ಸಕಾಲದಲ್ಲಿ ವಿಕಲಚೇತನರಿಗೆ ಸೌಲಭ್ಯ ತಲುಪಿಸಿ
ಹಾಸನ

ಸಕಾಲದಲ್ಲಿ ವಿಕಲಚೇತನರಿಗೆ ಸೌಲಭ್ಯ ತಲುಪಿಸಿ

September 27, 2018

ಹಾಸನ: ವಿಕಲಚೇತನರಿಗೆ ಕಾನೂನು ಬದ್ಧವಾಗಿ ದೊರೆಯಬೇಕಿರುವ ಎಲ್ಲಾ ಸೌಲಭ್ಯ ಗಳನ್ನು ಕಾಲಮಿತಿಯೊಳಗೆ ತಲುಪಿಸಿ ಎಂದು ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಸರ್ಕಾರಿ ಸಿಬ್ಬಂದಿ ಕೇವಲ ಯೋಜನೆಯ ಅನುಷ್ಠಾನದ ಯಾಂತ್ರಿಕ ವ್ಯಕ್ತಿಗಳಾ ಗದೇ ಮಾನವೀಯತೆ ಹೊಂದಿದ ಮನುಷ್ಯರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವಿಕಲಚೇತನರಿಗೆ ಅಭಿವೃದ್ಧಿಗೆ ಶೇ.50ರಷ್ಟು ಅನುದಾನವನ್ನು ಮೀಸಲಿರಿಸಿ, ಸಾಧನೆ, ಸಲಕರಣೆ, ಸೌಲಭ್ಯಗಳನ್ನು ವಾಸ್ತವಿಕ ಆದ್ಯತೆಗೆ ಅನುಗುಣ ವಾಗಿ ಪೂರೈಸಬೇಕು. ವಿಕಲಚೇತನರ ಸೌಲಭ್ಯ ಗಳ ಕಲ್ಪಿಸುವ ಕುರಿತು ಸರ್ಕಾರ ಸ್ಪಷ್ಟವಾಗಿ ಮಾರ್ಗ ಸೂಚಿ ಹೊರಡಿಸಿದ್ದು, ಎಲ್ಲರೂ ಅದನ್ನು ಸಮರ್ಪಕ ವಾಗಿ ಅನುಸರಿಸಬೇಕು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿರುವ ವಿಕಲಚೇತನರ ಬಗ್ಗೆ ಸರ್ವೆ ನಡೆಸಬೇಕು. ಅವರನ್ನು ವಯೋಮಿತಿ, ಶೈಕ್ಷಣಿಕ ಅರ್ಹತೆ, ದೈಹಿಕ ದೌರ್ಬಲ್ಯತೆ ಆಧಾರದ ಮೇಲೆ ವರ್ಗೀಕರಿಸಿ ಅವಶ್ಯಕತೆಗಳಿಗೆ ತಕ್ಕಂತೆ ಯೋಜನೆ ರೂಪಿಸಿ, ಸೌಲಭ್ಯ ವಿತರಿಸಿ ಎಂದು ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು.

ವಿಕಲಚೇತನರಿಗೆ ಕೇವಲ ತ್ರಿಚಕ್ರ ವಾಹನಗಳು ಮತ್ತು ಇತರ ಸಾಧನ-ಸಲಕರಣೆಗಳನ್ನು ನೀಡುವು ದಷ್ಟಕ್ಕೆ ಯೋಜನೆಗಳನ್ನು ಮಿತಿಗೊಳಿಸಿಕೊಳ್ಳಬಾರದು. ವಿಕಲಚೇತನರ ಜೀವನಮಟ್ಟ ಸುಧಾರಣೆ, ಬದುಕಿಗೆ ಅನುಕೂಲವಾಗುವ ಸೌಲಭ್ಯ ಕಲ್ಪಿಸಬೇಕು. ಅವರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ರೂಪಿಸುವತ್ತ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಆಯುಕ್ತರು ಹೇಳಿದರು.
ನಗರ ಪ್ರದೇಶಗಳಲ್ಲಿ ಪ್ರತ್ಯೇಕ ವಿಕಲಚೇತನ ಸ್ನೇಹಿ ಶೌಚಾಲಯ ನಿರ್ಮಾಣ, ವಿಕಲಚೇತ ನರಿಗೆ ಮನೆ, ಆಸ್ಪತ್ರೆ ಸೌಲಭ್ಯ ಸುಲಭವಾಗಿ ದೊರೆಯುವಂತಾಗಬೇಕು. ವರ್ಷಾಂತ್ಯದೊಳಗೆ ಎಲ್ಲಾ ಕಚೇರಿಗಳಲ್ಲಿ ರ್ಯಾಂಪ್ ವ್ಯವಸ್ಥೆ ಮಾಡಲೇ ಬೇಕು ಎಂದು ವಿ.ಎಸ್.ಬಸವರಾಜ್ ಸೂಚಿಸಿ ದರಲ್ಲದೆ, ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿಕಲಚೇತನರಿಗಾಗಿ ಸರ್ಕಾರದಿಂದ ಹತ್ತಾರು ಯೋಜನೆಗಳಿದ್ದು, ಅ ಬಗ್ಗೆ ಪೂರಕ ಪ್ರಚಾರ ನೀಡಿ, ಗ್ರಾಮಮಟ್ಟದಲ್ಲಿ ಅರಿವು ಮೂಡಿಸಿ. ನಿಗದಿಪಡಿಸಿದಷ್ಟು ಅನುದಾನ ಆ ಉದ್ದೇಶಕ್ಕೆ ಪೂರ್ಣ ವೆಚ್ಚಮಾಡುತ್ತ ಆಸಕ್ತಿ ವಹಿಸ ಬೇಕೆಂದು ತಿಳಿಸಿದರು.

ಉಪ ಆಯುಕ್ತ ಪದ್ಮನಾಭ ಮಾತನಾಡಿ, ವಿಕಲಚೇತನರಿಗೆ ಆತ್ಮಸ್ಥೈರ್ಯ ಬೆಳೆಸುವ ಕೆಲಸವಾಗಬೇಕು. ಹಾಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಸಾಮಾನ್ಯ ಶಾಲೆಗಳಲ್ಲಿ ಕಲಿಯುವ ವಿಕಲಚೇತನರ ಬಗ್ಗೆ ಶಿಕ್ಷಕರು ವಿಶೇಷ ಗಮನಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ, ಬಿ.ಆರ್. ಪೂರ್ಣಿಮಾ, ಜಿಪಂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ನಗರಸಭಾ ಆಯುಕ್ತ ಪರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾ, ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲೇಶ್ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.

Translate »