Tag: Dr. Shivakumara Swamiji

ಸಿದ್ದಗಂಗಾ ಡಾ.ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಲ್ಲಿ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಕಾಮಗಾರಿ ಕೈಗೊಳ್ಳಲು ಸಿಎಂ ಸೂಚನೆ
ಮೈಸೂರು

ಸಿದ್ದಗಂಗಾ ಡಾ.ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಲ್ಲಿ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಕಾಮಗಾರಿ ಕೈಗೊಳ್ಳಲು ಸಿಎಂ ಸೂಚನೆ

June 13, 2020

ಬೆಂಗಳೂರು, ಜೂ. 12(ಕೆಎಂಶಿ)- ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಗಳ ಜನ್ಮಸ್ಥಳ ಬಾನಂದೂರಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರದ ಕಾಮಗಾರಿ ಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಪ್ರಗತಿ ಪರಿಶೀ ಲನೆ ನಡೆಸಿದರು. ಕೋವಿಡ್ 19ರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ…

ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ
ಮೈಸೂರು

ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ

February 24, 2019

ಮೂಗೂರು: ಬಾಲ್ಯ ಜೀವನದಿಂದಲೂ ತ್ಯಾಗದ ಮೂರ್ತಿ ಗಳಾಗಿ ಹೊರಹೊಮ್ಮಿದ ಸಿದ್ಧಗಂಗಾ ಶ್ರೀ ಗಳು ವಿಶ್ವಕ್ಕೆ ಶ್ರೇಷ್ಠರು ಎಂದು ತಾ.ಪಂ. ಸದಸ್ಯ ಎಂ.ಪಿ.ಚಂದ್ರಶೇಖರ್ ಹೇಳಿದರು. ಗ್ರಾಮದ ಬಂಡಿ ಬೀದಿಯ ಬಂಡಿ ಮಂಟಪದ ಆವರಣದಲ್ಲಿ ನಡೆದ ಸಿದ್ಧ ಗಂಗಾ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ವಾಟಾಳ್ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ಅವರು ಶ್ರೀಗಳು ನಡೆದು ಬಂದ ದಾರಿ, ಶಿಕ್ಷಣ ಕ್ಷೇತ್ರಕ್ಕೆ ಅವರು…

‘ಮನ್ ಕೀ ಬಾತ್’ನಲ್ಲಿ ಸಿದ್ಧಗಂಗಾ ಶ್ರೀಗಳ ಸ್ಮರಣೆ
ಮೈಸೂರು

‘ಮನ್ ಕೀ ಬಾತ್’ನಲ್ಲಿ ಸಿದ್ಧಗಂಗಾ ಶ್ರೀಗಳ ಸ್ಮರಣೆ

January 28, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ (2019) ತಮ್ಮ ಮೊದಲನೇ ‘ಮನ್ ಕೀ ಬಾತ್’ನಲ್ಲಿ ಇತ್ತೀಚೆಗೆ ಶಿವೈಕ್ಯ ರಾದ ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸಿದರು. ತಮ್ಮ ಭಾಷಣದ ಮೊದಲ 5 ನಿಮಿಷಗಳನ್ನು ಮೋದಿ ಯವರು ಸಿದ್ಧಗಂಗಾ ಶ್ರೀಗಳ ಕೊಡುಗೆಗಳನ್ನು ವಿವರಿಸಲು ಮೀಸಲಿಟ್ಟರು. ಶ್ರೀಗಳಿಂದ ತಾವು ಆಶೀರ್ವಾದ ಪಡೆದದ್ದನ್ನೂ ಸ್ಮರಿಸಿಕೊಂಡರು. ಜನವರಿ 21ರಂದು ನಾವು ಕೆಟ್ಟ ಸುದ್ದಿಯೊಂದನ್ನು ಕೇಳಿದೆವು. ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ 111 ವರ್ಷದ ಸಿದ್ಧಗಂಗಾ ಶ್ರೀಗಳು ಅಂದು ಶಿವೈಕ್ಯರಾಗಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ…

ಕಾಯಕ ಯೋಗಿ ಶಿವನಲ್ಲಿ ಐಕ್ಯ
ಮೈಸೂರು

ಕಾಯಕ ಯೋಗಿ ಶಿವನಲ್ಲಿ ಐಕ್ಯ

January 23, 2019

ಗುರು ಉದ್ಧಾನ ಶ್ರೀ ಗದ್ದುಗೆ ಸಮೀಪವೇ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ಧಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿ ಅವರನ್ನು ಗದ್ದುಗೆಯಲ್ಲಿ ಐಕ್ಯಗೊಳಿಸಲಾಗಿದೆ. ಕ್ರಿಯಾ ಸಮಾಧಿ: ಮಂಗಳವಾರ ಸಂಜೆ 4.30ರ ವೇಳೆಗೆ ಆರಂಭವಾದ ಕ್ರಿಯಾ…

ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ
ಮೈಸೂರು

ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ

January 23, 2019

ತುಮಕೂರು: ಸೋಮವಾರ ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೆ ಮೂರು ದಶಕಗಳ ಹಿಂದೆಯೇ ಜಾಗ ನಿಗದಿಯಾಗಿ, ಸಮಾಧಿ ಭವನವನ್ನು ನಿರ್ಮಿಸಲಾಗಿದೆ. 1982ರಲ್ಲೇ ಕಾಯಕ ಯೋಗಿಯ ಸಮಾಧಿಗೆ ಸ್ಥಳ ನಿಗದಿ ಮಾಡಿ ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ಸಮಾಧಿ ಭವನವನ್ನು ನಿರ್ಮಿಸಲಾಗಿದೆ. ಶ್ರೀ ಮಠದ ಆವರಣದಲ್ಲಿದ್ದ ಆಲದ ಮರ ಕಡಿದು ಭವನ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ ಶ್ರೀಗಳು ಆಲದಮರ ಕಡಿಯಲು ಒಪ್ಪಲಿಲ್ಲ. ಇದರಿಂದ ಈ ಸ್ಥಳ ನೆನೆಗುದಿಗೆ ಬಿದ್ದಿತು. ವಿಸ್ಮಯ ಎಂಬಂತೆ…

ಭಾರವಾದ ಮನಸ್ಸಿಂದ ಭಕ್ತಸಾಗರದ ಬೀಳ್ಕೊಡುಗೆ
ಮೈಸೂರು

ಭಾರವಾದ ಮನಸ್ಸಿಂದ ಭಕ್ತಸಾಗರದ ಬೀಳ್ಕೊಡುಗೆ

January 23, 2019

ಸಿದ್ಧಗಂಗೆ: ಶ್ರೀ ವಿಳಂಬಿನಾಮ ಸಂವತ್ಸರದ ಉತ್ತರಾಯಣ ಪುಣ್ಯಕಾಲ. ಹೇಮಂತ ಋತುವಿನ ಪಾಡ್ಯ ದಿನ. ಮಂಗಳವಾರ ಸಂಜೆ 5ರ ವೇಳೆ. ಪಶ್ಚಿಮ ದಿಗಂತದ ಅಂಚಿನತ್ತ ಸಾಗುತ್ತಿದ್ದ ಸೂರ್ಯ ನಿರ್ಗಮಿಸುವುದನ್ನೂ ಮರೆತು ಭುವಿಯತ್ತ ತಿರುಗಿ ಒಂದೆಡೆ ದಿಟ್ಟಿಸಿ ನೋಡುತ್ತಲೇ ಇದ್ದ. ತುಮಕೂರು ಜಿಲ್ಲೆಯ ಸಿದ್ಧಗಂಗೆಯ ಬೆಟ್ಟದ ಭಾರೀ ಬಂಡೆಗಳು, ಬೃಹತ್ ಕಟ್ಟಡಗಳ ನಡುವೆ ಮತ್ತೊಂದು ಸೂರ್ಯನ ಮೆರವಣಿಗೆ ನಿಧಾನವಾಗಿ ಸಾಗುತ್ತಿತ್ತು. ಬಗೆ ಬಗೆ ಹೂವುಗಳಿಂದ ಅಲಂಕೃತವಾದ ರುದ್ರಾಕ್ಷಿ ರಥದಲ್ಲಿ ಮಂದಸ್ಮಿತರಾಗಿ ಆಸೀನರಾಗಿದ್ದ ಕಾವಿಧಾರಿ ಸೂರ್ಯನ ತೇಜಸ್ಸು ಕಂಡು ರವಿತೇಜನೇ ಬೆರಗಾಗಿದ್ದ!…

ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ
ಮೈಸೂರು

ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ

January 23, 2019

ತುಮಕೂರು: ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹೇಗೆ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದರೋ, ಅವರ ಮಠದ ಪುಟ್ಟ ವಿದ್ಯಾರ್ಥಿಗಳೂ ಅದೇ ಕಾಯಕವನ್ನು ಮುಂದುವರಿಸಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಎಲ್ಲಾ ಭಕ್ತಾದಿಗಳೂ ನಂತರ ಶ್ರೀ ಮಠದಲ್ಲಿ ಪ್ರಸಾದ ಸ್ವೀಕರಿಸಿಯೇ ತೆರಳಬೇಕು. ಆ ಮೂಲಕ ಶ್ರೀಗಳ ಮನದಾಸೆಯನ್ನು ಪೂರೈಸಬೇಕು ಎಂದು ಮಠದ ಶಿಷ್ಯರು, ಶ್ರೀಗಳ ಅನುಯಾಯಿಗಳು ಭಕ್ತಾದಿಗಳಿಗೆ ಮೈಕ್ ಮೂಲಕ ವಿನಂತಿ ಮಾಡುತ್ತಿದ್ದರು. ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು….

109ನೇ ವಯಸ್ಸಿನವರೆಗೂ ಆಸ್ಪತ್ರೆ ಕಾಣದ ಶ್ರೀಗಳು
ಮೈಸೂರು

109ನೇ ವಯಸ್ಸಿನವರೆಗೂ ಆಸ್ಪತ್ರೆ ಕಾಣದ ಶ್ರೀಗಳು

January 23, 2019

ತುಮಕೂರು: ಜನರಿಂದ ಜನರಿಗಾಗಿ ಜೋಳಿಗೆ ಹಿಡಿದ ಮಹಾ ಯೋಗಿ ನಡೆದಾಡುವ ದೇವರು ತಮ್ಮ 109ನೇ ವರ್ಷದವರೆಗೂ ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಶತಾ ಯುಷಿಯಾದರೂ ಆರೋಗ್ಯ ಕಾಪಾಡಿಕೊಂಡಿದ್ದ ಡಾ. ಶಿವಕುಮಾರ ಸ್ವಾಮೀಜಿ, ಒಂದು ಮಾತ್ರೆಯನ್ನೂ ಸಹ ಸೇವಿಸಿರಲಿಲ್ಲ. ಮಿತ ಆಹಾರ, ಎರಡು ಸೀಳು ಸೇಬು, ಬೇವಿನ ಕಷಾಯ ಸೇರಿದಂತೆ ಮಿತ ಆಹಾರ ದೊಂದಿಗೆ ಮಕ್ಕಳೊಂದಿಗೆ ಲವಲವಿಕೆ ಯಿಂದಲೇ ಇದ್ದರು. 109ನೇ ವಯಸ್ಸಿನ ನಂತರ ವಯೋಸಹಜ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ಸೇವಿಸ ಲಾರಂಭಿಸಿದರು. ಕಾಲ ಕಳೆದಂತೆ 111ನೇ ವಯಸ್ಸಿಗೆ ಶ್ರೀಗಳು ಶ್ವಾಸ…

ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು
ಮೈಸೂರು

ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು

January 23, 2019

ವಾರಣಾಸಿ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಗಳು ಲಿಂಗೈಕ್ಯರಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಾರಾಣಸಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧಗಂಗಾ ಶ್ರೀಗಳನ್ನು ನೆನಪಿಸಿ ಕೊಂಡರು. ಪ್ರತಿ ಬಾರಿ ತುಮಕೂರು ಸಮೀ ಪದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಲೆಲ್ಲ ಶ್ರೀಗಳ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಶ್ರೀಗಳು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರು ಸಮಾಜಕ್ಕೆ, ಮಾನವ ಕಲ್ಯಾಣಕ್ಕೆ ನೀಡಿರುವ ಕೊಡುಗೆ…

ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…
ಮೈಸೂರು

ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…

January 23, 2019

ತುಮಕೂರು: ಕಳೆದ 2011 ರಲ್ಲಿ ಕಿರಿಯ ಶ್ರಿಗಳಿಗೆ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ಹಸ್ತಾಂ ತರಿಸಿದ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನೀಡಿದ ಆಶೀರ್ವಚನದ ಪೂರ್ಣ ಪಾಠವಿದು: “ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠವಾದ ಸ್ಥಾನವಿದೆ. ಅದನ್ನು ಅರಿತು ನಡೆದು ಕೊಂಡರೆ ಸಮಾಜ ದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮ ಪೀಠಗಳು ನೆರವಾಗಬೇಕು. ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ…

1 2
Translate »