Tag: Hassan

ಖಾಸಗಿ ವಾಹನ, ಟ್ಯಾಕ್ಸಿ ಚಾಲಕರ ಪ್ರತಿಭಟನೆ
ಮೈಸೂರು

ಖಾಸಗಿ ವಾಹನ, ಟ್ಯಾಕ್ಸಿ ಚಾಲಕರ ಪ್ರತಿಭಟನೆ

September 26, 2018

ಹಾಸನ: ವಾಹನವನ್ನು ನಿಲುಗಡೆ, ಡಿಎಲ್, ವಿಮೆ ಸಮಸ್ಯೆ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ವಾಹನ ಹಾಗೂ ಟ್ಯಾಕ್ಸಿ ಚಾಲಕರ ಸಂಘದಿಂದ ಪ್ರತಿಭಟಿಸಲಾಯಿತು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿದರು. ಖಾಸಗಿ ವಾಹನ ಮತ್ತು ಟ್ಯಾಕ್ಸಿ ನಿಲುಗಡೆಗೆ ನಿಲ್ದಾಣದ ಕೊರತೆ ಇದ್ದು, ಚಾಲಕರ ಪರವಾನಗಿ ಪಡೆಯಲು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಅಲವತ್ತು ಕೊಂಡ ಪ್ರತಿಭಟನಾಕಾರರು,…

ಬಡವರು, ರೈತ ಪರ ಸಿಎಂ ಕಾರ್ಯಕ್ರಮ; ಆಹಾರ ಮಣ್ಣುಪಾಲು, ಜಿಲ್ಲಾ ಕ್ರೀಡಾಂಗಣ ಪ್ರಾಸ್ಟಿಕ್‍ಮಯ
ಹಾಸನ

ಬಡವರು, ರೈತ ಪರ ಸಿಎಂ ಕಾರ್ಯಕ್ರಮ; ಆಹಾರ ಮಣ್ಣುಪಾಲು, ಜಿಲ್ಲಾ ಕ್ರೀಡಾಂಗಣ ಪ್ರಾಸ್ಟಿಕ್‍ಮಯ

September 25, 2018

ಹಾಸನ: ರೈತರು, ಬಡವರು, ಅಸಹಾಯಕರ ಪರ ಕಾಳಜಿ ವ್ಯಕ್ತಪಡಿ ಸುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದಲ್ಲೇ ಅದಕ್ಕೆ ತದ್ವಿ ರುದ್ಧವಾಗಿ ಹಸಿದವರ ಹೊಟ್ಟೆ ತಣಿಸ ಬೇಕಿದ್ದ ಆಹಾರ ಎಲ್ಲೆಂದರಲ್ಲಿ ಚೆಲ್ಲಾಡುವ ಮೂಲಕ ಮಣ್ಣುಪಾಲಾಗಿದೆ. ನಗರದಲ್ಲಿ ಏರ್ಪಡಿಸಿದ್ದ 1,650 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಡವರು, ರೈತರು ಅಸಹಾಯಕರ ಪರ ಕಾಳಜಿ ವ್ಯಕ್ತಪಡಿಸಿ ದ್ದರು. ಆದರೆ ಅದೇ ಬಡವರು, ಅಸಹಾ ಯಕರು, ಹಸಿದವರ ಹೊಟ್ಟೆ ತುಂಬಿಸ ಬೇಕಿದ್ದ ಕ್ವಿಂಟಾಲ್‍ಗಟ್ಟಲೇ ಆಹಾರ ವ್ಯರ್ಥವಾಗಿದೆ….

ದೇವರು ಕೊಟ್ಟ ಅಧಿಕಾರವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ
ಮೈಸೂರು, ಹಾಸನ

ದೇವರು ಕೊಟ್ಟ ಅಧಿಕಾರವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ

September 24, 2018

ಹಾಸನ: ನನಗೆ ಮುಖ್ಯಮಂತ್ರಿಯಾಗಿ ದೇವರು ಕೊಟ್ಟಿರುವ ಅಧಿಕಾರವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ 1,650 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯ ನಾಲ್ಕೈದು ನಾಯಕರು ಸಮ್ಮಿಶ್ರ ಸರ್ಕಾರ ಉರುಳಿಸುವ ಚಿಂತೆಯಲ್ಲಿದ್ದಾರೆ. ಇವರಿಂದ ನನ್ನ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ನನಗೆ ಎರಡನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದಾಗ ಬದುಕಿದ್ದರೆ ಅದು ಜನರ ಆಶೀರ್ವಾದದಿಂದ. ಹಾಗಾಗಿ ನಿಮ್ಮ ಸಾಲಮನ್ನಾ…

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ
ಹಾಸನ

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ

September 23, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸೆ.23ರಂದು ವಿವಿಧ ಇಲಾಖೆಗಳ ಹತ್ತಾರು ಕಾಮಗಾರಿ ಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿಸುವಂತೆ ರಾಜ್ಯ ಮಿನರಲ್ ಕಾಪೆರ್Çೀರೇಷನ್ ಲಿ. ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ.23ರಂದು ಜಿಲ್ಲೆಗೆ ಆಗಮಿಸು ತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾದಿ ಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಟ್ಟಡಗಳು…

ಸರಗಳ್ಳನ ಬಂಧನ
ಹಾಸನ

ಸರಗಳ್ಳನ ಬಂಧನ

September 23, 2018

ಬೇಲೂರು: ಸರಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪಟ್ಟಣ ಪೋಲಿಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಕುಂಬಾರಬೀದಿ ನಿವಾಸಿ ಸುನೀಲ್(20) ಬಂಧಿತ. ಪಟ್ಟಣದ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ ಈತನನ್ನು ಸಿಪಿಐ ಲೋಕೇಶ್, ಎಸ್‍ಐ ಜಗದೀಶ್ ಮತ್ತು ಸಿಬ್ಬಂದಿ ಜಮೃದ್ ಖಾನ್, ನಂದೀಶ್, ತಾಂಡವೇಶ್ವರನ್ನೊಳಗೊಂಡ ತಂಡ ಖದೀಮನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ. ಖದೀಮನಿಂದ ಅಂದಾಜು 1.80 ಲಕ್ಷ ರೂ. ಮೌಲ್ಯದ 48 ಗ್ರಾಂ. ಚಿನ್ನಾಭರಣ, ಹೀರೋ ಹೋಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
ಹಾಸನ

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

September 23, 2018

ಚನ್ನರಾಯಪಟ್ಟಣ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು(55) ಮೃತರು. ಪತ್ನಿ ಜತೆಯಲ್ಲಿ ಮಧ್ಯಾಹ್ನ ತೋಟದ ಕೆಲಸ ಮಾಡುತ್ತಿದ್ದ ವೇಳೆ ಮರದ ರೆಂಬೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ದೇವರಾಜು ಅವರ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದರು. ಹಿರೀಸಾವೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾಸನ ಹಾಲು ಒಕ್ಕೂಟಕ್ಕೆ 5.65 ಕೋಟಿ ರೂ. ಲಾಭ
ಹಾಸನ

ಹಾಸನ ಹಾಲು ಒಕ್ಕೂಟಕ್ಕೆ 5.65 ಕೋಟಿ ರೂ. ಲಾಭ

September 22, 2018

ಹಾಸನ: ಹಾಸನ ಸಹಕಾರಿ ಉತ್ಪಾದಕರ ಸಂಘಗಳ ಒಕ್ಕೂಟ ಈ ಬಾರಿ 5.65 ಕೋಟಿ ರೂ ಲಾಭಗಳಿಸಿದ್ದು, 3.92 ಕೋಟಿ ರೂ.ಗಳನ್ನು ಸದಸ್ಯ ಸಂಘಗಳಿಗೆ ಬೋನಸ್ ಮತ್ತು ಡಿವಿಡೆಂಡ್ ಪಾವತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು. ನಗರದ ಡೈರಿ ಆವರಣದಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸೇನಾ ಸಂಸ್ಥೆಗಳಿಗೆ ಸುಮಾರು 15 ಲಕ್ಷ ಲೀ. ಯುಹೆಚ್‍ಟಿ ಹಾಲನ್ನು…

ಹಾಸನಕ್ಕೆ 20 ಕೋಟಿ ಬಂಡವಾಳ ಹೂಡಿಕೆ: ಎಚ್‍ಡಿಕೆ
ಹಾಸನ

ಹಾಸನಕ್ಕೆ 20 ಕೋಟಿ ಬಂಡವಾಳ ಹೂಡಿಕೆ: ಎಚ್‍ಡಿಕೆ

September 21, 2018

ಹಾಸನ: ‘ದಸರಾಕ್ಕೂ ಮೊದಲು ಜಿಲ್ಲೆಯಲ್ಲಿ 20 ಕೋಟಿ ಬಂಡವಾಳ ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಹಿರೀಸಾವೆ ಹೋಬಳಿಯ ತೋಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ, ಚನ್ನರಾಯಪಟ್ಟಣದ ಅಮಾನಿಕೆರೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ ಕಾವೇರಿ ನೀರಾವರಿ ನಿಗಮದ ವತಿಯಿಂದ ಹಲಗೊಂಡನ ಹಳ್ಳಿ ಏತ ನೀರಾವರಿ ಯೋಜನೆ, ಚನ್ನರಾಯಪಟ್ಟಣ ಅಮಾನಿಕೆರೆ ಏತ ನೀರಾವರಿ ಯೋಜನೆ ಕಾಲುವೆಯಿಂದ 25 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು….

ದೇವರು, ಜನರ ಆಶೀರ್ವಾದದಿಂದ ಸರ್ಕಾರ ಸುಭದ್ರ
ಹಾಸನ

ದೇವರು, ಜನರ ಆಶೀರ್ವಾದದಿಂದ ಸರ್ಕಾರ ಸುಭದ್ರ

September 20, 2018

ಹಾಸನ: ದೇವರ ಅನುಗ್ರಹ, ಜನರ ಆಶೀರ್ವಾದದಿಂದ ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಹೆಚ್.ಡಿ.ಕುಮಾರ ಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದು ವರೆಯಲಿದ್ದಾರೆ ಎಂದು ಲೋಕೋಪ ಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಪುನರುಚ್ಛರಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಕ್ಷ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಸನ್ಮಾನ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ರೈತರು ಕಳೆದ ನಾಲ್ಕು ವರ್ಷ ದಲ್ಲಿ ಮಳೆ-ಬೆಳೆ…

ಜಮೀನು ಕಬಳಿಕೆ ಆಗಿದ್ದರೆ ತನಿಖೆ ಮಾಡಿಸಿಕೊಳ್ಳಲಿ
ಹಾಸನ

ಜಮೀನು ಕಬಳಿಕೆ ಆಗಿದ್ದರೆ ತನಿಖೆ ಮಾಡಿಸಿಕೊಳ್ಳಲಿ

September 20, 2018

ಹಾಸನ:  ನಾನು ಮತ್ತು ನನ್ನ ಕುಟುಂಬದವರು ಯಾರಾದರೂ ಅಕ್ರಮ ವಾಗಿ ಜಮೀನು ಕಬಳಿಕೆ ಮಾಡಿದ್ದರೆ ಯಾವ ತನಿಖೆ ಬೇಕಾದರೂ ಮಾಡಿಸಿ ಕೊಳ್ಳಲಿ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದರು. ನಗರದ ಚನ್ನಪಟ್ಟಣದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವಾಗಲಿ, ತಮ್ಮ ಕುಟುಂಬದ ಸದಸ್ಯರಾಗಲೀ ಅಕ್ರಮವಾಗಿ ಸರ್ಕಾರಿ ಜಮೀನು ಕಬಳಿಸಿದ್ದರೆ ಆ ಭೂಮಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು…

1 78 79 80 81 82 103
Translate »