ತುಮಕೂರು: ಜನರಿಂದ ಜನರಿಗಾಗಿ ಜೋಳಿಗೆ ಹಿಡಿದ ಮಹಾ ಯೋಗಿ ನಡೆದಾಡುವ ದೇವರು ತಮ್ಮ 109ನೇ ವರ್ಷದವರೆಗೂ ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಶತಾ ಯುಷಿಯಾದರೂ ಆರೋಗ್ಯ ಕಾಪಾಡಿಕೊಂಡಿದ್ದ ಡಾ. ಶಿವಕುಮಾರ ಸ್ವಾಮೀಜಿ, ಒಂದು ಮಾತ್ರೆಯನ್ನೂ ಸಹ ಸೇವಿಸಿರಲಿಲ್ಲ.
ಮಿತ ಆಹಾರ, ಎರಡು ಸೀಳು ಸೇಬು, ಬೇವಿನ ಕಷಾಯ ಸೇರಿದಂತೆ ಮಿತ ಆಹಾರ ದೊಂದಿಗೆ ಮಕ್ಕಳೊಂದಿಗೆ ಲವಲವಿಕೆ ಯಿಂದಲೇ ಇದ್ದರು. 109ನೇ ವಯಸ್ಸಿನ ನಂತರ ವಯೋಸಹಜ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ಸೇವಿಸ ಲಾರಂಭಿಸಿದರು. ಕಾಲ ಕಳೆದಂತೆ 111ನೇ ವಯಸ್ಸಿಗೆ ಶ್ರೀಗಳು ಶ್ವಾಸ ಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.