Tag: HD Kumaraswamy

ಕಾವೇರಿ ಪ್ರಾಧಿಕಾರ, ನೀರು ನಿರ್ವಹಣಾ ಸಮಿತಿ ರಚನೆ: ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ
ಮೈಸೂರು

ಕಾವೇರಿ ಪ್ರಾಧಿಕಾರ, ನೀರು ನಿರ್ವಹಣಾ ಸಮಿತಿ ರಚನೆ: ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ

July 1, 2018

ಬೆಂಗಳೂರು: ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ನದಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಇಂದಿಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಸರ್ವ ಸಮ್ಮತ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ಪ್ರತಿಭಟನೆ ಹಾಗೂ ಕಾನೂನು ಹೋರಾಟ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಪ್ರಾಧಿಕಾರ ಜುಲೈ 2 ರಂದು ಕರೆದಿರುವ…

ಬಾದಾಮಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ
ಮೈಸೂರು

ಬಾದಾಮಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

July 1, 2018

ಬೆಂಗಳೂರು: ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಬಾದಾಮಿ ವ್ಯಾಪ್ತಿಯಲ್ಲಿ ನೀರಿನ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು,ಕೂಡಲೇ ಪಾರ್ವತಿ ಕೆರೆ,ಗಂಜಿಕೆರೆ ಹಾಗೂ ಹಿರೇಕೆರೆಗಳಿಗೆ ನೀರು ತುಂಬಿಸಿ ನೆರವಾಗುವಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಕೆರೆ ತುಂಬಿಸುವ ಯೋಜನೆಗಳಿಗೆ 12 ಕೋಟಿ ವೆಚ್ಚವಾಗಲಿದೆ ಎನ್ನುವ ಅಂದಾಜು ಪಟ್ಟಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ಸಿದ್ದರಾಮಯ್ಯ ಸ್ಥಳೀಯರ ಅಭಿಪ್ರಾಯ, ಮನವಿಗಳನ್ನೂ ಉಲ್ಲೇಖಿಸಿ ಕೆರೆ…

ಇಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಮಹತ್ವದ ಸಭೆ
ಮೈಸೂರು

ಇಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಮಹತ್ವದ ಸಭೆ

July 1, 2018

ಶಾಂತಿವನದ ಬೆಳವಣಿಗೆ ನಂತರ ಹಾಲಿ-ಮಾಜಿ ಸಿಎಂ ಮುಖಾಮುಖಿ ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುವ ಮುನ್ನಾ ದಿನ ಅಂದರೆ ನಾಳೆ(ಜು.1) ಸಂಜೆ 4.30ಕ್ಕೆ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಸದ ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಸಮಿತಿ ನೀಡಿರುವ ವರದಿಯನ್ನಾಧರಿಸಿ ಬಜೆಟ್ ರೂಪರೇಷೆಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಜೆಟ್ ಮಂಡನೆ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ…

ಪಾರ್ಲಿಮೆಂಟ್ ಎಲೆಕ್ಷನ್ ಆಗೋವರೆಗೂ ಇರ್ತಾರೆ…
ಮೈಸೂರು

ಪಾರ್ಲಿಮೆಂಟ್ ಎಲೆಕ್ಷನ್ ಆಗೋವರೆಗೂ ಇರ್ತಾರೆ…

June 27, 2018

ಮೈತ್ರಿ ಸರ್ಕಾರದ ಆಯಸ್ಸಿನ ಬಗ್ಗೆ ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕವಡೆ…! ಆಪ್ತರೊಂದಿಗಿನ ಸಿದ್ದರಾಮಯ್ಯರ ‘ಆಪ್ತ ಸಮಾಲೋಚನೆ’ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ದೋಸ್ತಿಗಳಲ್ಲಿ ಸಿಡಿಮಿಡಿ, ಡಿಸಿಎಂ ಡಾ. ಪರಮೇಶ್ವರ್ ಮಾಧ್ಯಮದ ಮುಂದೆ ಅಬ್ಬರ ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ತಾವು ಚಿಕಿತ್ಸೆ ಪಡೆಯುತ್ತಿರುವ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ತಮ್ಮ ಆಪ್ತರ ಜೊತೆ ಔಪಚಾರಿಕವಾಗಿ ಮಾತನಾಡಿರುವ ಕೆಲವು ಸಂಭಾಷಣೆಯ ವೀಡಿಯೋ ವೈರಲ್ ಆಗಿದ್ದು,…

ಬೆಳೆ ಸಾಲ ಮನ್ನಾದಿಂದ ನನಗೆ ಕಮಿಷನ್ ಸಿಗಲ್ಲ…!?
ಮೈಸೂರು

ಬೆಳೆ ಸಾಲ ಮನ್ನಾದಿಂದ ನನಗೆ ಕಮಿಷನ್ ಸಿಗಲ್ಲ…!?

June 26, 2018

ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ನೂರಕ್ಕೂ ಹೆಚ್ಚು ಶಾಸಕರು ಸೋತಿದ್ದಾರೆ. ಅವರು, ಅನುಮೋದನೆ ನೀಡಿದ ಬಜೆಟ್ ಮುಂದುವರೆಸಬೇಕೇ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ. ಹಳೆಯ ಬಜೆಟ್‍ನ್ನೇ ಮುಂದುವರೆಸಿದರೆ, ಈಗ ಆಯ್ಕೆಯಾಗಿ ಬಂದವರಿಗೆ ಹಕ್ಕುಚ್ಯುತಿಯಾಗಲ್ಲವೆ? ಯಾರಾದರೂ ಹಕ್ಕುಚ್ಯುತಿ ಮಂಡನೆ ಮಾಡಿ ದರೆ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ. ವಿಧಾನಸೌಧದ…

ಕಾವೇರಿ ನೀರು ಹಂಚಿಕೆ ವಿಚಾರ: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ
ಮೈಸೂರು

ಕಾವೇರಿ ನೀರು ಹಂಚಿಕೆ ವಿಚಾರ: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ

June 26, 2018

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಕೇಶ್ ಸಿಂಗ್, ಹೆಚ್.ಎನ್. ಪ್ರಸನ್ನ ಹೆಸರು ಶಿಫಾರಸ್ಸು ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಇಬ್ಬರು ಪ್ರತಿನಿಧಿ ಗಳ ಹೆಸರನ್ನು ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರವನ್ನು ಕಡೆಗಾಣಿಸಿ, ನಿರ್ವ ಹಣಾ ಪ್ರಾಧಿಕಾರ ಜುಲೈ 2 ರಂದು ಮೊದಲ ಸಭೆ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ತರಾತುರಿಯಾಗಿ ಈ ನೇಮಕಾತಿಯಾಗಿದೆ. ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‍ಸಿಂಗ್ ಹಾಗೂ ಕಾವೇರಿ ಜಲ ನಿಗಮದ ವ್ಯವಸ್ಥಾಪಕ…

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಕಾನೂನು ಸಮರ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ
ಮೈಸೂರು

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಕಾನೂನು ಸಮರ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ

June 24, 2018

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಮೂಲಕ ರಾಜ್ಯದ ಹಿತಕ್ಕೆ ಧಕ್ಕೆ ಆಗಿದ್ದು, ನಮ್ಮ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡಳಿಯ ರಚನಾ ಮಾರ್ಗ ಸೂಚಿಯಲ್ಲೇ ಲೋಪ-ದೋಷ ಇವೆ. ಇದನ್ನು ಸರಿಪಡಿಸುವಂತೆ ನಾನೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ, ನೀರಾವರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿರುವುದಲ್ಲದೆ, ಪತ್ರವನ್ನೂ ನೀಡಲಾಗಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿ ಸಲು ನೀರಾವರಿ…

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ

June 24, 2018

ಬೆಂಗಳೂರು: ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇಮಕ ಮಾಡದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರನ್ನು ಮೈಸೂರಿಗೆ, ಜಾವೇದ್ ಅಖ್ತರ್ ಮಂಡ್ಯಕ್ಕೆ, ಡಾ.ಜಿ.ಕಲ್ಪನಾ ಕೊಡಗು ಜಿಲ್ಲೆಗೆ, ರಾಜೇಂದ್ರ ಕುಮಾರ್ ಕಠಾರಿಯಾ ಅವ ರನ್ನು ಚಾಮರಾಜನಗರಕ್ಕೂ ನೇಮಕ ಮಾಡಿ ದ್ದಾರೆ. ಉಮಾಶಂಕರ ಅವರನ್ನು ದಾವಣಗೆರೆಗೂ, ಪಂಕಜ್ ಕುಮಾರ್ ಪಾಂಡೆ ಚಿತ್ರದುರ್ಗಕ್ಕೆ, ಬೆಂಗಳೂರು ನಗರ ಅಂಜುಂ ಪರ್ವೇಜ್, ಬೆಂಗಳೂರು ಗ್ರಾಮಾಂತರ ಡಾ.ಬಿ.ಬಸವರಾಜು, ರಾಮನಗರಕ್ಕೆ ಅಜಯ್ ಸೇಠ್ ನೇಮಕ…

ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್‍ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್
ಮಂಡ್ಯ

ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್‍ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್

June 24, 2018

ಮದ್ದೂರು: ಎಚ್.ಡಿ.ಕುಮಾರ ಸ್ವಾಮಿ ನಮ್ಮ ಸಿಎಂ ಎನ್ನುವ ಮೂಲಕ ಸಚಿವ ಜಮೀರ್ ಅಹಮದ್ ಮತ್ತು ಸಿಎಂ ಎಚ್‍ಡಿಕೆ ನಡುವಿನ ಶೀಥಲ ಸಮರಕ್ಕೆ ಅಂತ್ಯ ಹಾಡಿದ್ದಾರೆ. ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಚ್‍ಡಿಕೆ ನಮ್ಮ ಸಿಎಂ, ಜನರ ಸಿಎಂ, ಬಡವರ ಸಿಎಂ ಎಂದು ಹಾಡಿಹೊಗಳಿದರು. ಬಡ ವರಿಗೆ ಮತ್ತಷ್ಟು ಕಾರ್ಯಕ್ರಮ ನೀಡಲು ಸಿಎಂ ಕುಮಾರಸ್ವಾಮಿ ಸಿದ್ಧರಿದ್ದಾರೆ. ಬಿಪಿಎಲ್ ಪಡಿತರ ಅಕ್ಕಿಯಲ್ಲಿ ಎರಡು ಕೆಜಿ ಅಕ್ಕಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ…

ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಿ
ಮೈಸೂರು

ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಿ

June 23, 2018

ಬೆಂಗಳೂರು: ಮೈತ್ರಿ ಸರ್ಕಾರ ದಲ್ಲಿ ಬರುವ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿ ಗಳ ಸಭೆ ನಡೆಸಿದರು. ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿ ಶಾಂತಿ-ಸೌಹಾರ್ದತೆ ಕಾಪಾಡಿ ಜನಸ್ನೇಹಿಯಾಗಿರಬೇಕು. ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕು. ರೌಡಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯ ವಾಗಿ ನಿಯಂತ್ರಿಸಿ,…

1 10 11 12 13 14 19
Translate »