ಗಾಂಧೀಜಿ ಚಿಂತನೆ ಸಾಕಾರಗೊಳಿಸುವತ್ತ ಸರ್ಕಾರ
ಹಾಸನ

ಗಾಂಧೀಜಿ ಚಿಂತನೆ ಸಾಕಾರಗೊಳಿಸುವತ್ತ ಸರ್ಕಾರ

October 3, 2018

ಹಾಸನ: ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾನ್ ಪುರುಷ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು.

ಜಿಲ್ಲಾಡಳಿತ, ವಾರ್ತಾ ಇಲಾಖೆ, ನಗರ ಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ಅಹಿಂಸೆ, ಸತ್ಯಾಗ್ರಹ ಮತ್ತು ಹೋರಾಟ ದ ಮೂಲಕ ಜಗತ್ತನ್ನು ಗೆದ್ದ ಮಹಾನ್ ಪುರುಷ ಮಹಾತ್ಮ ಗಾಂಧೀಜಿ ಇಡೀ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ್ದಾರೆ. ಅವರ ತತ್ವಾದರ್ಶಗಳನ್ನು ನಾವು ಪಾಲಿಸೋಣ ಎಂದರು.

ಹಳ್ಳಿಗಳ ಅಭಿವೃದ್ಧಿ ಆದರೆ ದೇಶದ ಅಭಿ ವೃದ್ಧಿ ಸಾಧ್ಯ ಎಂಬುದನ್ನು ಅರಿತ ಮಹಾತ್ಮ ಗಾಂಧಿಯವರು ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿದ್ದರು. ಈ ನಿಟ್ಟಿನಲ್ಲಿ ಗ್ರಾಮಗಳ ವಿಕಾಸಕ್ಕೆ ಮುತು ವರ್ಜಿವಹಿಸಿ ಮೂಲ ಸೌಕರ್ಯ ಒದಗಿಸುವ ಜೊತೆಗೆ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡ ಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರೀತಮ್ ಜೆ.ಗೌಡ ಮಾತನಾಡಿ, ಬಡತನವನ್ನು ಕಣ್ಣಾರೆ ಕಂಡ ಮಹಾತ್ಮ ಗಾಂಧೀಜಿ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡರು. ಮಹಾತ್ಮ ಗಾಂಧೀಜಿ ದೇಶದ ಸರ್ವಾಂಗೀಣ ಹಾಗೂ ಗ್ರಾಮಗಳ ಅಭಿವೃದ್ಧಿ ಕನಸು ಕಂಡವರು. ಸ್ವಚ್ಛ ಭಾರತ ಪರಿಕಲ್ಪನೆ ಹೊಂದಿದ್ದರು ಎಂದರಲ್ಲದೆ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪಾಕಿಸ್ತಾನದ ವಿರುದ್ಧ ಹೋರಾಡಲು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದವರು. ದೇಶ ಕ್ಕೋಸ್ಕರ ತಮ್ಮನ್ನು ತಾವು ಅರ್ಪಿಸಿ ಕೊಂಡ ವರು. ಈ ಇಬ್ಬರು ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ಸ್ವಾತಂತ್ರ್ಯಕ್ಕೋಸ್ಕರ ತಮ್ಮದೇ ಆದ ಅಸ್ತ್ರ ಬಳಸಿದಂತಹ ಮಹಾತ್ಮ ಗಾಂಧೀಜಿ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹಳ್ಳಿಗಳ ಉದ್ಧಾರವಾದರೇ ದೇಶದ ಅಭಿ ವೃದ್ಧಿ ಸಾಧ್ಯ ಎಂದು ಸ್ವದೇಶಿ ವಸ್ತುಗಳ ಬಳ ಕೆಗೆ ಹೆಚ್ಚು ಒತ್ತು ನೀಡಿದ್ದರು. ಈ ನಿಟ್ಟಿನಲ್ಲಿ ಸ್ವದೇಶಿ ವಸ್ತುಗಳ ಬಳಕೆಗೆ ನಾವು ಮುಂದಾ ಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರೆ ಲ್ಲರು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ವಾರ್ತಾ ಇಲಾಖೆಯಿಂದ ಆಯೋಜಿ ಸಲಾ ಗಿದ್ದ ವೇಷಭೂಷಣ ಸ್ಪರ್ಧೆ ಕಾರ್ಯ ಕ್ರಮಕ್ಕೆ ಹೆಚ್ಚು ಮೆರಗು ತಂದಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು. ಇದೇ ವೇಳೆ ಮಹಾತ್ಮಗಾಂಧಿ ಅವರ ಕುರಿತು ವಿಶೇಷ ಸಂಚಿಕೆಗಳು, ಬಾಪು ಪುಸ್ತಕ ಬಿಡುಗಡೆಗೊಳಿಸಲಾಯಿತು. ಕೇಂದ್ರಿಯ ವಿದ್ಯಾಲಯ ಶಾಲಾ ಮಕ್ಕಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಬಿ.ಟಿ.ಸತೀಶ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೆÇಲೀಸ್ ವರಿಷ್ಠಾ ಧಿಕಾರಿ ಎನ್.ಪ್ರಕಾಶ್ ಗೌಡ, ಜಿಪಂ ಸಿಇಓ ಪುಟ್ಟಸ್ವಾಮಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ಪೆÇ್ರಬೇಷನರಿ ಐಎ ಎಸ್ ಅಧಿಕಾರಿ ಎಂ.ಪ್ರಿಯಾಂಕ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್. ಉದಯ ಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ನಾ.ಮಂಜೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರಿದ್ದರು.

ಕ್ಷೇತ್ರ ಶಾಸಕರನ್ನು ಕಿಚಾಯಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಹಾಸನ: ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡರನ್ನು ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಮಾತಿನ ಮೂಲಕ ಕಿಚಾಯಿಸಿದ ಪ್ರಸಂಗ ನಗರದಲ್ಲಿಂದು ನಡೆಯಿತು.

ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಪ್ರೀತಮ್ ಜೆ.ಗೌಡರನ್ನು ಸಚಿವ ಹೆಚ್.ಡಿ.ರೇವಣ್ಣ ಕಿಚಾಯಿಸಿದರು. ಸೆ.22ರಂದು ಹಾಸನ ದಲ್ಲಿ ಸಿಎಂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭದಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಗೈರಾಗಿದ್ದರ ಬಗ್ಗೆ ಪ್ರಸ್ತಾಪಿಸಿದ ರೇವಣ್ಣ, `ಏನ್ರೀ ಪ್ರೀತಮ್ ಗೌಡ್ರೇ ಸಿಎಂ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ನಮ್ಮ ಕೈಗೆ ಎಲ್ಲಿ ಸಿಕ್ತೀರಾ ಹೇಳಿ ನೀವು ಈಗ..! ಎಂದು ಕಿಚಾಯಿಸಿದರು. ಸರ್ ಕಾರ್ಯಕ್ರಮಕ್ಕೆ ಕರೆಯಲಿಲ್ಲವಲ್ಲ ಎನ್ನುವ ಮೂಲಕ ಶಾಸಕ ಪ್ರೀತಮ್ ಜೆ.ಗೌಡ ಸಚಿವರಿಗೆ ಟಾಂಗ್ ನೀಡಿದರು. ಇನ್ನು ಏರುಧ್ವನಿಯಲ್ಲಿ ಮಾತು ಮುಂದುವರಿಸಿದ ಸಚಿವ ರೇವಣ್ಣ, ಇವರಿಬ್ಬರ ನಡುವೆ ಹಾಜರಿದ್ದ ಡಿಸಿ ರೋಹಿಣಿ ಸಿಂಧೂರಿ ಬಳಿ ನೋಡಿ ಮೇಡಂ ನಾನೇ ಮೂರ್ನಾಲ್ಕು ಬಾರಿ ಕರೆ ಮಾಡಿದ್ದೇನೆ. ಪತ್ರ ಕೂಡಾ ಬರೆದಿದ್ದೇನೆ ಆದರೂ ಬಂದಿಲ್ಲ ಎಂದರು. ಶಾಸಕ ಪ್ರೀತಮ್ ಜೆ.ಗೌಡ ಮಾತು ಮುಂದುವರೆಸಿ ಆಹ್ವಾನ ಪತ್ರಿಕೆ ನನಗೆ ಹಿಂದಿನ ದಿನ ಬಂದು ತಲುಪಿತು.

ನಿಮ್ಮಿಂದ ನನಗೆ ಯಾವುದೇ ಫೋನ್ ಬಂದಿಲ್ಲ. ಅಲ್ಲದೆ ಅಂದು ನನಗೆ ಬೇರೊಂದೆಡೆ ಗುದ್ದಲಿ ಪೂಜೆ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ. ನೀವು ಕರೆ ಮಾಡಿದ್ದು ಈ ಹಿಂದೆ ಗುದ್ದಲಿ ಪೂಜೆಗಾಗಿಯೇ ಎಂದು ಶಾಸಕ ನಾಜೂಕಾಗಿಯೇ ಸಚಿವರಿಗೆ ತಿರುಗೇಟು ನೀಡಿದರು.

Translate »