Tag: GT Devegowda

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ
ಮಂಡ್ಯ

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ

July 22, 2018

ಮಂಡ್ಯ: ನಿತ್ಯ ಸಚಿವರೆಂದು ಬಿರುದು ಪಡೆದುಕೊಂಡಿರುವ ಕೆ.ವಿ. ಶಂಕರೇಗೌಡರ ಸಾಧನೆ ಅವಿಸ್ಮರಣೀಯ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು. ನಗರದ ಕರ್ನಾಟಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆ.ವಿ.ಶಂಕರ ಗೌಡರ ಆದರ್ಶ, ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕೆಲಸ ಮಾಡ ಲಿದೆ ಎಂಬ ನಂಬಿಕೆ ನನಗಿದೆ. ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ ರುವುದು ಶ್ಲಾಘನೀಯ. ಕರ್ನಾಟಕ ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಇಡಲಾಗಿರುವ…

ಪತ್ರಕರ್ತರಿಗೆ ಜೀವ ವಿಮೆ, ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ
ಮೈಸೂರು

ಪತ್ರಕರ್ತರಿಗೆ ಜೀವ ವಿಮೆ, ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ

July 21, 2018

 ಉನ್ನತ ಶಿಕ್ಷಣ ಸಚಿವ ಜಿಟಿಡಿ ಭರವಸೆ ಮೈಸೂರಲ್ಲಿ ಪತ್ರಿಕಾ ದಿನಾಚರಣೆ ಎಂಟು ಮಂದಿ ಪತ್ರಕರ್ತರಿಗೆ ಸನ್ಮಾನ ಮೈಸೂರು: ಮಾಧ್ಯಮ ಕ್ಷೇತ್ರ ಸಮಾಜವನ್ನು ತಿದ್ದುವಂತಹ ಮಹತ್ವದ ಜವಾಬ್ದಾರಿ ಹೊಂದಿದ್ದು, ಈ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರಿಗೆ ಸರ್ಕಾರದಿಂದ ಜೀವ ವಿಮೆ ಜಾರಿಗೊಳಿಸಲು ಹಾಗೂ ಮೈಸೂರು ಜಿಲ್ಲೆಯ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಹೇಳಿದರು. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ…

ಉದ್ಯಾನವನ, ಕೆರೆಗಳ ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಿ
ಮೈಸೂರು

ಉದ್ಯಾನವನ, ಕೆರೆಗಳ ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಿ

July 19, 2018

ಕೆಂಪೇಗೌಡ ಸ್ಮರಣೆ ಕಾರ್ಯಕ್ರಮದಲ್ಲಿ ಯುವಸಂಘಟನೆಗಳಿಗೆ ಸಚಿವ ಜಿ.ಟಿ.ದೇವೇಗೌಡ ಕರೆ ಮೈಸೂರು: ಮೈಸೂರಿನ ಯುವ ಸಂಘಟನೆಗಳು ಯಾವುದಾದರೂ ಉದ್ಯಾನವನ ಮತ್ತು ಗ್ರಾಮೀಣ ಪ್ರದೇಶದ ಯಾವುದಾದರೂ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಹೀಗೆ ಮಾಡಿದರೆ ಮಾತ್ರ ಕೆಂಪೇಗೌಡರ ಸ್ಮರಣೆ ಮಾಡಿದ್ದಕ್ಕೂ ಅರ್ಥ ಬರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ಮೈಸೂರಿನ ರೋಟರಿ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕವು ನಾಡಪ್ರಭು ಕೆಂಪೇಗೌಡರ ಸ್ಮರಣೆ ಅಂಗವಾಗಿ ಬುಧವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ…

ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ
ಮೈಸೂರು

ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ

July 18, 2018

ಮೈಸೂರು:  ಅಂದಾಜು 545 ಕೋಟಿ ರೂ. ವೆಚ್ಚದ ಕೆಆರ್‌ಎಸ್‌ ಹಿನ್ನೀರಿನ ಹಳೇ ಉಂಡವಾಡಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತಿಂಗಳೊಳಗೆ ಪೂರ್ಣಗೊಳಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು…

ರಾಜ್ಯದ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ
ಮೈಸೂರು

ರಾಜ್ಯದ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ

July 17, 2018

ಇಲವಾಲ ಹೋಬಳಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಸಚಿವ ಜಿ.ಟಿ. ದೇವೇಗೌಡರೊಂದಿಗೆ ಚಾಲನೆ ನೀಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಪ್ರತಿಕ್ರಿಯೆ ಮೈಸೂರು: ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ಅಭಿ ವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರೊಂದಿಗೆ ಮೈಸೂರು ತಾಲೂಕು ಇಲವಾಲ ಕೆರೆ ಅಭಿವೃದ್ಧಿ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲವಾಲ ಕೆರೆ ಹೂಳು ತೆಗೆಯು ವುದು,…

ಮೈಸೂರು ಬ್ರಾಹ್ಮಣ ಒಕ್ಕೂಟಗಳಿಂದ ಜಿ.ಟಿ.ದೇವೇಗೌಡರಿಗೆ ಅಭಿನಂದನೆ
ಮೈಸೂರು

ಮೈಸೂರು ಬ್ರಾಹ್ಮಣ ಒಕ್ಕೂಟಗಳಿಂದ ಜಿ.ಟಿ.ದೇವೇಗೌಡರಿಗೆ ಅಭಿನಂದನೆ

July 17, 2018

ಮೈಸೂರು:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರ ಸಮುದಾಯಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಶಂಕರ ಜಯಂತಿ ಆಚರಣೆಯನ್ನು ಬಜೆಟಿನಲ್ಲಿ ಪ್ರಕಟಿಸಿದ್ದು, ಇದಕ್ಕೆ ಪ್ರಮುಖ ಕಾರಣಕರ್ತರಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರನ್ನು ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಪ್ರರ ಚಿಂತನಾ ಸಭೆಯಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ ಮಾತನಾಡಿ, ಕುಮಾರಪರ್ವ ಸಂದರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆ ಚಾಮುಂಡಿಪುರಂನಲ್ಲಿ ವಿಪ್ರಸಂಪರ್ಕ ಅಭಿಯಾನ ಆಯೋಜಿಸಿತ್ತು. ಈ ವೇಳೆ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಿ…

ಅಕ್ಕಿ ತೂಗುತ್ತಿದ್ದವನನ್ನು ಸಚಿವನನ್ನಾಗಿ ಮಾಡಿದಿರಿ…
ಮೈಸೂರು

ಅಕ್ಕಿ ತೂಗುತ್ತಿದ್ದವನನ್ನು ಸಚಿವನನ್ನಾಗಿ ಮಾಡಿದಿರಿ…

July 16, 2018

ಮೈಸೂರು: ಸೊಸೈಟಿ ಯಲ್ಲಿ ಅಕ್ಕಿ ತೂಗುತ್ತಿದ್ದ ನನ್ನನ್ನು ಸಚಿವನಾಗುವ ಮಟ್ಟಕ್ಕೆ ಬೆಳೆಸಿದ್ದೀರಿ… ಚುನಾವಣೆ ಯುದ್ಧದಲ್ಲಿ ರಣ ಕಹಳೆ ಊದಿ ಭಾರೀ ಹೋರಾಟದ ಮೂಲಕ ನನ್ನನ್ನು ಗೆಲ್ಲಿಸಿದ್ದೀರಿ… ನನ್ನುಸಿರುವವರೆಗೂ ನಿಮ್ಮನ್ನು ಮರೆಯಲ್ಲ…. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆ ಯಲ್ಲಿ ಭಾವುಕರಾಗಿ ಹೇಳಿದ ಮಾತುಗಳಿವು. ಮೈಸೂರಿನ ಹೊರ ವಲಯದಲ್ಲಿರುವ ಲಿಂಗ ದೇವರು ಕೊಪ್ಪಲು ಮೈದಾನದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಘಟಕ ಆಯೋಜಿಸಿದ್ದ ಕೃತಜ್ಞತಾ ಸಮಾವೇಶವನ್ನು ಉದ್ಘಾಟಿಸಿ ಜಿ.ಟಿ.ದೇವೇಗೌಡರು ಮಾತನಾಡಿದರು. ನಿಮ್ಮ ಜಿ.ಟಿ.ದೇವೇಗೌಡರನ್ನು…

ಮೈಸೂರು ಭೇಟಿ ಮೊದಲ ದಿನ ಸಚಿವ ಜಿ.ಟಿ.ದೇವೇಗೌಡರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ
ಮೈಸೂರು

ಮೈಸೂರು ಭೇಟಿ ಮೊದಲ ದಿನ ಸಚಿವ ಜಿ.ಟಿ.ದೇವೇಗೌಡರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ

July 14, 2018

ಮೈಸೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದು, ಜಿ.ಟಿ.ದೇವೇಗೌಡರು ಇಂದು ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಾದ ನಂತರ ಇದೇ ಪ್ರಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿದ ಅವರು, ತಮ್ಮ ಕುಟುಂಬದ ಸದಸ್ಯರೊಂದಿಗೆ ಮೊದಲು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಬಳಿಕ ಉತ್ತನಹಳ್ಳಿಯಲ್ಲಿರುವ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ತಮ್ಮ ಸ್ವಗ್ರಾಮ ಗುಂಗ್ರಾಲ್ ಛತ್ರದಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ್ದಲ್ಲದೇ ನಂಜನಗೂಡು ನಂಜುಂಡೇಶ್ವರನಿಗೆ ವಿಶೇಷ ಪೂಜೆ…

ಕಾಲೇಜು ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ 4800 ಹುದ್ದೆ ಭರ್ತಿಗೆ ಕ್ರಮ: ಜಿಟಿಡಿ
ಮೈಸೂರು

ಕಾಲೇಜು ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ 4800 ಹುದ್ದೆ ಭರ್ತಿಗೆ ಕ್ರಮ: ಜಿಟಿಡಿ

July 11, 2018

ಬೆಂಗಳೂರು:  ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿ ದಂತೆ 4800 ವಿವಿಧ ಹುದ್ದೆಗಳು ಖಾಲಿ ಇದ್ದು, ಆದ್ಯತೆ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವಿಧಾನ ಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆ ಯಲ್ಲಿ ಡಾ. ಉಮೇಶ್ ಜಿ. ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆ ಗಳು ಸೇರಿದಂತೆ 3800 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇವೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇವೆ….

1 2 3
Translate »