ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ  ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು
ಮೈಸೂರು

ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು

January 23, 2019

ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳು, ನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗುವ ಮುನ್ನವೇ ಶ್ರೀ ಮಠದ ಉತ್ತರಾಧಿಕಾರಿಯನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳನ್ನು ನಿಯೋಜಿಸಿದ್ದರು ಎಂಬ ಸತ್ಯ ಇದೀಗ ಬಹಿರಂಗಗೊಂಡಿದೆ.

ಡಾ.ಶಿವಕುಮಾರಸ್ವಾಮೀಜಿಯವರು ತಮ್ಮ 81ನೇ ವಯಸ್ಸಿನಲ್ಲೇ ತಮ್ಮ ಉತ್ತರಾಧಿಕಾರಿಯ ನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ನಿಯೋಜಿಸಿದ್ದರಾದರೂ ಶ್ರೀ ಸಿದ್ದಲಿಂಗಸ್ವಾಮೀಜಿ ಸಹ ಇದನ್ನು ಎಲ್ಲೂ ಬಹಿರಂಗಪಡಿಸದೆ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಬೆನ್ನೆಲು ಬಾಗಿ ನಿಂತು ತಮ್ಮ ಸ್ವಾಮಿನಿಷ್ಠೆಯನ್ನು ತೋರಿ, ಹಿರಿಯ ಶ್ರೀಗಳ ಅನುಮತಿ ಇಲ್ಲದೆ ಯಾವ ತೀರ್ಮಾ ನವನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಹಾಕಿದ ಗೆರೆ ದಾಟದೆ ತಮ್ಮ ಗುರು ಭಕ್ತಿ ಇಮ್ಮಡಿಗೊಳಿಸಿದ್ದರು.

ಶ್ರೀಗಳು 1988ರ ಮಾರ್ಚ್ 31 ರಂದು ಸಿದ್ದಲಿಂಗ ಸ್ವಾಮೀ ಜಿಗಳನ್ನು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ ನೇಮಿ ಸಿದ್ದಾರೆ. ಶ್ರೀಗಳು ತಮ್ಮ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದ ವೇಳೆ ಅವರ ಕಣ್ಣಿಗೆ ಬಿದ್ದದ್ದು ಕಂಚುಗಲ್ ಬಂಡೇಮಠದಲ್ಲಿದ್ದ ಬಾಲಕ ವಿಶ್ವನಾಥ. ಬಂಡೇಮಠದ ಶರಣ ದಂಪತಿ ಸದಾಶಿವಯ್ಯ-ಶಿವರುದ್ರಮ್ಮ ಪುತ್ರರಾಗಿ 1963ರ ಜುಲೈ 22 ರಂದು ಜನಿಸಿದ ವಿಶ್ವನಾಥ್‍ಗೆ ತಾನೊಂದು ದಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಯಾಗುವ ಕಲ್ಪನೆಯೂ ಇರಲಿಲ್ಲ.

ಇದೇ ಮಠದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿದ ವಿಶ್ವನಾಥ್, ಪಿಯುಸಿ ವ್ಯಾಸಂಗಕ್ಕೆ ಸಿದ್ಧಗಂಗಾ ಮಠ ಸೇರಿದರು. ಹಳೇ ಮಠದಲ್ಲಿದ್ದುಕೊಂಡು ಸಂಸ್ಕøತ, ವೇದ ಗಳನ್ನು ಅಭ್ಯಸಿಸತೊಡಗಿದರು. ಇದೇ ವೇಳೆ ವಿಶ್ವನಾಥ್‍ಗೆ ಸನ್ಯಾಸ ದೀಕ್ಷೆ ಪಡೆದ ಹಲವು ಮಠಗಳ ಉತ್ತರಾಧಿಕಾರಿಗಳ ಒಡನಾಟ ದೊರಕಿ, ತಮ್ಮ ಮನಸ್ಸನ್ನು ಧಾರ್ಮಿಕತೆಯತ್ತ ಹರಿಸಿದರು.

ಅಂದಿನಿಂದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪೂಜಾ ಕಾರ್ಯಗಳಲ್ಲಿ ಕಾಯಾ, ವಾಚಾ, ಮನಸಾ ತಮ್ಮನ್ನು ಅರ್ಪಿಸಿಕೊಂಡ ವಿದ್ಯಾರ್ಥಿ ವಿಶ್ವÀನಾಥ್, ಶ್ರೀಗಳ ಪ್ರೀತಿ ಮಮತೆಗೆ ಪಾತ್ರರಾದರು. ಬಿಎ ಪದವಿಯ ಜೊತೆಗೆ ಸಂಸ್ಕøತ, ವೇದವನ್ನು ಕಲಿತು ಶ್ರೀಗಳಿಗೆ ಮತ್ತಷ್ಟು ಹತ್ತಿರವಾದರು. ಇದನ್ನೆಲ್ಲಾ ಸೂಕ್ಷ್ಮವಾಗೇ ಗಮನಿಸುತ್ತಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಉತ್ತರಾಧಿಕಾರಿಯನ್ನಾಗಿ ಈತನನ್ನು ನೇಮಿಸಲು ನಿರ್ಧರಿಸಿದರು. ಕೊನೆಗೆ ಆ ದಿನವೂ ಬಂದೇ ಬಿಟ್ಟಿತು. 1988ರ ಮಾರ್ಚ್ 31 ರಂದು ಅಧಿಕೃತವಾಗಿ ತಮ್ಮ ಉತ್ತರಾಧಿಕಾರಿಯನ್ನಾಗಿ ವಿಶ್ವನಾಥ್‍ನನ್ನು ನೇಮಿಸಿದರು. ಅಂದಿ ನಿಂದ ವಿಶ್ವÀನಾಥ್ ಖಾವಿಧಾರಿಗಳಾಗಿ ಬದಲಾದರೂ ಶ್ರೀ ಶಿವಕುಮಾರ ಶ್ರೀಗಳ ನೆರಳಲ್ಲೇ ಬೆಳೆದ ಸಿದ್ದಲಿಂಗ ಸ್ವಾಮೀಜಿ, ಹಿರಿಯ ಶ್ರೀಗಳ ಆಜ್ಞೆ ಇಲ್ಲದೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳದೆ ಹಿರಿಯ ಶ್ರೀಗಳ ಅಧಿಕಾರ ನಿರ್ವಹಣೆಯಲ್ಲೇ ತಮ್ಮ ವಿಧೇಯತೆಯನ್ನು ಮೆರೆದರು.
ಆನಂತರ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ 2011ರ ಆಗಸ್ಟ್ 4 ರಂದು ಹಸ್ತ ನಕ್ಷತ್ರ ನಾಗರ ಪಂಚಮಿಯಂದು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಶ್ರೀ ಕ್ಷೇತ್ರದ ಉತ್ತರಾಧಿಕಾರಿಗಳೂ ಹಾಗೂ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಸಿದ್ಧಗಂಗಾ ಮಠದ ಅಧಿಕಾರವನ್ನು ಅಧಿಕೃತ ಛಾಪಾ ಕಾಗದದ ಮೂಲಕ ಹಸ್ತಾಂತರಿಸಿದರು.

ಅಧಿಕಾರ ಹಸ್ತಾಂತರಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಕಿರಿಯ ಸ್ವಾಮೀಜಿಯವರ ಹೆಸರಿಗೆ ಬರೆಸಿದ ಉಯಿಲನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರಿಂದ ಓದಿಸಲಾಯಿತು. ಜೊತೆಗೆ ಶ್ರೀ ಶಿವಕುಮಾರ ಸ್ವಾಮೀಜಿಯವರೂ ಸಹ ಒಮ್ಮೆ ಓದಿ ಸಹಿ ಹಾಕಿದರು. ಅಪಾರ ಭಕ್ತರು ಭಾವುಕರಾಗಿ ಕಾರ್ಯಕ್ರಮದಲ್ಲಿ ಸಾಕ್ಷಿಯಾದರು. ಅಧಿಕಾರ ಹಸ್ತಾಂತರ ಮಾಡಿದ ಶ್ರೀಗಳು ಆಶೀರ್ವಚನ ನೀಡಿದರು.

Translate »