲ್ಲಾ ಕಡೆ ಕೈ ಹಾಕುತ್ತಿದ್ದಾರೆ. ಬರುವ ಮೇ ತಿಂಗಳಲ್ಲಿ ನಡೆಯುವ ಚುನಾವಣೆ ಯಲ್ಲಿ ಯಾವ ರೀತಿ ಪಾಠ ಕಲಿಸಿಕೊಡ ಬೇಕು ಎಂಬುದು ನನಗೆ ಗೊತ್ತು. ನಾನು ಕಾಂಗ್ರೆಸ್ ಪಕ್ಷದÀವರಿಗೆ ಬ್ಲಾಕ್ ಅಧ್ಯಕ್ಷರಾಗಿ ನೇಮಕ ಮಾಡಲು ತಾಕತ್ತಿಲ್ಲದ ಮೇಲೆ ಇತ್ತೀಚೆಗೆ 3 ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆಂದು ವ್ಯಂಗ್ಯವಾಡಿದರು. ನಾಲ್ಕು ತಿಂಗಳ ಅವಧಿಯಲ್ಲಿ ನಾನೇನು ಸುಮ್ಮನೇ ಕುಳಿತುಕೊಂಡಿಲ್ಲ. ಈ ಕ್ಷೇತ್ರ ದಲ್ಲಿ ಮರಳು ದಂದೆಯನ್ನು ನಿಲ್ಲಿಸಿ, ಬೇಜವಾಬ್ದಾರಿ ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ನೀಡಲು ಎಲ್ಲೆಡೆ ಪ್ರವಾಸ ಮಾಡಿ ಸಮಸ್ಯೆಗೆ ಸ್ಪಂಧಿಸಿದ್ದೇನೆ. ಚುನಾವಣೆ ಯಲ್ಲಿ ಸಂಸದರು ನಾನು ಗೆದ್ದರೆ ಬೆಂಗಳೂರಿನಲ್ಲಿರುತ್ತೇನೆಂದು ಪ್ರಚಾರ ಮಾಡಿದ್ದರು. ವಾರಕ್ಕೆ 4 ದಿನಗಳು ಕ್ಷೇತ್ರದಲ್ಲೇ ಉಳಿದು ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂಧಿಸಿ ಕ್ಷೇತ್ರದ ಅಭಿವೃದ್ಧಿ ಕೆಲಸದ ಕಡೆ ಗಮನಹರಿಸಿದ್ದೇನೆ ಎಂದರು. ಕೂಡ್ಲಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೂ ಅಗತ್ಯ ಸೌಲಭ್ಯ ಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಬರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಬಿಜೆಪಿಯ ರಾಜ್ಯ ಕಾರ್ಯ ಕಾರಿಣಿ ಸದಸ್ಯ ಸುಬ್ಬಣ್ಣ, ತಾ ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲ ಚಂದ್ರು, ಹಿಂದುಳಿದ ವರ್ಗದ ಅಧ್ಯಕ್ಷ ಹೆಮ್ಮರಗಾಲದ ಸೋಮಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುಣಸನಾಳು ಸಿದ್ದರಾಜು, ಗ್ರಾಪಂ ಅಧ್ಯಕ್ಷ ಸಿದ್ದರಾಜು, ಮಹದೇವಶೆಟ್ಟಿ, ಶಿವರಾಜು, ಜಿ.ಬಸವ ರಾಜು, ರಜಾಕ್, ಸಂತೋಷ್, ಪಿಡಿಓ ಪ್ರಮೀಳಾ ಇದ್ದರು.

Translate »