Tag: Hassan

ಬೆಳೆ ಪರಿಹಾರ ವಿತರಣೆಗೆ ಸೂಚನೆ
ಹಾಸನ

ಬೆಳೆ ಪರಿಹಾರ ವಿತರಣೆಗೆ ಸೂಚನೆ

October 7, 2018

ಹಾಸನ: ಅತಿವೃಷ್ಟಿ, ಅನಾವೃಷ್ಟಿ ಯಿಂದ ಹಾನಿಗೀಡಾದ ಬೆಳೆಗಳಿಗೆ ಸೂಕ್ತ ಪರಿಹಾರ ವಿತರಿಸುವಂತೆ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೂಚಿಸಿದರು. ನಗರದ ತಾಪಂ ಕಚೇರಿಯಲ್ಲಿ ಂದು ತಾಪಂ ಅಧ್ಯಕ್ಷ ಬಿ.ಟಿ.ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ ಶಾಸಕರು, ಆಲೂಗೆಡ್ಡೆ ಬೆಳೆ ಹಾನಿಗೆ ಒಳಗಾದ ರೈತರಿಗೆ ವಿಮೆ ಪರಿಹಾರ ಮಾರ್ಗ ಒದಗಿಸು ವಂತೆ ತಿಳಿಸಿದರಲ್ಲದೆ, ಪಶುಭಾಗ್ಯ ಯೋಜನೆ ಯಡಿ ಬ್ಯಾಂಕ್‍ಗಳಲ್ಲಿ ಅರ್ಹ ಫಲಾನುಭವಿ ಗಳಿಗೆ ಶೀಘ್ರವಾಗಿ ಸಾಲ ಸೌಲಭ್ಯ ನೀಡಬೇಕು. ಜಾನುವಾರು ಸಂಖ್ಯೆಗನುಗುಣವಾಗಿ ಪಶು ವೈದ್ಯಕೀಯ ಆಸ್ಪತ್ರೆ ತೆರೆಯುವಂತೆ…

ಅದ್ಧೂರಿ ಗಣಪತಿ ಮೆರವಣಿಗೆ, ಆಕರ್ಷಿಸಿದ ಹೂವಿನ ಅಂಬಾರಿ
ಹಾಸನ

ಅದ್ಧೂರಿ ಗಣಪತಿ ಮೆರವಣಿಗೆ, ಆಕರ್ಷಿಸಿದ ಹೂವಿನ ಅಂಬಾರಿ

October 7, 2018

ಹಾಸನ: ಹಳೆ ಬಸ್ ನಿಲ್ದಾಣ ಬಳಿ ಶ್ರೀ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ 64ನೇ ವರ್ಷದ ಪೆಂಡಲ್ ಗಣಪತಿ ವಿಸರ್ಜನಾ ಮಹೋತ್ಸವ ಈ ಬಾರಿ ಸರಳವಾಗಿ ನೆರವೇರಿತ್ತಾದರೂ ಹೂವಿನ ಅಂಬಾರಿ, ಸಾಂಸ್ಕೃತಿಕ ಕಲಾ ತಂಡಗಳು ನೋಡುಗರ ಗಮನ ಸೆಳೆಯಿತು. ಪ್ರತಿವರ್ಷ ವಿವಿಧ ಕಲಾತಂಡದೊಡನೆ ಅದ್ಧೂರಿಯಾಗಿ ವಿಸರ್ಜನಾ ಮಹೋ ತ್ಸವ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕೊಡಗು ನೆರೆಸಂತ್ರಸ್ತರ ನೆರವಿಗೆ ಹಣ ನೀಡಿದ್ದರಿಂದ ವಿವಿಧ ಕಲಾತಂಡಗಳನ್ನು ರದ್ದು ಮಾಡಲಾಗಿತ್ತು. ಹಾಗಾಗಿ ಮೆರವಣಿಗೆಯಲ್ಲಿ ಅಷ್ಟೊಂದು ಸಂಭ್ರಮ ಕಂಡು ಬರಲಿಲ್ಲ. ಆದರೆ…

ಸಾರ್ವಜನಿಕರ ಹಿತಾಸಕ್ತಿಗೆ ಪತ್ರಿಕಾ ರಂಗ ಅಗತ್ಯ
ಹಾಸನ

ಸಾರ್ವಜನಿಕರ ಹಿತಾಸಕ್ತಿಗೆ ಪತ್ರಿಕಾ ರಂಗ ಅಗತ್ಯ

October 6, 2018

ಹಾಸನ: ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಪತ್ರಿಕಾ ರಂಗ ಅಗತ್ಯ ಎಂದು ನಗರಸಭೆ ಸದಸ್ಯ ವಾಸುದೇವ್ ತಿಳಿಸಿದರು. ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿದ ಅವರು, ಸಮಾಜದಲ್ಲಿ ಪತ್ರಿಕಾ ರಂಗ ಬಹುಮಖ್ಯವಾದ ಕ್ಷೇತ್ರವಾಗಿದೆ. ತಪ್ಪನ್ನು ಪ್ರದರ್ಶಿಸಿ ಎಚ್ಚರಿಸುವ ಸಮಾಜಮುಖಿ ಕೆಲಸ ಮಾಡುತ್ತಿದೆ. ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಎರಡು ವಿಭಿನ್ನ ವಾಗಿದೆ. ಟಿಆರ್‍ಪಿಗಾಗಿ ದೃಶ್ಯ ಮಾಧ್ಯಮಗಳು ಜೀವನದ ಮೇಲೆ ದುಷ್ಪರಿಣಾಮ ಬೀರುವ ಸುದ್ದಿ ಗಳನ್ನು…

ಅತಿವೃಷ್ಟಿ ಪರಿಹಾರ ಕಾಮಗಾರಿಗೆ 27.94 ಕೋಟಿ ಬಿಡುಗಡೆ
ಹಾಸನ

ಅತಿವೃಷ್ಟಿ ಪರಿಹಾರ ಕಾಮಗಾರಿಗೆ 27.94 ಕೋಟಿ ಬಿಡುಗಡೆ

October 5, 2018

ಹಾಸನ: ‘ಅತಿವೃಷ್ಟಿ ಹಾನಿ ಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾಮಗಾರಿಗಳಿಗೆ 27.94 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇನ್ನೊಂದು ವಾರದೊಳಗೆ ಕ್ರಿಯಾ ಯೋಜನೆಯನ್ನು ಇಲಾಖಾವಾರು ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅತಿವೃಷ್ಟಿ ಪರಿಹಾರ ಕುರಿತಂತೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಳೆ ಹಾನಿ ಕುರಿತು ಇಲಾಖಾ ವಾರು ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹಾಲಿ ಈಗ ಬಿಡುಗಡೆಯಾಗಿರುವ ಮೊತ್ತಕ್ಕೆ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿ…

ಶಿರಾಡಿ ಘಾಟ್‍ನಲ್ಲಿ ಆರಂಭವಾದ ಬಸ್ ಸಂಚಾರ
ಹಾಸನ

ಶಿರಾಡಿ ಘಾಟ್‍ನಲ್ಲಿ ಆರಂಭವಾದ ಬಸ್ ಸಂಚಾರ

October 4, 2018

ಹಾಸನ: ಶಿರಾಡಿ ಘಾಟ್ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದ್ದು, ಬಸ್‍ಗಳ ಸಂಚಾರ ಆರಂಭವಾಗಿದೆ. ಗಾಂಧಿ ಜಯಂತಿಯಂದು ಹಾಸನದ ಎಂಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋ ಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಬಸ್ ಆರಂಭವಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಬಸ್ ಸಂಚಾರ ಹೊರತುಪಡಿಸಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಳೆಯಿಂದ ಗುಡ್ಡ ಕುಸಿದು 2 ತಿಂಗಳಿಂದ ಬೆಂಗಳೂರು-ಮಂಗಳೂರು…

ಗಾಂಧೀಜಿ ಚಿಂತನೆ ಸಾಕಾರಗೊಳಿಸುವತ್ತ ಸರ್ಕಾರ
ಹಾಸನ

ಗಾಂಧೀಜಿ ಚಿಂತನೆ ಸಾಕಾರಗೊಳಿಸುವತ್ತ ಸರ್ಕಾರ

October 3, 2018

ಹಾಸನ: ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾನ್ ಪುರುಷ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು. ಜಿಲ್ಲಾಡಳಿತ, ವಾರ್ತಾ ಇಲಾಖೆ, ನಗರ ಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ…

ಮಕ್ಕಳಿಂದ ಅರಳಿದ ಚಿತ್ರಕಲೆ
ಹಾಸನ

ಮಕ್ಕಳಿಂದ ಅರಳಿದ ಚಿತ್ರಕಲೆ

October 1, 2018

ಹಾಸನ: ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ನಗರದ ಹಾಸ ನಾಂಬ ಕಲಾಕ್ಷೇತ್ರ ಆವರಣದಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆ, ಭಾರತ್ ಸೇವಾದಳ ಹಾಗೂ ಕಸಾಪ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಗಾಂಧೀಜಿ, ಸ್ವಾತಂತ್ರ್ಯ, ದೇಶಾಭಿಮಾನ ಮೂಡುವ ಚಿತ್ರಗಳು ಶಾಲಾ ಮಕ್ಕಳ ಕುಂಚದಿಂದ ಮೂಡಿ ಬಂದವು. ಚಿತ್ರಕಲೆ ಸ್ಪರ್ಧೆಗೆ ಹಾಸನದ ವಿವಿಧ ಶಾಲೆ ಗಳಿಂದ ಮಕ್ಕಳು ಆಗಮಿಸಿದ್ದರು. ಚಿತ್ರ ಬಿಡಿಸಲು ಒಂದೂವರೆ ಗಂಟೆ ಕಾಲಾವಕಾಶ ನೀಡಲಾಗಿತ್ತು. ಮಕ್ಕಳು ಉತ್ಸಾಹದಿಂದ ಚಿತ್ರ ಬಿಡಿಸಿ ಗಮನ ಸೆಳೆದರು. ಗಾಂಧೀಜಿ ಕುರಿತ…

ಸಕಾಲದಲ್ಲಿ ವಿಕಲಚೇತನರಿಗೆ ಸೌಲಭ್ಯ ತಲುಪಿಸಿ
ಹಾಸನ

ಸಕಾಲದಲ್ಲಿ ವಿಕಲಚೇತನರಿಗೆ ಸೌಲಭ್ಯ ತಲುಪಿಸಿ

September 27, 2018

ಹಾಸನ: ವಿಕಲಚೇತನರಿಗೆ ಕಾನೂನು ಬದ್ಧವಾಗಿ ದೊರೆಯಬೇಕಿರುವ ಎಲ್ಲಾ ಸೌಲಭ್ಯ ಗಳನ್ನು ಕಾಲಮಿತಿಯೊಳಗೆ ತಲುಪಿಸಿ ಎಂದು ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಸರ್ಕಾರಿ ಸಿಬ್ಬಂದಿ ಕೇವಲ ಯೋಜನೆಯ ಅನುಷ್ಠಾನದ ಯಾಂತ್ರಿಕ ವ್ಯಕ್ತಿಗಳಾ ಗದೇ ಮಾನವೀಯತೆ ಹೊಂದಿದ ಮನುಷ್ಯರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ವಿಕಲಚೇತನರಿಗೆ ಅಭಿವೃದ್ಧಿಗೆ ಶೇ.50ರಷ್ಟು ಅನುದಾನವನ್ನು ಮೀಸಲಿರಿಸಿ,…

3ನೇ ಮದುವೆಗೆ 2ನೇ ಪತ್ನಿ ಕೊಂದ ಪತಿರಾಯ
ಹಾಸನ

3ನೇ ಮದುವೆಗೆ 2ನೇ ಪತ್ನಿ ಕೊಂದ ಪತಿರಾಯ

September 27, 2018

ಚನ್ನರಾಯಪಟ್ಟಣ: ತಾಲೂಕಿನ ವಡ್ಡರಹಳ್ಳಿ ಜಾಕ್ವೆಲ್ ಬಳಿ ನಡೆದ ಮಹಿಳೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 3ನೇ ಮದುವೆಯಾಗಲು ಪತಿಯೇ 2ನೇ ಪತ್ನಿಯನ್ನು ಸಿನೀಮಿಯ ರೀತಿಯಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಾಲೂಕಿನ ನಂದಿಹಳ್ಳಿಯ ಸುಮಾ (26) ಹತ್ಯೆಗೀಡಾದ ಮಹಿಳೆ. ತುಮ ಕೂರು ಜಿಲ್ಲೆಯ ಶಿರಾ ಮೂಲದ ಶಿವಣ್ಣ (38) ಪತ್ನಿಯನ್ನು ಕೊಲೆಗೈದ ಪತಿ. ಬೆಂಗಳೂರಿನಲ್ಲಿರುವ ಪ್ರಸಿದ್ಧ ಆಟೋ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಮೊದಲೇ ಒಂದು ಮದುವೆಯಾಗಿ, ಮೊದಲ ಪತ್ನಿಗೆ ಇಬ್ಬರು ಮಕ್ಕಳನ್ನು ಕರುಣಿಸಿದ್ದ. ನಂತರ…

ನಾಲೆ ಇಲ್ಲದೆ ರಸ್ತೆ-ಜಮೀನಿನಲ್ಲಿ ಹರಿಯುತ್ತಿದೆ ನೀರು
ಹಾಸನ

ನಾಲೆ ಇಲ್ಲದೆ ರಸ್ತೆ-ಜಮೀನಿನಲ್ಲಿ ಹರಿಯುತ್ತಿದೆ ನೀರು

September 26, 2018

ಬೇಲೂರು:ತಾಲೂಕಿನ ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಯಗಚಿ ನೀರು ಹರಿಸುವ ಹಾಲ್ತೊರೆ ಏತ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲ ಆಗುವುದರ ಜತೆಗೆ ಹೆಚ್ಚಿನ ರೀತಿಯಲ್ಲಿ ಅನಾನುಕೂಲವೂ ಸಂಭವಿಸುತ್ತಿದೆ. ರೈತರ ಹಿತಾಸಕ್ತಿ ಮರೆತು ಯೋಜನೆ ರೂಪಿಸಿರುವುದರಿಂದ ಇಂದು ನೂರಾರು ರೈತರು ತಮ್ಮ ಭೂಮಿಯಲ್ಲಿ ಬೆಳೆದಿರುವ ಬೆಳೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದು, ನಾಲೆ ಇಲ್ಲದೆ ಹಾಲ್ತೊರೆ ಏತನೀರಾವರಿ ಯೋಜನೆಯ ನೀರು ಜಮೀನು, ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಮಲ್ಲಿಕಾರ್ಜುನಪುರ ವರೆಗೆ ನಾಲೆ: ಹಳೇಬೀಡು ಮಾದಿಹಳ್ಳಿ…

1 77 78 79 80 81 103
Translate »