ಹಾಲು ಉತ್ಪಾದಕರ ಸಂಘದ ನಿಧಿಗೆ ಕೈ ಹಾಕುವ ಅಧಿಕಾರ ಜಿಲ್ಲಾ ಒಕ್ಕೂಟಕ್ಕೆ ಇಲ್ಲ
ಮೈಸೂರು

ಹಾಲು ಉತ್ಪಾದಕರ ಸಂಘದ ನಿಧಿಗೆ ಕೈ ಹಾಕುವ ಅಧಿಕಾರ ಜಿಲ್ಲಾ ಒಕ್ಕೂಟಕ್ಕೆ ಇಲ್ಲ

September 16, 2018

ತಿ.ನರಸೀಪುರ:  ಲಾಭ ನಷ್ಟಗಳ ಹೊಣೆಯನ್ನು ಆಯಾಯ ಹಾಲು ಉತ್ಪಾ ದಕರ ಸಹಕಾರ ಸಂಘಗಳೇ ಹೊರುವು ದರಿಂದ ಯಾವುದೇ ಸಂಘದ ಹಣಕಾಸಿನ ವ್ಯವಹಾರದಲ್ಲಿ ಜಿಲ್ಲಾ ಒಕ್ಕೂಟ ಕೈ ಹಾಕು ವುದಿಲ್ಲ. ಗುಣಮಟ್ಟದ ಹಾಲು ಉತ್ಪಾದನೆ ಯನ್ನು ಪ್ರೋತ್ಸಾಹಿಸಲು ಮಾರ್ಗದರ್ಶನ ನೀಡಿ ಮತ್ತು ಮಾರುಕಟ್ಟೆಯಲ್ಲಿ ಹಾಲು ಮಾರಾಟ ನಿರ್ವಹಣೆಯನ್ನು ಮಾತ್ರ ನೋಡಿ ಕೊಳ್ಳಲಾಗುತ್ತದೆ ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಉಪ ವ್ಯವಸ್ಥಾಪಕ ಡಾ.ಶಿವಪ್ರಸಾದ್ ಹೇಳಿದರು.

ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಉತ್ತಮವಾಗಿ ನಡೆಯುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಲಾಭ ಹಣ ಅಥವಾ ನಿಧಿಗೆ ಕೈ ಹಾಕುವ ಅಧಿಕಾರ ಯಾವುದೇ ಜಿಲ್ಲಾ ಒಕ್ಕೂಟಕ್ಕೆ ಇಲ್ಲ. ನಷ್ಟದಲ್ಲಿರುವ ಸಂಘಕ್ಕೆ ಆರ್ಥಿಕ ನೆರವು ನೀಡಲು ಕೂಡ ಅವಕಾಶವೂ ಇಲ್ಲವಾದ್ದ ರಿಂದ ಪ್ರಗತಿಗೆ ಇಲ್ಲವೆ ನಷ್ಟಕ್ಕೆ ಹಾಲು ಉತ್ಪಾ ದಕರ ಸಂಘಗಳ ಸಾಮಥ್ರ್ಯದ ಮೇಲೆ ಅವಲಂಬನೆಯಾಗಿದೆ. ಎಂತಹ ಸಂದರ್ಭ ದಲ್ಲಿಯೂ ಮೈಮುಲ್ ಹಸ್ತಕ್ಷೇಪವನ್ನು ಮಾಡುವುದಿಲ್ಲವಾದ್ದರಿಂದ ಈ ಬಗ್ಗೆ ಉತ್ಪಾದಕರಲ್ಲಿ ಯಾವುದೇ ಗೊಂದಲ ಬೇಡವೆಂದು ಸ್ಪಷ್ಟಪಡಿಸಿದರು.

ಸಂಘದ ಕಾರ್ಯದರ್ಶಿ ಜಿ.ಮಾದಪ್ಪ ಮಾತನಾಡಿ, ಎ ಗ್ರೇಡ್‍ನಲ್ಲಿರುವ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ 3,81,030 ರೂ.ಗಳು ನಿವ್ವಳ ಲಾಭ ಬಂದಿದ್ದು, 14,41,383 ರೂ.ಗಳ ವ್ಯಾಪಾರವನ್ನು ಮಾಡಲಾಗಿತ್ತು. ಮುಂಬರುವ ಸಾಲಿನ ಅಂದಾಜು ಬಜೆಟ್ ನಲ್ಲಿ 1,01,10,000 ರೂ.ಗಳ ಹಾಲು ಖರೀದಿಸಿ, 13,14,300 ರೂ.ಗಳ ವ್ಯಾಪಾರವನ್ನು ನಡೆಸಿ, 9,04,200 ರೂಗಳ ಖರ್ಚು ವೆಚ್ಚವನ್ನು ಮಾಡಲು ಉದ್ದೇಶಿಸಲಾಗಿದ್ದು, 4,10,100 ರೂ.ಗಳ ನಿವ್ವಳ ಲಾಭವನ್ನು ನಿರೀಕ್ಷಿಸಲಾಗಿದೆ. ಜಾನುವಾರುಗಳಿಗೂ ವಿಮಾ ಸೌಲಭ್ಯ ಕಲ್ಪಿಸಬೇಕೆಂಬ ಮೈಮುಲ್ ಯೋಜನೆಗೆ ಹಾಲು ಉತ್ಪಾದಕರು ಸ್ಪಂದಿ ಸದ್ದರಿಂದ 97 ರಾಸುಗಳಿಗಷ್ಟೇ ವಿಮೆಯನ್ನು ಮಾಡಿಸಲಾಗಿದೆ. ಕನಿಷ್ಠ 200 ಜಾನು ವಾರುಗಳಿಗೆ ವಿಮೆ ಮಾಡಿಸಬೇಕೆಂಬ ಸಂಘದ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಎಂದು ಸಭೆಗೆ ವಿಚಾರಗಳನ್ನು ಮಂಡಿಸಿದರು.

ಸಭೆಯಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘಕ್ಕೆ ಗುಣಮಟ್ಟದೊಂದಿಗೆ ಅಧಿಕ ಪ್ರಮಾಣದ ಹಾಲನ್ನು ಸರಬರಾಜು ಮಾಡಿದ ಜೆ.ಎಸ್.ಮಂಜುನಾಥ್, ಬಿ.ಜಿ.ರಮೇಶನ್ ಹಾಗೂ ಎಸ್.ಮಹದೇವಪ್ಪ ಅವರಿಗೆ ಬಹುಮಾನಗಳನ್ನು ಕೊಟ್ಟು ಗೌರವಿಸಲಾ ಯಿತು. ಅಲ್ಲದೆ ದಶಕಗಳ ಕಾಲ ಸಂಘದಲ್ಲಿ ನೌಕರನಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿದ ಬಿ.ಜಿ.ಶಿವಶಂಕರ್ ಅವರನ್ನು ಸನ್ಮಾನಿಸಿ ಬೀಳ್ಕೋಡುಗೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ.ಮಹದೇವಸ್ವಾಮಿ ವಹಿಸಿದ್ದರು. ಮೈಮುಲ್‍ನ ಮತ್ತೋರ್ವ ಉಪ ವ್ಯವಸ್ಥಾಪಕ ಬಸವರಾಜು, ವಿಸ್ತರಣಾಧಿಕಾರಿ ಚೇತನ್, ಸಂಘದ ಉಪಾಧ್ಯಕ್ಷ ಬಿ.ಸಿ.ಬಸವರಾಜು, ನಿರ್ದೇಶಕರಾದ ಬಿ.ಎನ್.ಚಿನ್ನಬುದ್ಧಿ, ಬಿ.ಎನ್.ಸಿದ್ಧಮಲ್ಲಸ್ವಾಮಿ, ಸೊ.ಚಂದ್ರಶೇಖರಪ್ಪ, ಬಿ.ಎಸ್. ಬಸಪ್ಪ, ಸೌಭಾಗ್ಯ, ಇಂದ್ರಮ್ಮ, ಬಸಮ್ಮ, ಹಾಲು ಪರೀಕ್ಷಕ ಬಿ.ಪಿ.ಮಹೇಶ್, ಗುಮ್ಮಾಸ್ತ ಬಿ.ಎನ್. ಮಹೇಶ್, ಮುಖಂಡರಾದ ಬಿ.ಎಸ್.ಪ್ರಭು ಸ್ವಾಮಿ, ವಿಜಯಕುಮಾರ್, ಮಹದೇವಪ್ಪ, ನಾಗೇಶ, ಪರಮೇಶ, ರಾಜಪ್ಪ, ಎಸ್.ಶಿವ ಮೂರ್ತಿ ಹಾಗೂ ಹಾಲು ಉತ್ಪಾದಕ ಸದಸ್ಯರು ಹಾಜರಿದ್ದರು.

Translate »