ಬೆಳೆ ಸಾಲ ಮನ್ನಾದಿಂದ ನನಗೆ ಕಮಿಷನ್ ಸಿಗಲ್ಲ…!?
ಮೈಸೂರು

ಬೆಳೆ ಸಾಲ ಮನ್ನಾದಿಂದ ನನಗೆ ಕಮಿಷನ್ ಸಿಗಲ್ಲ…!?

June 26, 2018
  • ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ನೂರಕ್ಕೂ ಹೆಚ್ಚು ಶಾಸಕರು ಸೋತಿದ್ದಾರೆ. ಅವರು, ಅನುಮೋದನೆ ನೀಡಿದ ಬಜೆಟ್ ಮುಂದುವರೆಸಬೇಕೇ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ. ಹಳೆಯ ಬಜೆಟ್‍ನ್ನೇ ಮುಂದುವರೆಸಿದರೆ, ಈಗ ಆಯ್ಕೆಯಾಗಿ ಬಂದವರಿಗೆ ಹಕ್ಕುಚ್ಯುತಿಯಾಗಲ್ಲವೆ? ಯಾರಾದರೂ ಹಕ್ಕುಚ್ಯುತಿ ಮಂಡನೆ ಮಾಡಿ ದರೆ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿ ದಂತೆ ಸಹಕಾರಿ ಬ್ಯಾಂಕುಗಳ ಆಡಳಿತ ಮಂಡ ಳಿಯ ಸದಸ್ಯರ ಜೊತೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಪರೋಕ್ಷವಾಗಿ ಸಿದ್ದರಾಮಯ್ಯನವರು ನಿನ್ನೆ ತಮ್ಮ ಶಾಸಕರ ಬಳಿ ಚರ್ಚೆ ಮಾಡಿದ್ದಕ್ಕೆ ಪ್ರತ್ಯುತ್ತರ ನೀಡಿ ದ್ದಾರೆ. ಬೆಳೆ ಸಾಲ ಮನ್ನಾ ಮಾಡುವು ದರಿಂದ ನನಗೆ ಯಾವುದೇ ಕಮಿಷನ್ ಸಿಗಲ್ಲ. ಸಂಕಷ್ಟದಲ್ಲಿರುವ ರೈತರನ್ನು ಋಣ ಮುಕ್ತರನ್ನಾಗಿ ಮಾಡಬೇಕೆನ್ನುವ ಉದ್ದೇಶ ದಿಂದ ಇಂತಹ ನಿರ್ಧಾರ ಕೈಗೊಂಡಿದ್ದೇನೆ. ಆದರೆ, ಹಣಕಾಸು ಇಲಾಖೆ ಸೇರಿದಂತೆ ಸಚಿವಾಲಯದ ಕೆಲವು ಕಾರ್ಯದರ್ಶಿಗಳು ಲೋಕಸಭಾ ಚುನಾವಣೆಯ ನಂತರ ಈ ಸರ್ಕಾರ ಇರುವುದಿಲ್ಲ ಎಂದು ಬಿಂಬಿಸುವು ದರ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸಾಲ ಮನ್ನಾ ಬಗ್ಗೆ ಸರ್ಕಾರ ಗ್ಯಾರಂಟಿ ನೀಡಿ, ನಂತರ ಈ ಸರ್ಕಾರ ಬದಲಾವಣೆ ಯಾದರೆ, ಅಂದು ಯಾವ ನಿರ್ಧಾರ ವಾಗುತ್ತದೆ ಎಂಬ ಚಿಂತನೆ ಬ್ಯಾಂಕ್ ಅಧಿ ಕಾರಿಗಳಲ್ಲಿ ಮೂಡಿದೆ. ಅವರಿಗೆ ಸಂಶಯ ಬೇಡ. ಸಾಲ ಮನ್ನಾಗೆ ಸರ್ಕಾರದ ವತಿ ಯಿಂದಲೇ ಖಾತರಿ ನೀಡಲಾಗುವುದು. ಖಜಾನೆಯಿಂದ ರೈತರ ಸಾಲಕ್ಕೆ ಎಷ್ಟು ಭರಿಸಲಾಗುವುದು ಅದನ್ನು ಬೇರೆ ಮೂಲ ಗಳಿಂದ ಕ್ರೋಢೀಕರಿಸುವ ಯೋಜನೆ ಸಿದ್ಧಗೊಂಡಿದೆ. ಯಾರೂ ಚಿಂತೆ ಮಾಡ ಬೇಕಾಗಿಲ್ಲ. ನಾನು ಚುನಾವಣೆಗೂ ಮುನ್ನ ಪ್ರಕಟ ಮಾಡಿದ್ದ ನಿಲುವಿಗೆ ಬದ್ಧನಾಗಿ ರುತ್ತೇನೆ. ಹಿಂದೆ ಆಡಳಿತ ನಡೆಸಿದವರು ಅಧಿಕಾರಿಗಳನ್ನು ಗದರಿಸಿ, ಬೆದರಿಸಿ, ಕೆಲಸ ಮಾಡಿಸುತ್ತಿದ್ದರು, ಆದರೆ ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಒಂದೇ ಕುಟುಂಬದವರಾಗೇ ಕೆಲಸ ಮಾಡಿಸು ವುದು ನನ್ನ ಸ್ವಭಾವ. ಹಿಂದಿನ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸ ಬಾರದು ಎಂಬ ತೀರ್ಮಾನಕ್ಕೆ ಬಂದಿ ದ್ದೇವೆ. ಬೇರೆ ಪಕ್ಷದವರು ಜನರ ಮುಂದೆ ಹೇಳುತ್ತಾರೆ. ಸಾಲ ಮನ್ನಾ ಮಾಡದಿದ್ದರೆ, ಬೀದಿಗಿಳಿಯುತ್ತೇವೆ ಎಂದು. ಇದು ಸಮ್ಮಿಶ್ರ ಸರ್ಕಾರ, ಯಾವ ರೀತಿ ಕೆಲಸ ಮಾಡಬೇಕು, ಅಧಿಕಾರಿಗಳಿಂದ ಯಾವ ರೀತಿ ಕೆಲಸ ತೆಗೆಯ ಬೇಕು ಎಂಬುದು ನನಗೆ ತಿಳಿದಿದೆ. ನಿರ್ಧಾರ ಕೈಗೊಳ್ಳುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು. ಆ ಕೆಲಸ ಮಾಡಿದ ನಂತರವೇ ಸರ್ಕಾರದ ನಿರ್ಧಾರ ಪ್ರಕಟಿಸಲಾಗುವುದು. ನನ್ನ ಪರಿಸ್ಥಿತಿ ಮತ್ತು ಹಲವಾರು ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಅವೆಲ್ಲವನ್ನು ಮೆಟ್ಟಿ ನಿಂತು ಅಧಿಕಾರದಲ್ಲಿರುವಷ್ಟು ದಿನ ಜನತೆಯ ಸೇವೆ ಮಾಡುತ್ತೇನೆ ಎಂದರು.

Translate »