ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ
ಚಾಮರಾಜನಗರ

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ

July 12, 2018

ಗುಂಡ್ಲುಪೇಟೆ: ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿ ರುವ ರೈತರು ಹೈನುಗಾರಿಕೆಯನ್ನೂ ಉಪ ಕಸುಬಾಗಿ ಕೈಗೊಂಡರೆ ಉತ್ತಮವಾಗಿ ಲಾಭ ಗಳಿಸಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಶಿವ ಪ್ರಸಾದ್ ಹೇಳಿದರು.

ತಾಲೂಕಿನ ಭೋಗಯ್ಯನಹುಂಡಿ ಗ್ರಾಮ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾ ಗಿದ್ದ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಹಲವಾರು ರೈತರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಹೈನುಗಾರಿಕೆಯನ್ನೂ ಉಪ ಕಸುಬಾಗಿ ಕೈಗೊಂಡರೆ ಉತ್ತಮ ಲಾಭ ಗಳಿಸ ಬಹುದಾಗಿದೆ. ಈ ಬಗ್ಗೆ ಯೋಜನೆಯು ತರಬೇತಿಯನ್ನೂ ನೀಡಲಿದ್ದು, ಹಸುಗಳ ಆಯ್ಕೆ ಹಸಿರು ಹುಲ್ಲಿನ ಮಹತ್ವ ಹಾಗೂ ಹೈನುಗಾರಿಕೆಗೆ ಸಂಬಂಧ ಪಟ್ಟಂತೆ ಎಲ್ಲಾ ವಿಚಾರಗಳನ್ನು ಈ ತರಬೇತಿ ಮೂಲಕ ತಿಳಿದುಕೊಂಡು ಲಾಭದಾಯಕವಾಗಿಸಿ ಕೊಳ್ಳಿ ಎಂದರು.

ಗ್ರಾಮದ ಭಿಕ್ಷದ ಮಠಾಧ್ಯಕ್ಷರಾದ ಶ್ರೀ ನಂಜುಂಡಸ್ವಾಮೀಜಿ ಮಾತನಾಡಿ, ಧರ್ಮ ಸ್ಥಳ ಸಂಸ್ಥೆಯು ಸಂಘಗಳಿಗೆ ಬ್ಯಾಂಕ್ ಮುಖಾಂತರ ಸಾಲ ಕೊಡುವುದರ ಜೊತೆಗೆ ಗ್ರಾಮೀಣ ಜನತೆಗೆ ಈ ರೀತಿಯ ಹೈನು ಗಾರಿಗೆ ಮತ್ತು ಕೃಷಿ ತರಬೇತಿಗಳನ್ನು ತಾಲೂಕಿನಾದ್ಯಂತ ನಡೆಸುತ್ತಿರುವುದು ಉತ್ತಮವಾದ ಕಾರ್ಯಕ್ರಮವಾಗಿದೆ. ಈ ರೀತಿಯ ತರಬೇತಿಗಳಿಂದ ಮಾಹಿತಿ ಯನ್ನು ಪಡೆದು ಸರಿಯಾದ ರೀತಿಯಲ್ಲಿ ಹೈನುಗಾರಿಕೆ ಮತ್ತು ಕೃಷಿಯನ್ನು ಮಾಡಲು ಅನುಕೂಲವಾಗುತ್ತದೆ. ಇದರ ಸದುಪಯೋಗವನ್ನು ರೈತಾಪಿವರ್ಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಕೃಷ್ಣ, ಸೆಲ್ಕೋ ಸೋಲಾರ್ ಪ್ರಬಂಧಕ ನಾಗೇಶ್, ಒಕ್ಕೂಟದ ಪದಾಧಿಕಾರಿಗಳಾದ ಕಲಾವತಿ, ಮಂಗಳಮ್ಮ, ಉಮಾ, ಸುಂದ್ರಮ್ಮ, ಕೃಷಿ ಮೇಲ್ವಿಚಾರಕ ನವೀನ್‍ಕುಮಾರ್, ಮೇಲ್ವಿಚಾರಕ ಕೇಶವ್, ಸೇವಾ ಪ್ರತಿನಿಧಿ ಲಕ್ಷ್ಮಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು.

Translate »