ದೇವೇಗೌಡರದ್ದು ರಾಕ್ಷಸ ಕುಟುಂಬ…!?
ಮೈಸೂರು

ದೇವೇಗೌಡರದ್ದು ರಾಕ್ಷಸ ಕುಟುಂಬ…!?

March 22, 2019

ತುಮಕೂರು: “ದೇವೇಗೌಡರದ್ದು ರಾಕ್ಷಸ ಕುಟುಂಬವಿದ್ದಂತೆ. ಅವರು ಯಾವುದಕ್ಕೂ ಹೆದರುವುದಿಲ್ಲ. ಗೆಲ್ಲಲಿ, ಸೋಲಲಿ ಹೋರಾಟ ಮಾಡುತ್ತಾರೆ,” ಎಂದು ಅವರನ್ನು ಹೊಗಳುವ ಭರದಲ್ಲಿ ಜೆಡಿಎಸ್ ಸಚಿವ ಶ್ರೀನಿವಾಸ್ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಲು ದೇವೇಗೌಡರು ಹೆದರುತ್ತಾರೆ. ಇದರಿಂದಾಗಿ ತುಮಕೂರಿನಿಂದ ಸ್ಪರ್ಧೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು. ಈ ಹೇಳಿಕೆಗೆ ತಿರುಗೇಟು ನೀಡಲು ಮುಂದಾದ ಅವರು, ದೇವೇಗೌಡ ಅವರ ಕುಟುಂಬಕ್ಕೆ ಬೈದರಾ ಅಥವಾ ಹೊಗಳಿದರಾ ಎಂಬ ಪ್ರಶ್ನೆ ಮಾಧ್ಯಮದವರಲ್ಲೇ ಉದ್ಭವಿಸಿದೆ.

ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧೆ ಮಾಡು ತ್ತಾರೆ. ಅವರದು ಒಂದು ರೀತಿ ರಾಕ್ಷಸ ಕುಟುಂಬ. ಸೋಲಲಿ, ಗೆಲ್ಲಲಿ ಸ್ಪರ್ಧಿಸುವುದಷ್ಟೇ ಅವರಿಗೆ ಮುಖ್ಯ. ಕಳೆದ 60 ವರ್ಷ ಗಳಿಂದ ಅವರು ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಅವರಷ್ಟು ನೋವು ಕಂಡಿದ್ದರೆ, ನಾವು ರಾಜಕೀಯ ಬಿಡುತ್ತಿದ್ದೆವು. ಆದರೆ, ಅವರು ಈ ಇಳಿವಯಸ್ಸಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಸೋಲಿನ ಭಯವಿಲ್ಲ ಎಂದರು. ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ ಅದು ಸಫಲವಾಗಲಿ, ವಿಫಲವಾಗಲಿ ಅವರು ಮುನ್ನುಗುತ್ತಾರೆ. ಅವರು ತುಮಕೂರಿನಿಂದ ಸ್ಪರ್ಧಿಸುವ ಮೂಲಕ ಗೆಲುವು ಸಾಧಿಸಲಿದ್ದಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಅವರು, ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ತುಮಕೂರಿನಿಂದಲೂ ಅವರಿಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಬೆಂಗಳೂರು ಉತ್ತರದತ್ತ ಕೂಡ ಅವರು ಗಮನಹರಿಸಿದ್ದು, ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

Translate »