ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…
ಮೈಸೂರು

ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…

January 23, 2019

ತುಮಕೂರು: ಕಳೆದ 2011 ರಲ್ಲಿ ಕಿರಿಯ ಶ್ರಿಗಳಿಗೆ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ಹಸ್ತಾಂ ತರಿಸಿದ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನೀಡಿದ ಆಶೀರ್ವಚನದ ಪೂರ್ಣ ಪಾಠವಿದು:

“ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠವಾದ ಸ್ಥಾನವಿದೆ. ಅದನ್ನು ಅರಿತು ನಡೆದು ಕೊಂಡರೆ ಸಮಾಜ ದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮ ಪೀಠಗಳು ನೆರವಾಗಬೇಕು. ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ ದೇಶದ ಬಗ್ಗೆ ನಿಷ್ಠೆ ಹಾಗೂ ಉದಾತ್ತ ಭಾವನೆ ಬೆಳೆಸಬೇಕು. ಶಿಕ್ಷಣದಿಂದ ಈ ಬದಲಾವಣೆ ಸಾಧ್ಯ. ಯಾರೂ ಯಾವುದೇ ಒಂದು ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಹಲವು ಟೀಕೆ ಟಿಪ್ಪಣಿಗಳು ಬರುತ್ತವೆ. ಅವುಗಳನ್ನು ಲೆಕ್ಕಿಸದೇ ಸಮಾಜದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಅಂತಹ ದಕ್ಷತೆಯನ್ನು ಬೆಳೆಸಿಕೊಳ್ಳಲು ಕೆಲವು ತತ್ವಗಳನ್ನು ಅರಿಯ ಬೇಕಾಗಿದೆ. ಮನುಷ್ಯ, ಮನುಷ್ಯನಿಗಾಗಿ ಬಾಳಬೇಕು. ಮಾನವ ಧರ್ಮಕ್ಕೆ ಬದ್ಧರಾದರೆ ಬಡತನ, ದಾರಿದ್ರ್ಯ, ಭ್ರಷ್ಟತೆಗಳು ತಾನಾಗಿಯೇ ಕಣ್ಮರೆಯಾಗುತ್ತದೆ. ಈ ನಿಟ್ಟಿನಲ್ಲಿ ಕಿರಿಯ ಶ್ರೀಗಳು ತಮ್ಮ ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸಲಿದ್ದಾರೆ ಎಂಬ ನಂಬಿಕೆ ನನ್ನಲ್ಲಿದೆ.

ಶ್ರೀ ಮಠದ ಕಾರ್ಯವ್ಯಾಪ್ತಿಗಳು ದಿನೇ ದಿನೆ ವಿಸ್ತಾರವಾಗುತ್ತಾ ನಡೆದಿವೆ. ವಿದ್ಯಾಸಂಸ್ಥೆಗಳು ಅಧಿಕಗೊಂಡಿವೆ. ಭಕ್ತರು ಸಂಪತ್ತು ಅಪಾರವಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಸಭೆ-ಸಮಾರಂಭಗಳು, ಭಕ್ತರ ಮನೆಯ ಆಹ್ವಾನಗಳು ದಿನೇ ದಿನೆ ಅಧಿಕವಾಗು ತ್ತಿವೆ. ನಮಗೆ ಈ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಲುವಯೋ ಧರ್ಮದಿಂದ ಸಾಧ್ಯವಾಗುತ್ತಿಲ್ಲ. ಈ ಇಳಿ ವಯಸ್ಸಿನಲ್ಲಿ ದೇಹ ಧರ್ಮ ಸಹಜವಾಗಿ ಕಾರ್ಯ ನಿರ್ವಹಿಸುವಲ್ಲಿ ಆಶಕ್ತವಾಗಿದೆ. ಈ ಎಲ್ಲಾ ಅಂಶಗಳನ್ನು ಮನಗಂಡು ನಮ್ಮ ಉತ್ತಾರಾಧಿಕಾರಿಗಳಾಗಿರುವ ಶ್ರೀ ಸಿದ್ದಲಿಂಗಸ್ವಾಮಿ ಅವರಿಗೆ ಶ್ರೀ ಮಠದ ಮಠಾಧ್ಯಕ್ಷತೆಯನ್ನು ವಹಿಸಿಕೊಟ್ಟು, ನಡೆಸಿಕೊಂಡು ಹೋಗಲು ಬಿಟ್ಟು ಕೊಟ್ಟಲ್ಲಿ ಮಠದ ಎಲ್ಲಾ ಕೆಲಸ ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತದೆಂಬ ಸದ್ಭಾವನೆ ನಮ್ಮಲ್ಲಿ ಇದೆ. ಈ ಲೌಕಿಕ ವ್ಯವಹಾರಗಳಿಂದ ನಿವೃತ್ತಿ ಹೊಂದಿ ಆಧ್ಯಾತ್ಮಿಕ ಸಂಪತ್ತನ್ನು ಭಕ್ತಾದಿಗಳಿಗೆ ನೀಡಿ ಅವರಲ್ಲಿ ಪೂಜಾ ನಿಷ್ಠೆಯನ್ನು ಬೆಳೆಸಿ, ಸಮಾಜಕ್ಕೆ ಯೋಗ್ಯ ಮಾರ್ಗದರ್ಶನ ಮಾಡಬೇಕೆಂಬ ಆಸಕ್ತಿಯುಳ್ಳವರಾಗಿರುತ್ತೇವೆ.

ಶ್ರೀ ಸಿದ್ದಲಿಂಗಸ್ವಾಮೀಜಿಯವರು ಅಂದಿನಿಂದ ಇಂದಿನವರೆಗೆ ನಮ್ಮ ಆಜ್ಞಾನುಸಾರ ನಡೆದುಕೊಳ್ಳುತ್ತಿದ್ದಾರೆ. ಮಠದ ಕಾರ್ಯಗಳನ್ನು ಸದಾಚಾರ, ಗುರುನಿಷ್ಠೆ ಮತ್ತು ಪೂಜಾ ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಮಠದ ಪವಿತ್ರ ಪರಂಪರೆಯನ್ನು ಮುಂದುವರಿಸಿಕೊಂಡು, ಚಾರಿತ್ರ್ಯ ಸಂಪನ್ನರಾಗಿ ರೂಪು ಗೊಂಡಿದ್ದಾರೆ. ಸಿದ್ದಲಿಂಗ ಸ್ವಾಮೀಜಿಗೆ ಅಧಿಕಾರ ವಹಿಸಿಕೊಟ್ಟರೆ ಮಠದ ಶ್ರೇಯೋಭಿವೃದ್ಧಿಯಾಗು ತ್ತದೆ ಎಂಬ ಬಗ್ಗೆ ದೃಢ ನಂಬಿಕೆ ಇದೆ.

ಈ ಎಲ್ಲಾ ಅಂಶಗಳನ್ನು ಮನಗಂಡು, ನಮಗೆ ಈಗಾಗಲೇ 103 ಸಂವತ್ಸರಗಳು ತುಂಬಿದ್ದು, 104ನೇ ಸಂವತ್ಸರದಲ್ಲಿ ಇರುವುದರಿಂದ ಹಾಗೂ ಕಳೆದು 2-3 ಮಾಸಗಳಿಂದ ಪದೇ ಪದೆ ದೇಹಾ ಲಸ್ಯ ಉಂಟಾಗುತ್ತಿದೆ.

ಎಲ್ಲಾ ಅಂಶಗಳನ್ನು ಮನಗಂಡು, ನಮಗೆ ಈಗಾಗಲೇ 103 ಸಂವತ್ಸರಗಳು ತುಂಬಿದ್ದು, 104ನೇ ಸಂವತ್ಸರದಲ್ಲಿ ಇರುವುದರಿಂದ ಹಾಗೂ ಕಳೆದು 2-3 ಮಾಸಗಳಿಂದ ಪದೇ ಪದೆ ದೇಹಾ ಲಸ್ಯ ಉಂಟಾಗುತ್ತಿದೆ.

ಇದರಿಂದ ಹೊರಗಡೆ ದೂರ ಪ್ರಯಾಣ ಮಾಡಲು ಹಾಗೂ ಭಕ್ತರ ಕೋರಿಕೆಯನ್ನು ನೆರವೇರಿಸಲು ಕಷ್ಟಕರವಾಗುತ್ತಿದೆ. ಅಲ್ಲದೆ ಶ್ರೀ ಮಠದ ದೈನಂದಿನ ಕಾರ್ಯ ಕ್ರಮಗಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಕುಂದು ಬಾರದಿರಲೆಂಬ ಸದುದ್ದೇಶ ದಿಂದ ಹರಗುರು ಚರಮೂರ್ತಿಗಳು, ಮಠಾಧ್ಯಕ್ಷರು ಹಾಗೂ ಭಕ್ತರ ಸಮ್ಮುಖದಲ್ಲಿ ಈ ದಿನ ಅಂದರೆ 2011ರ ಆಗಸ್ಟ್ 4 ರಂದು ನಮ್ಮ ಉತ್ತರಾಧಿಕಾರಿಯಾಗಿ ಮುಂದು ವರಿದಿರುವ ಶ್ರೀ ಸಿದ್ದಲಿಂಗಸ್ವಾಮಿ ಅವರನ್ನು, ಶ್ರೀ ಮಠದ ಘನತೆ, ಗೌರವ, ಪ್ರತಿಷ್ಠೆಗಳಿಗೆ ಕುಂದುಬಾರದಂತೆ ನಡೆಸಿಕೊಂಡು ಹೋಗಲು ಹಾಗೂ ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷತೆ ಯನ್ನು ವಹಿಸಿಕೊಟ್ಟು ಅವರನ್ನು ಮಠಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಆಶೀರ್ವದಿಸಿದ್ದರು.

Translate »