ಸಿದ್ಧಗಂಗಾ ಶ್ರೀಗಳು ಮುಂದಿನ ಶತಮಾನಕ್ಕೂ ಆದರ್ಶ
ಮೈಸೂರು

ಸಿದ್ಧಗಂಗಾ ಶ್ರೀಗಳು ಮುಂದಿನ ಶತಮಾನಕ್ಕೂ ಆದರ್ಶ

January 23, 2019

ಮೈಸೂರು: ಎಂಬತ್ತೆಂಟು ವರ್ಷ ಗಳ ಪರಿಶ್ರಮದಿಂದ ಸಿದ್ಧಗಂಗಾ ಮಠ ವಿಶ್ವದಲ್ಲಿ ಪ್ರಸಿದ್ಧಿ ಪಡೆಯುವಲ್ಲಿ ಶ್ರಮಿಸಿದ ಸಿದ್ಧಗಂಗಾ ಶ್ರೀಗಳ ನಿಧನ ದಿಂದ ಒಂದು ಯುಗಾಂತ್ಯವಾದಂತಾಗಿದೆ. ಆದರೂ ಅವರು ಜೀವಿಸಿದ್ದ ಈ ಶತಮಾನ ಮುಂದಿನ ಶತಮಾನಕ್ಕೂ ಆದರ್ಶವಾಗಿದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ಗನ್‍ಹೌಸ್ ಬಳಿ ಬಸವೇಶ್ವರ ಪ್ರತಿಮೆ ಎದುರು ಡಾ.ಶಿವಕುಮಾರಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರ ತತ್ವ, ಚಿಂತನೆ, ಆದರ್ಶ ಗಳ ಜೀವಂತ ರೂಪವಾಗಿದ್ದ ಶ್ರೀಗಳು, ಯಾವ ಭೇದ- ಭಾವವಿಲ್ಲದೆ ಎಲ್ಲಾ ವರ್ಗದ ಬಡ ಮಕ್ಕಳಿಗೂ ವಿದ್ಯೆ, ವಸತಿ, ಆಹಾರ ನೀಡಿ ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ. ಅಂತಹ ಪುಣ್ಯ ಪುರುಷರ ಆದರ್ಶ ಮಾರ್ಗದಲ್ಲಿ ಸಾಗಿದರೆ ನಿಜಕ್ಕೂ ಅದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಲಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿ ಸದಸ್ಯರಾದ ರದ್ದಿಕ್ ಉಲ್ಲಾಖಾನ್, ಕನಕಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಕಮಲಾ ಅನಂತರಾಮು, ಡೈರಿ ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »