ಮೈಸೂರು ಬ್ರಾಹ್ಮಣ ಒಕ್ಕೂಟಗಳಿಂದ ಜಿ.ಟಿ.ದೇವೇಗೌಡರಿಗೆ ಅಭಿನಂದನೆ
ಮೈಸೂರು

ಮೈಸೂರು ಬ್ರಾಹ್ಮಣ ಒಕ್ಕೂಟಗಳಿಂದ ಜಿ.ಟಿ.ದೇವೇಗೌಡರಿಗೆ ಅಭಿನಂದನೆ

July 17, 2018

ಮೈಸೂರು:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರ ಸಮುದಾಯಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಶಂಕರ ಜಯಂತಿ ಆಚರಣೆಯನ್ನು ಬಜೆಟಿನಲ್ಲಿ ಪ್ರಕಟಿಸಿದ್ದು, ಇದಕ್ಕೆ ಪ್ರಮುಖ ಕಾರಣಕರ್ತರಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರನ್ನು ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಪ್ರರ ಚಿಂತನಾ ಸಭೆಯಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬ್ರಾಹ್ಮಣ ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ ಮಾತನಾಡಿ, ಕುಮಾರಪರ್ವ ಸಂದರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆ ಚಾಮುಂಡಿಪುರಂನಲ್ಲಿ ವಿಪ್ರಸಂಪರ್ಕ ಅಭಿಯಾನ ಆಯೋಜಿಸಿತ್ತು. ಈ ವೇಳೆ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗದ ವಿಚಾರವಾಗಿ ಸಮಸ್ಯೆಗಳು ಎದುರಾದರೆ ಬಡಬ್ರಾಹ್ಮಣ ಕುಟುಂಬಗಳ ಆರ್ಥಿಕ ನಿರ್ವಹಣೆಗಾಗಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗುವುದು. ಸನಾತನ ವೈದಿಕ ಧರ್ಮದ ಉಳುವಿಗಾಗಿ ಶಂಕರ ಜಯಂತಿ ಸೇರಿದಂತೆ ಆಚಾರ್ಯತ್ರಯರ ಜಯಂತಿ ಆಚರಿಸಲಾಗುವುದು ಎಂದು ಭರವಸೆ ನೀಡಿದ್ದರು. ಹೀಗಿ ಹೇಳಿ ಸರಿಯಾಗಿ 43 ದಿನಗಳ ಬಳಿಕ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಬಜೆಟಿನಲ್ಲಿ ಈ ಭರವಸೆ ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿರುವ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ವೃತ್ತದಲ್ಲಿ ಸರ್.ಎಂ.ವಿ.ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ನಂತರ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಮಾತನಾಡಿ, ಬ್ರಾಹ್ಮಣ ಸಮುದಾಯದ ಬೆಳವಣಿಗೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಲವಾರು ಯೋಜನೆಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ವಿಚಾರ.

ನಗರಪಾಲಿಕೆ ಚುನಾವಣೆಯಲ್ಲಿ ಬ್ರಾಹ್ಮಣ ಯುವಕರು ಸ್ಪರ್ಧಿಸಲು ಮೀಸಲಾತಿಯ ಅಡ್ಡಿಯಿದ್ದು, ಬ್ರಾಹ್ಮಣರು ಅತೀಹೆಚ್ಚು ಜನಸಂಖ್ಯೆ ಇರುವ ಬಡಾವಣೆಗಳಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿಕಲ್ಪಿಸಿ ಅವಕಾಶ ಮಾಡಿಕೊಡಬೇಕು. ಜುಲೈ 20 ರಂದು ಮೈಸೂರಿಗೆ ಆಗಮಿಸುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು.

ಇದೇ ವೇಳೆ ಜಿ.ಟಿ.ದೇವೆಗೌಡರು ಮಾತನಾಡಿ, ಬ್ರಾಹ್ಮಣ ಸಮುದಾಯದವರು ಸೂರ್ಯದೇವನಲ್ಲಿ ಸರ್ವೇ ಜನ ಸುಖಿನೋ ಭವಂತು ಎಂದು ಪ್ರಾರ್ಥಿಸುತ್ತಾರೆ. ವಿಪ್ರರು ವಿದ್ಯಾವಂತರು, ಸ್ವಾಭಿಮಾನಿಗಳು ಅದರಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಸಹ ಇದ್ದಾರೆ, ಅಂತಹವರ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿಯೇ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗಿದೆ.

ಜಿಲ್ಲಾಡಳಿತದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶಂಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಶಾಲಾಕಾಲೇಜುಗಳಲ್ಲೂ ಸಹ ಶಂಕರ ಜಯಂತಿಯನ್ನು ಆಚರಿಸಲು ವ್ಯವಸ್ಥೆ ಮಾಡಲಾಗುವುದು.
ಸರ್.ಎಂ ವಿಶ್ವೇಶ್ವರಯ್ಯನವರು ದಿವಾನರಾಗಿ ಹಳೇ ಮೈಸೂರು ಭಾಗಕ್ಕೆ ಎಲ್ಲಾ ಕ್ಷೇತ್ರಕ್ಕೂ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಮಂಡ್ಯ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಸರ್. ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರವಿದೆ ಎಂದು ಸ್ಮರಿಸಿದರು.

ವಿವಿಧ ದೇವಸ್ಥಾನಗಳ ಪುತೋಹಿತರ ಬಳಗದವರು, ಜಿ.ಟಿ.ದೇವೆಗೌಡರು, ಅವರ ಪತ್ನಿ ಶ್ರೀಮತಿ ಲಲಿತಾ ದೇವೆಗೌಡರು, ಪುತ್ರ ಹರೀಶ್ ಗೌಡರಿಗೆ ವೇದಮಂತ್ರಘೋಷದೊಂದಿಗೆ ಆಶೀರ್ವದಿಸಿದರು.

ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ನಂ.ಶ್ರೀಕಂಠಕುಮಾರ್, ಅಪೂರ್ವ ಸುರೇಶ್, ಡಿಸಿ ಮಂಜು, ನಗರಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್, ಎಂ.ಡಿ.ಪಾರ್ಥ ಸಾರಥಿ, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಶ್ರೀಕಾಂತ್ ಕಶ್ಯಪ್, ಜಯಸಿಂಹ, ಮುಳ್ಳೂರು ಗುರುಪ್ರಸಾದ್, ರಂಗನಾಥ್, ಅರುಣ್, ಕಡಕೊಳ ಜಗದೀಶ್, ಶ್ರೀನಿವಾಸ್, ಮುರಳಿ ಜೆಪಿನಗರ ಬ್ರಾಹ್ಮಣ ಸಭಾದ ಜಯರಾಂ ಶಾಸ್ತ್ರಿ, ಶಾರದದೇವಿನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಧರ ಶರ್ಮ, ಪುರೋಹಿತರಾದ ಪಣ ೀಶ್, ಪ್ರಸನ್ನ ಹೆಗ್ಡೆ, ವಿಶ್ವನಾಥ್ ಶಾಸ್ತ್ರಿ, ವಿನಿತ್ ಶರ್ಮ, ಸುಮಂತ್ ಶಾಸ್ತ್ರಿ, ಗಣೇಶ್, ಡಿಕೆ ನಾಗಭೂಷನ್ ಸೇರಿದಂತೆ ನೂರಾರು ಮಂದಿ ಈ ವೇಳೆ ಉಪಸ್ಥಿತರಿಸಿದ್ದರು

Translate »