ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು
ಮೈಸೂರು

ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು

January 23, 2019

ವಾರಣಾಸಿ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಗಳು ಲಿಂಗೈಕ್ಯರಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಾಣಸಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧಗಂಗಾ ಶ್ರೀಗಳನ್ನು ನೆನಪಿಸಿ ಕೊಂಡರು. ಪ್ರತಿ ಬಾರಿ ತುಮಕೂರು ಸಮೀ ಪದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಲೆಲ್ಲ ಶ್ರೀಗಳ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಶ್ರೀಗಳು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರು ಸಮಾಜಕ್ಕೆ, ಮಾನವ ಕಲ್ಯಾಣಕ್ಕೆ ನೀಡಿರುವ ಕೊಡುಗೆ ಅನನ್ಯ. ಮಹಾನ್ ಸಂತ, ಮಹಾನ್ ಋಷಿ ಅಗಲಿಕೆಯಿಂದ ನಮಗೆ ತುಂಬಲಾರದ ನಷ್ಟ ವಾಗಿದೆ ಎಂದು ಮೋದಿ ಹೇಳಿದರು.

Translate »