Tag: Dr. Shivakumara Swamiji

ಶಾಂತಿಯುತವಾಗಿ ನಡೆದ ಸಿದ್ಧಗಂಗಾ ಶ್ರೀಗಳ  ಅಂತಿಮ ವಿಧಿ ವಿಧಾನ: ಸಿಎಂ ಕೃತಜ್ಞತೆ
ಮೈಸೂರು

ಶಾಂತಿಯುತವಾಗಿ ನಡೆದ ಸಿದ್ಧಗಂಗಾ ಶ್ರೀಗಳ ಅಂತಿಮ ವಿಧಿ ವಿಧಾನ: ಸಿಎಂ ಕೃತಜ್ಞತೆ

January 23, 2019

ಬೆಂಗಳೂರು/ ತುಮಕೂರು: ಸಿದ್ಧಗಂಗಾ ಮಠದಲ್ಲಿ ಇಂದು ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಅಂತಿಮ ಕ್ರಿಯಾ ವಿಧಿಗಳು ಶ್ರದ್ಧಾಪೂರ್ವಕವಾಗಿ ಹಾಗೂ ಶಾಂತಿಯುತವಾಗಿ ನೆರವೇರಿದೆ. ಲಕ್ಷಾಂತರ ಭಕ್ತರು ಶಾಂತಿಯುತವಾಗಿ ಸರತಿಯಲ್ಲಿ ಕಾದು ತ್ರಿವಿಧ ದಾಸೋಹಿಗೆ ಅಂತಿಮ ನಮನಗಳನ್ನು ಅರ್ಪಿಸಿದರು. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಜನಸಾಗರವೇ ಹರಿದು ಬಂದರೂ ಎಲ್ಲ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ನೆರವೇರಿದವು. ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆ ನಡೆಸಲು ಶ್ರಮಿಸಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್?, ಗೃಹ ಸಚಿವ…

ನಡೆದಾಡುವ ದೇವರು ಲಿಂಗೈಕ್ಯ
ಮೈಸೂರು

ನಡೆದಾಡುವ ದೇವರು ಲಿಂಗೈಕ್ಯ

January 22, 2019

ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರುವಾಸಿಯಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರಸ್ವಾಮೀಜಿ ಇಂದು ಶಿವ ಸಾನಿಧ್ಯ ಸೇರಿದರು. ಕಳೆದ ಕೆಲವು ದಿನಗಳಿಂದ ಶ್ರೀಗಳು ಅಸ್ವಸ್ಥರಾಗಿದ್ದು, ಇಂದು ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದರು ಎಂದು ಮಠದ ಆಡಳಿತ ಮಂಡಳಿ ಪ್ರಕಟಿಸಿದೆ. ತಮ್ಮ 111ನೇ ವಯಸ್ಸಿ ನಲ್ಲೂ ಸೇವಾ ಚೈತನ್ಯದ ಚಿಲುಮೆಯಾಗಿದ್ದ ಶ್ರೀಗಳ ನಿಧನ ಸುದ್ದಿಯನ್ನು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಮಠದ ಆವರಣದಲ್ಲಿ ಪ್ರಕಟಿಸಿದರು. ಕ್ರಿಯಾಸಮಾಧಿಯ…

25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ…!
ಮೈಸೂರು

25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ…!

January 22, 2019

ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೂ ಆದರ್ಶವಾಗಿದ್ದವರು. ಆದರೆ ಅಂತಹ ಸ್ವಾಮೀಜಿಗಳೂ ತಮ್ಮ ಪೋಷಕರ ಮೇಲಿನ ಬೇಸರದಿಂದ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ ಎನ್ನುವುದು ಅಚ್ಚರಿಯ ಸತ್ಯ. ಶಿವಕುಮಾರ ಸ್ವಾಮಿಗಳು ತಾವು ಹುಟ್ಟಿದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರಕ್ಕೆ 25 ವರ್ಷ ಬಂದಿರಲಿಲ್ಲ.ತಮ್ಮ ಗುರುವಾಗಿದ್ದ ಉದ್ದಾನ ಶಿವಯೋಗಿಗಳ ಮೇಲಿನ ಅಪಾರ ಭಕ್ತಿ ಅವರ ಈ ನಿರ್ಧಾರದ ಹಿಂದಿತ್ತು. ಬಿಎ ಓದಿದ್ದ ಮಗ ಶಿವಣ್ಣ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕು ಎನ್ನುವುದು ಅವರ ತಂದೆ…

ಹಳ್ಳಿಯಿಂದ ಬಂದು ಸೇವೆಯ ಶಿಖರವೇರಿದ ಕಾಯಕ ಯೋಗಿ…
ಮೈಸೂರು

ಹಳ್ಳಿಯಿಂದ ಬಂದು ಸೇವೆಯ ಶಿಖರವೇರಿದ ಕಾಯಕ ಯೋಗಿ…

January 22, 2019

ಬೆಂಗಳೂರು: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ, ಸಿದ್ಧಗಂಗೆಯ ಮಹಾಯೋಗಿ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು. ಶಿವಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಈ ಹಳ್ಳಿಗೆ ನಾಡಿನ ಭೂಪಟದಲ್ಲಿ ವಿಶೇಷ ಸ್ಥಾನಮಾನವಿದೆ. ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಯ 13 ಮಕ್ಕಳಲ್ಲಿ ಒಬ್ಬರಾದ ಶಿವಣ್ಣ, ಏಪ್ರಿಲ್ 1, 1907 ರಲ್ಲಿ ಜನ್ಮ ತಳೆದರು. ವೀರಾಪುರ, ಪಾಲನಹಳ್ಳಿಯಲ್ಲಿ ಬಾಲ್ಯ ಕಳೆದ ನಂತರ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ. 1919ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ, 1921ರಲ್ಲಿ ಇಂಗ್ಲೀಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಣ್ಣ…

ಚಾಮರಾಜನಗರ ಜಿಲ್ಲೆಗೂ ಶ್ರೀ ಶಿವಕುಮಾರಸ್ವಾಮೀಜಿಗೂ ಅವಿನಾಭಾವ ಸಂಬಂಧ ಜಿಲ್ಲೆಯಲ್ಲೂ ಅಪಾರ ಶಿಷ್ಯ ಕೋಟಿ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಗೂ ಶ್ರೀ ಶಿವಕುಮಾರಸ್ವಾಮೀಜಿಗೂ ಅವಿನಾಭಾವ ಸಂಬಂಧ ಜಿಲ್ಲೆಯಲ್ಲೂ ಅಪಾರ ಶಿಷ್ಯ ಕೋಟಿ

January 22, 2019

ಚಾಮರಾಜನಗರ: ಸೋಮವಾರ ಬೆಳಿಗ್ಗೆ ಶಿವೈಕ್ಯರಾದ ಸಿದ್ದಗಂಗಾ ಡಾ. ಶ್ರೀ ಶಿವಕುಮಾರಸ್ವಾಮೀಜಿ ಅವರಿಗೂ ಗಡಿ ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ಸಂಬಂಧ ಇತ್ತು. ಹೀಗಾಗಿ ಶ್ರೀಗಳು ಜಿಲ್ಲೆಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಸಿದ್ಧಗಂಗಾ ಮಠದ ಯಾವುದೇ ಶಾಖೆಯಾಗಲೀ, ಶಿಕ್ಷಣ ಸಂಸ್ಥೆಯಾಗಲೀ ಜಿಲ್ಲೆಯಲ್ಲಿ ಇಲ್ಲ. ಆದರೂ ಸಹ ಸಿದ್ಧಗಂಗಾ ಮಠದಲ್ಲಿ ಜಿಲ್ಲೆಯ ನೂರಾರು ಮಂದಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇದರಲ್ಲಿ ಹಲವರು ಉನ್ನತ ಹುದ್ದೆಗಳನ್ನು ಅಲಂ ಕರಿಸಿರುವುದು ಗಮನಾರ್ಹ. ಹೀಗಾಗಿ ಸಿದ್ಧಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಅವರು ಜಿಲ್ಲೆಯಲ್ಲಿ ಅಪಾರ ಶಿಷ್ಯಕೋಟಿಯನ್ನು ಹೊಂದಿದ್ದರು….

1 2
Translate »