ಕ್ಯಾನ್‍ವಾಸ್ ಬಟ್ಟೆ ಮೇಲೆ ಶ್ರೀಗಳ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ ಕುಂಚ ಕಲಾವಿದರು
ಮೈಸೂರು

ಕ್ಯಾನ್‍ವಾಸ್ ಬಟ್ಟೆ ಮೇಲೆ ಶ್ರೀಗಳ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ ಕುಂಚ ಕಲಾವಿದರು

January 23, 2019

ಮೈಸೂರು: ಎಲ್ಲೆಡೆ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ, ಸಂತಾಪ ಕಾರ್ಯಕ್ರಮ ಗಳು ನಡೆಯುತ್ತಿದ್ದರೆ, ಇತ್ತ ಕೆ.ಆರ್.ವೃತ್ತದಲ್ಲಿ ಕುಂಚ ಕಲಾವಿದರು ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಭಕ್ತಿ ಮೆರೆದರು. ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘದ 20ಕ್ಕೂ ಹೆಚ್ಚು ಸದಸ್ಯರು ಕಾವಿ ಮತ್ತು ಕಪ್ಪು ಬಣ್ಣ ಬಳಸಿ ಕ್ಯಾನ್ ವಾಸ್ ಬಟ್ಟೆಯ ಮೇಲೆ ಸಿದ್ಧಗಂಗಾ ಶ್ರೀಗಳ ಬೃಹತ್ ಭಾವಚಿತ್ರಗಳನ್ನು ಕುಂಚದ ಮೂಲಕ ರಚಿಸಿದರು.

ಸಂಘದ ಗೌರವಾಧ್ಯಕ್ಷ ಆರ್ಟಿಸ್ಟ್ ಅಬ್ಬಾಸ್, ಅಧ್ಯಕ್ಷ ಆರ್ಟ್ ಇಂಡಿಯನ್ ಮಹದೇವು ನೇತೃತ್ವದಲ್ಲಿ 10 ಅಡಿಗೂ ಎತ್ತರದ ಕ್ಯಾನ್‍ವಾಸ್ ಬಟ್ಟೆಯ ಮೇಲೆ ವಾಟರ್ ಕಲರ್‍ನಿಂದ ಶ್ರೀಗಳ ಚಿತ್ರ ಬಿಡಿಸಿದರು. ವಿದ್ಯಾದಾನ ತಿಲಕ, ದಾಸೋಹ ಗುರುವಿಗೆ ನಮನ ಎಂದು ಬರೆದು ಗೌರವ ಸಲ್ಲಿಸಿದರು.

Translate »